ಸುರಪುರ: ಕರ್ನಾಟಕ ರಕ್ಷಣಾ ವೇದಿಕೆಯ (ಡಾ:ಚಲಪತಿಗೌಡ ಬಣ) ತಾಲೂಕು ಅಧ್ಯಕ್ಷರನ್ನಾಗಿ ಮೌನೇಶ ಆರ್.ಬೋಯಿಯವರನ್ನು ನೇಮಕಗೊಳಿಸಿರುವುದಾಗಿ ವೇದಿಕೆ ಜಿಲ್ಲಾಧ್ಯಕ್ಷ ಶಿವಮೋನಯ್ಯ ಎಲ್.ಡಿ.ನಾಯಕ ತಿಳಿಸಿದರು.
ನಗರದ ಟೈಲರ್ ಮಂಜಿಲ್ನಲ್ಲಿ ನಡೆದ ಸಭೆಯಲ್ಲಿ ಘೋಷಣೆ ಮಾಡಿ ಮಾತನಾಡಿ,ಮೌನೇಶ ಆರ್.ಬೋಯಿಯವರು ಕಳೆದ ಅನೇಕ ವರ್ಷಗಳಿಂದ ನಾಡು ನುಡಿಯ ಸೇವೆಯನ್ನು ಮಾಡುತ್ತ ಬರುತ್ತಿರುವ ಅವರ ಕನ್ನಡಾಭಿಮಾನವನ್ನು ಕಂಡು ತಾಲೂಕು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ,ಮುಂದೆ ತಾಲೂಕಿನಾದ್ಯಂತ ಸಂಘಟನೆಯನ್ನು ಬೆಳೆಸುವ ಜೊತೆಗೆ ನಾಡು ನುಡಿ ಜಲ ಗಡಿಗೆ ಧಕ್ಕೆ ಬಂದಾಹ ಹೋರಾಟವನ್ನು ರೂಪಿಸುವ ಜೊತೆಗೆ ಸಂಘಟನೆಯ ಸಿದ್ಧಾಂತಗಳಿಗೆ ಧಕ್ಕೆ ಬರದಂತೆ ಕೆಲಸ ಮಾಡುವಂತೆ ಕಿವಿಮಾತು ಹೇಳಿದರು.
ಸುರಪುರದಲ್ಲಿ ರಾಜಕೀಯ ನಾಯಕರುಗಳ ಮದ್ಯೆ ವಾಕ್ಸಮರ
ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಗೌರವಾಧಕ್ಷರನ್ನಾಗಿ ಇಮಾಮಸಾಬ್ ಅರಕೇರಿ ಹಾಗು ಕಾರ್ಯದರ್ಶಿಯನ್ನಾಗಿ ಬಸವರಾಜ ಎಂ.ವೈ ಕವಡಿಮಟ್ಟಿ ಸಹಕಾರ್ಯದರ್ಶಿಯನ್ನಾಗಿ ರಮೇಶ ಹಸನಾಪುರ ಅವರನ್ನು ನೇಮಕಗೊಳಿಸಿ ಘೋಷಿಸಲಾಯಿತು. ಅಲ್ಲದೆ ನೂತನ ತಾಲೂಕು ಅಧ್ಯಕ್ಷರಾಗಿ ನೇಮಕಗೊಂಡ ಮೌನೇಶ ಆರ್.ಬೋಯಿಯವರನ್ನು ಸನ್ಮಾನಿಸಿ ಆದೇಶ ಪತ್ರ ನೀಡಿ ಗೌರವಿಸಲಾಯಿತು.