ಬೆಂಗಳೂರು: ಕರೋನಾ ಸಾಂಕ್ರಾಮಿಕ ಕಾಲದಲ್ಲೂ ಅತ್ಯುತ್ತಮ ಕಾರ್ಯಚಟುವಟಿಕೆಗಳನ್ನು ತೋರಿಸಿದ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ – ಬೆಂಗಳೂರು ಶಾಖೆಗೆ ಈ ಬಾರಿಯ ಅತ್ಯುತ್ತಮ ಬ್ರಾಂಚಿನ ಪ್ರಶಸ್ತಿ ದೊರೆತಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಅರುಣ್ ಸಿಂಗ್ ಅವರು ಐಸಿಎಐ ಅಧ್ಯಕ್ಷರಾದ ಸಿಎ ಅತುಲ್‌ಕುಮಾರ್ ಗುಪ್ತಾ ಅವರ ಉಪಸ್ಥಿತಿಯಲ್ಲಿ ಬೆಂಗಳೂರು ಸಿಎ ಇನ್ಸಿಟ್ಯೂಟ್‌ನ ಅಧ್ಯಕ್ಷರಾದ ಸಿಎ ರವಿಂದ್ರ ಎಸ್ ಕೋರೆ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಇನ್ಸಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ – ಬೆಂಗಳೂರು ಶಾಖೆಯ ಅಧ್ಯಕ್ಷ ರವೀಂದ್ರ ಎಸ್ ಕೋರೆ ಮಾತನಾಡಿ, ಕರೋನಾ ಸಾಂಕ್ರಾಮಿಕದ ಕಾರಣ ಕಾಲದಲ್ಲೂ ಕೂಡಾ ತಂತ್ರಜ್ಞಾನದ ಸಹಯೋಗದಲ್ಲಿ ನಮ್ಮ ಶಾಖೆಯಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ವರ್ಷದಾದ್ಯಂತ ಜ್ಞಾನ ದಾಸೋಹ ಹೆಸರಿನಲ್ಲಿ ನಡೆಸಿದ ಕಾರ್ಯಕ್ರಮಗಳು ದೇಶಾದ್ಯಂತ ಹೆಸರು ಗಳಿಸುವಲ್ಲಿ ಯಶಸ್ವಿಯಾದವು.
ವಿದ್ಯಾರ್ಥಿಗಳು ಅಷ್ಟೇ ಅಲ್ಲದೆ ಚಾರ್ಟೆಡ್ ಅಕೌಂಟೆಂಟ್ ಗಳಿಗೂ ಕೂಡಾ ಜ್ಞಾನಾರ್ಜನೆಗೆ ಹಲವು ಯೋಜನೆಗಳನ್ನು ಆಯೋಜಿಸಿದ್ದೇವು. ಇದನ್ನ ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಸಾಂಕ್ರಾಮಿಕ ಸಂಧರ್ಭದಲ್ಲೂ ಇದನ್ನು ಸಾಧಿಸಲು ಸಾಧ್ಯವಾಗಿರುವುದು ನಮಗೆ ಬಹಳ ಸಂತಸ ತಂದಿದೆ ಎಂದು ಹೇಳಿದರು.