ಕಲಬುರಗಿ: ಸಚಿತ ಸೇವಾಲಾಲ್ ಮಹಾರಾಜರು ಸಮ ಸಮಾಜ ನಿರ್ಮಾಣದ ಕನಸುಗಳೋಂದಿಗೆ ಧಾರ್ಮಿಕ ಸ್ಮಧಾರಣೆ ಕೈಗೊಂಡು ಹಿಂದುಳಿದ ಉಜನರ ಅಭಿವೃದ್ಧಿಗೆ ಸೃಮಿಸಿದ್ದರು. ಸೇವಾಲಾಲ್ ಮಹಾರಾಜರು ಶ್ರೇಷ್ಟ ಸಮಾಜ ಸುಧಾರಕರಲ್ಲಿ ಒಬ್ಬರಾಗಿ ಸಮಾಜವನ್ನು ಪರಿವರ್ತನೆಗೊಳಿಸಿದರು ಎಚಿದು ಅನನ್ಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಲಯದ ಪ್ರಾಂಶುಪಾಲ ಶರಣಪ್ಪ ಬಿ.ಹೂನಗೇಜೀ (ಪೂಜಾರಿ) ಅವರು ಹೇಳಿದರು.
ಇದನ್ನೂ ಸಹ ಓದಿ: ಮದುವೆಗೆ ವಿಳಂಬ: ಇಬ್ಬರು ಯುವ ಪ್ರೇಮಿಗಳ ಆತ್ಮಹತ್ಯೆ
ನಗರದ ಅನನ್ಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹರಪ್ಪ ನಾಗರಿಕತೆಯಿಂದ ಬೆಳೆದು ಬಂದ ಬಂಜಾರರು ಸಾವಿರಾರು ವರ್ಷಗಳಿಂದ ಗ್ರಾಮ, ನಗರ ಜೀವನಗಳಿಂದ ದೂರವಿದ್ದು, ಅಜ್ಞಾನ, ಅಂಧಕಾರಗಳಿಂದ ಅರಣ್ಯವಾಸಿಗಳಾಗಿ ಜೀವನ ನಡೆಸುತ್ತಿದ್ದ ಇವರಿಗೆ ಶ್ರೀ ಸೇವಾ ಲಾಲ್ ಮಹಾರಾಜರ ಜನನದಿಂದ ಮುಕ್ತಿಯ ಮೇಟ್ಟಿಲಾಯಿತು. ಬಂಜಾರರು ಈ ದೈವ ಪುರುಷನನ್ನು “ಮೋತಿವಾಳೋ” “ಲಾಲ್ ಮೋತಿ” ಎಂದು ಕರೆಯುತ್ತರೆ ಎಂದರು.
ಬುದ್ಧ, ಬಸವ,ಕಬೀರ, ಗುರು ನಾನಕ್ ಮುಂತಾದ ಧಾರ್ಮಿಕ ಮಾನವತವಾದಿಗಳ ಮಧ್ಯೆ ಒಬ್ಬ ಸಾಮಾನ್ಯ ದನಗಳನ್ನು ಮೇಯಿಸುತ್ತ ದನಗಾಹಿ ಗೋಪಾಲನಾಗಿದ್ದ ಸೇವಾಲಾಲ್ ತಮ್ಮ ಜೀವನನುಭವದ ಮೂಲಕ ಗೌರಯುತ ಮಾತುಗಳಲ್ಲಿ ಸತ್ಯ, ಅಹಿಂಸಾ ಮಾರ್ಗಗಳನ್ನು ಪ್ರಕಾಶಗೋಳಿಸುವ ನಿಟ್ಟಿನಲ್ಲಿ ತಮ್ಮ ಬೋಧನೆಯನ್ನು ನಡೆಸಿದರು ಎಚಿದರು.
ಇದನ್ನೂ ಸಹ ಓದಿ: ತೊಗರಿ ಬೆಳೆಗಾರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಸರಪಳಿ ಪ್ರತಿಭಟನೆ
ಕಾಲೇಜಿನ ಸಿಬ್ಬಂದಿಗಳಾದ ಗೌರಿ ಕುಲಕರ್ಣಿ, ರಾಜೇಶ್ವರಿ, ಸುಧಾ, ರೇಣುಕಾ, ಇಂದುಮತಿ, ಸ್ಮಜಾv, ಭವಾನಿ, ಕಾಲೇಜಿನ ವಿದ್ಯಾರ್ಥಿಗಳಾದ ಪವನ್, ಆಕಾಶ್, ಗೀತಾ, ಪ್ರಜಾ, ಶಿವರಾಜ್ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು.