ಯುವ ಸಬಲೀಕರಣ ನಿಗಮ ಸ್ಥಾಪನೆಗಾಗಿ ‘ಯುವ ಸರಪಳಿ

0
35

ಕಲಬುರಗಿ: ಯುವಜನರ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯದಲ್ಲಿ ಯುವಜನ ಸಬಲೀಕರಣ ನಿಗಮ ಸ್ಥಾಪಿಸಬೇಕೆಂದು ಸರ್ಕಾರಕ್ಕೆ ಡಾ. ರಝಾಕ್ ಉಸ್ತಾದ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರಾಮ ಮಂದಿರ ವೃತ್ತದಲ್ಲಿ ಯುವ ಮುನ್ನಡೆ ತಂಡದ ಯುವಜನರು ನಿರ್ಮಿಸಿದ ‘ಯುವ ಸರಪಳಿ’ಗೆ ಡೊಳ್ಳು ಬಾರಿಸುವುದರ ಮೂಲಕ ಸಾಂಕೇತಿಕ ಚಾಲನೆ ನೀಡದರು.

Contact Your\'s Advertisement; 9902492681

ಹೈ.ಕ ಭಾಗದ ಯುವಜನರು ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉದ್ಯೋಗ ಹುಡುಕಿ ಬೆಂಗಳೂರು, ಪುಣೆ, ಸೊಲ್ಲಾಪುರ, ಹೈದರಾಬಾದ್ ಮುಂಬೈನಂಥ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಯುವಜನರಲ್ಲಿ ಸಾಕಷ್ಟು ಪ್ರತಿಭೆ ಮತ್ತು ಸಾಮರ್ಥ್ಯವಿದ್ದಾಗಲೂ ಅವರಿಗೆ ಸಮರ್ಪಕ ಮಾರ್ಗದರ್ಶನದ ಕೊರತೆಯಿಂದ ಅವರ ಸಾಮರ್ಥ್ಯ ಪೋಲಾಗುತ್ತಿದೆ ಎಂದು ವಿಷಾಧಿಸಿದರು.

ರಾಜ್ಯ ಸರ್ಕಾರ ಯುವಜನ ಸಬಲೀಕರಣ ನಿಗಮ ಸ್ಥಾಪಿಸಬೇಕು. ಮತ್ತು ಸಬಲೀಕರಣದಲ್ಲಿ ಯುವಜನರಿಗೆ ಔದ್ಯೋಗಿಕ ತರಬೇತಿ ಮತ್ತು ಶಿಷ್ಯವೇತನಗಳನ್ನು ಕೊಡಬೇಕು. ಸರ್ಕಾರ ಇದಕ್ಕೆ ಸಮರ್ಪಕ ಬಜೆಟ್ ಕೂಡ ಮಂಡನೆ ಮಾಡಬೇಕು. ನಿಗಮ ಎನ್ನುವುದೊಂದು ಚಿಕ್ಕ ಹೆಜ್ಜೆ ಆದರೂ ಆ ಚಿಕ್ಕ ಹೆಜ್ಜೆಯೂ ದೃಢ ಹೆಜ್ಜೆ ಆಗಲಿ. ನಂತರ ಇಂತಹ ನೂರಾರು ಹೆಜ್ಜೆಗಳನ್ನು ಸರ್ಕಾರ ಯುವಜನರ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ನಾನೂ ಸಹ ಯುವಾಂದೋಲನದ ಭಾಗವಾಗುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು.

ಸಂವಾದ ಯುವ ಮುನ್ನಡೆ ತಂಡದ ಯುವಜನರು ಯುವಜ‌ನ ಸಬಲೀಕರಣ ನಿಗಮ ಸ್ಥಾಪಿಸುವಂತೆ ಘೋಷಣೆಗಳನ್ನು ಕೂಗಿದರು.

“ಏಳಿ ಕೇಳಿ ಯುವಜನರೇ ಏಳಿ, ನಮ್ಮ ಹಕ್ಕನ್ನು ಕೇಳುವ, ನಮ್ಮ ಆಯ್ಕೆಯ ಹೇಳುವ” ಎಂದು ಹಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಯುವ ಸರಪಳಿ ನಂತರ ಡೊಳ್ಳು ಮತ್ತು ಹಲಿಗೆ ಬಾರಿಸುವುದರ ಮುಖಾಂತರ ಶ್ರೀ ಶಿವಶರಣ ಹರಳಯ್ಯ ಸಾಂಸ್ಕೃತಿಕ ಭವನದೆಡೆಗೆ ಮೆರವಣಿಗೆ ಮಾಡಿದರು.

‘ಯುವ ಸರಪಳಿ’ ನಿರ್ಮಾಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಯುವ ಮುನ್ನಡೆ ತಂಡದ ಸದಸ್ಯರು, ಸಂವಾದ ಸಂಸ್ಥೆಯ ಕಾರ್ಯಕರ್ತ ದೇವರಾಜ ಪಾಟೀಲ ಅವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here