ಕಲಬುರಗಿ: ರಾಜ್ಯಸಭೆ ಸದಸ್ಯರು, ಕಾಂಗ್ರೆಸ್ ಹಿರಿಯ ನಾಯಕರು, ಮಾಜಿ ಕೇಂದ್ರ ಸಚಿವರು ಆಗಿರುವ ಡಾ. ಮಲ್ಲಿಕಾರ್ಜುನ ಖರ್ಗೆಯವರಿಗೆ 2 ದಿನಗಳ ಹಿಂದೆ ಮಧ್ಯಪ್ರದೇಶದಿಂದ ಬೆದರಿಕೆ ಕರೆ ಬಂದಿದೆ, ಈ ಬೆಳವಣಿಗೆ ಖಂಡಿಸುತ್ತೇನೆ. ಈ ಮುಂಚೆಯೂ ಖರ್ಗೆಯವರಿಗೆ ಕರೆಗಳು ಬಂದಿದ್ದಿವೆ. ಈ ಬಗ್ಗೆ ದೂರು ದಾಖಲಿಸಿದರೂ ಇಂದಿಗೂ ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕೆಲಸವಾಗಿಲ್ಲ. ಈಗಲಾದರೂ ಬೆದರಿಕೆ ಕರೆ ಮಾಡಿದವರು ಯಾರು? ಅವರು ಯಾಕೆ ಹೀಗೆ ಮಾಡುತ್ತಿದ್ದಾರೆಂಬ ಬಗ್ಗೆ ಸಂಪೂರ್ಣ, ಸಮಗ್ರ ತನಿಖೆಯಾಗಬೇಕು ಎಂದು ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು ಬೆದರಿಕೆ ಹಾಕಿದವರನ್ನು ಹುಡುಕಿ ಶಿಕ್ಷೆಗೆ ಗುರಿ ಪಡಿಸುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರ್ಕಾರಗಲು ಮಾಡಲಿ. ಬೆದರಿಕೆ ಕರೆ ಮಾಡುವುದು ಖಂಡನೀಯ ಸಂಗತಿ. ಹೇಡಿಗಳು ಈ ಕೆಲಸ ಮಾಡುತ್ತಿದಾರೆ. ಆದರೆ ಇದನ್ನು ಹಾಗೇ ಬಿಡುವಂತಿಲ್ಲ. ತನಿಖೆ ಮಾಡಿ ಅವರನ್ನು ಹುಡುಕುವ ಕೆಲಸ ಸರ್ಕಾರ ಮಾಡಲಿ ಎಂದು ಡಾ. ಅಜಯ್ ಸಿಂಗ್ ಆಗ್ರಹಿಸಿದರು.
ಇದನ್ನು ಓದಿ: ಮಲ್ಲಿಕಾರ್ಜುನ್ ಖರ್ಗೆಗೆ ಬೆದರಿಕೆ: ಶಾಸಕ ಪ್ರಿಯಾಂಕ್ ಖರ್ಗೆ ಟ್ವೀಟ್ ನಲ್ಲಿ ಉತ್ತರ
ಕೆಕೆಆರ್‍ಡಿಬೆ 576 ಕೋಟಿ ರು ಅನುದಾನ ಖೋತಾ ಆಗಿದೆ. 1, 131 ಕೋರು ಅನುದಾನ ನೀಡುವ ಬಗ್ಗೆ ಸಿಎಂ ಹೇಳಿದ್ದ್ರೂ ಅದು ಬರುತ್ತಿಲ್ಲ. ಇದೀಗ ಕೆಕೆಆರ್‍ಡಿಬಿ ಭಾರಿ ಪ್ರಮಾಣದಲ್ಲಿ ಅನುದಾನ ಖೋತಾ ಆಗುತ್ತಿದೆ. ಟೆಂಡರ್ ಆಗದೆ ಕಾಮಗಾರಿ ಆಂರಭವಾಗುತ್ತಿಲ್ಲವೆಂದು ದೂರಿದರು. ತೊಗರಿ ರೈತರ ಪೆÇ್ರೀತ್ಸಾಹ ಧನ ಬೇಡಿಕೆಗೂ ರಾಜ್ಯ ಸ್ಪಂದಿಸಲಿಲ್ಲ ಎಂದು ಬಿಜೆಪಿ ರೈತ ಪರವಾಗಿಲ್ಲ, ರೈತರ ವಿರೋಧಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ್ ಗುತ್ತೇದಾರ್. ಮಾಜಿ ವಿಧಾನ ಪರಿಷತ್ ಸದಸ್ಯ ಅಲಮಪ್ರಭು ಪಾಟೀಲ್, ಮಾಜಿ ಮಹಾಪೌರರಾದ ಶರಣು ಮೋದಿ, ಪ್ರೊ. ನಗರಾಜ್ ಜೆ, ಡಾ. ಎಮ್ ರಾಮೇಗೌಡ ಸೇರಿದಂತೆ ಮುಂತಾದವರು ಇದ್ದರು.