ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿಯಿಂದ ಮಲತಾಯಿ ಧೋರಣೆ: ಡಾ. ಅಜಯ್ ಸಿಂಗ್

0
39

ಕಲಬುರಗಿ: ಕಳೆದೊಂದು ದಶಕದಲ್ಲಿ ಕೇಂದ್ರದಿಂದ ಮಂಜೂರಾದ ಮಹತ್ವದ ಹಾಗೂ ಕಲ್ಯಾಣ ನಾಡಿನ ಪ್ರಗತಿಯ ಹೆಬ್ಬಾಗಿಲು ತೆರೆಯುವಂತಹ ಉದ್ಯೋಗ ಸೃಜನೆ, ಆರೋಗ್ಯ ಭಾಗ್ಯ ನೀಡುವಂತಹ ಯೋಜನೆಗಳು, ಮೂಲ ಸವಲತ್ತು ಒದಗಿಸುವ ಯೋಜನೆಗಳು ಹಳ್ಳ ಹಿಡಿದಿವೆ, ಕಲ್ಯಾಣ ನಾಡಿಗೆ ಕೇಂದ್ರ- ರಾಜ್ಯ ಬಿಜೆಪಿ ಸರ್ಕಾರಗಳು ಮಲತಾಯಿ ಧೋರಣೆಯಿಂದ ನೋಡುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ದೂರಿದ್ದಾರೆ.

ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ಮಂಜೂರಾದ ಯೋಜನೆಗಳಿಗೆ ಅನುದಾನವಿಲ್ಲ, ಪ್ರಸ್ತಾವನೆಗಳಲ್ಲಿದ್ದ ಯೋಜನೆಗಳ ದಿಕ್ಕು ತಪ್ಪಿದೆ, ಹಳೆÉಯ ಪ್ರಸ್ತಾವನೆಗಳನ್ನೇ ಬದಲಿಸಲಾಗಿದೆ. ಇದು ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳು ಕಲ್ಯಾಣ ನಾಡಿನ ಬಗ್ಗೆ ತೋರುತ್ತಿರುವ ಹೊಣೆಗೇಡಿತನವಾಗಿದೆ. ಬಿಜೆಪಿ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಎಡವಟ್ಟುಗಳು ಹಾಗೇ ಮುಂದುವರಿದದಿವೆ. ಇಹಂದುಳಿದ ನೆಲದ ಪ್ರಗತಿ ಅವರಿಗೆ ಬೇಕಾಗಿಲ್ಲ ಎಂದರು.

Contact Your\'s Advertisement; 9902492681

ಯೂಪಿಎ ಸರ್ಕಾರದಲ್ಲಿ ನಮ್ಮವರೇ ಆಗಿದ್ದಂತಹ ಡಾ. ಮಲ್ಲಿಕಾರ್ಜುನ ಖರ್ಗೆ ರೇಲ್ವೆ ಸಚಿವರಾಗಿದ್ದಾಗ ಕಲಬುರಗಿ ರೇಲ್ವೆ ವಿಭಾಗೀಯ ಕಚೇರಿ ಯೋಜನೆಯನ್ನು 2013 ರಲ್ಲಿ ಕೊಡುಗೆಯಾಗಿ ಕೊಟ್ಟರೂ ಇಂದಿಗೂ ಸದರಿ ಯೋಜನೆ ಕಡತ ರೇಲ್ವೆ ಸಚಿವಾಲಯದಲ್ಲಿ ಧೂಳು ತಿನ್ನುತ್ತಿದೆ. ಯೂಪಿಎ ಸರ್ಕಾರದಲ್ಲೇ ಕಲಬುರಗಿಗೆ ದೊರಕಿರುವ ಮಹತ್ವದ ಮ್ತತೊಂದು ಯೋಜನೆ ಎಂದರೆ ರಾಷ್ಟ್ರೀಯ ಉತ್ಪಾದನೆ ಹಾಗೂ ಹೂಡಿಕೆ ವಲಯ ನಿಮ್ಜ್. ಕಲಬುರಗಿ ಜೊತೆಗೇ ತುಮಕೂರಿಗೂ ಸದರಿ ಯೋಜನೆ ದೊರಕಿತ್ತು, ಅಲ್ಲೀಗ ಯೋಜನೆ ಕಾರ್ಯಗತಗೊಂಡು ವರ್ಷಗಲೇ ಕಲೆದಿವೆ, ಕಲಬುರಗಿ ನಿಮ್ಜ್ ಮಲಗಿದೆ ಎಂದರು.

ದೇಶದಲ್ಲಿರುವ ಎಲ್ಲಾ ಇಎಸ್‍ಐಸಿ ಮೆಡಿಕಲ್ ಕಾಲೇಜು- ಆಸ್ಪತ್ರೆಗಳನ್ನೇ ಮೇಲ್ದರ್ಜೆಗೇರಿಸಿ ಏಮ್ಸ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕೆಂಬ ಪ್ರಸ್ತಾವನೆಯಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಪ್ರಸ್ಸಾವನೆ ಸಲ್ಲಿಸುತ್ತ ಕಲಬುರಗಿ ಇಎಸ್‍ಐಸಿಗೆ ಏಮ್ಸ್ ಆಗಿ ಪರಿವರ್ತಿಸುವಂತೆ ಕೇಂದ್ರಕ್ಕೆ ಕೋರಿದ್ದರೂ ಇದೀಗ ಕೈ ಬಿಡಲಾಗಿದೆ.  ಕೇಂದ್ರೀಯ ವಿವಿ ಸಿಓಇ (ಸೆಂಟರ್ ಆಫ್ ಎಕ್ಸಲನ್ಸ್) ಬೆಂಗಳೂರಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಇವೆಲ್ಲವೂ ನಮ್ಮ ಭಾಗಕ್ಕಾಗುತ್ತಿರುವ ಅನ್ಯಾಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಗದೇವ್ ಗುತ್ತೇದಾರ್. ಮಾಜಿ ವಿಧಾನ ಪರಿಷತ್ ಸದಸ್ಯ ಅಲಮಪ್ರಭು ಪಾಟೀಲ್, ಮಾಜಿ ಮಹಾಪೌರರಾದ ಶರಣು ಮೋದಿ, ಪ್ರೊ. ನಗರಾಜ್ ಜೆ, ಡಾ. ಎಮ್ ರಾಮೇಗೌಡ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here