ಸುರಪುರದಲ್ಲಿ ರಾಜಕೀಯ ನಾಯಕರುಗಳ ಮದ್ಯೆ ವಾಕ್ಸಮರ

1
759

ಸುರಪುರ: ಹುಣಸಗಿ ಮತ್ತು ಸುರಪುರ ತಾಲೂಕುಗಳಲ್ಲಿ ಪೋಲಿಸ್ ಇಲಾಖೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಕಾರ್ಯಕರ್ತರನ್ನೇ ಗುರಿಯಾಗಿಟ್ಟುಕೊಂಡು ಪ್ರಕರಣಗಳನ್ನು ದಾಖಲಿಸಿ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿದ್ದು ಈ ಬಗ್ಗೆ ಧ್ವನಿ ಎತ್ತುವುದು ತಪ್ಪೇ ಇದು ರಾಜಕೀಯ ಗಿಮಿಕ್ ಆಗುತ್ತದೆಯೇ? ಎಂದು ಕಾಂಗ್ರೆಸ್ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಪ್ರಶ್ನಿಸಿದ್ದಾರೆ.

ನಾಮಫಲಕ ತೆರವಿಗಾಗಿ ಸುರಪುರ ತಹಸೀಲ್ ಮುಂದೆ ಸತ್ಯಾಗ್ರಹ

Contact Your\'s Advertisement; 9902492681

ಶಾಸಕ ನರಸಿಂಹ ನಾಯಕ (ರಾಜುಗೌಡ) ಕಳೆದ ಎರಡು ದಿನಗಳ ಹಿಂದೆ ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದರ ಕುರಿತು ಇಂದು ಶಾಸಕ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿರುವ ರಾಜಾ ವೇಣುಗೋಪಾಲ ನಾಯಕ ಅವರು, ನಮ್ಮ ಮನೆತನದವರಿಗೆ ರಾಜಕೀಯ ಗಿಮಿಕ್ ಎಂಬುದೇ ಗೊತ್ತಿಲ್ಲಾ, ನಮ್ಮ ತಾತನವರ ಕಾಲದಿಂದಲೂ ನಮ್ಮದು ಏನಿದ್ದರೂ ನೇರಾನೇರ ರಾಜಕೀಯ ಹೋರಾಟ ಮಾಡುತ್ತಾ ಬಂದಿದ್ದು ಕ್ಷೇತ್ರದ ಜನತೆಗೆ ರಾಜಕೀಯ ಗಿಮಿಕ್ ಯಾರು ಮಾಡುತ್ತಾರೆ ಎಂಬುದು ಚೆನ್ನಾಗಿ ಗೊತ್ತಿದೆ, ಕ್ಷೇತ್ರದಲ್ಲಿ ನಮ್ಮನ್ನು ನಂಬಿದವರನ್ನು ಹಾಗೂ ಪಕ್ಷದ ಕಾರ್ಯಕರ್ತರಿಗೆ ತೊಂದರೆಯಾದಲ್ಲಿ ಅವರ ಪರವಾಗಿ ನಮ್ಮ ತಂದೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರವರು ಹಾಗೂ ನಮ್ಮ ಎಲ್ಲ ಸಹೋದರರು ತೊಂದರೆಗೊಳ ಗಾದವರ ಪರವಾಗಿ ಧ್ವನಿ ಎತ್ತುವ ಮೂಲಕ ಅವರನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ಭಾವಿಸಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಲದೆ ಪೋಲಿಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಜಗಳ ತರುವ ಮೂಲಕ ಅಶಾಂತಿ ವಾತಾವರಣ ಹುಟ್ಟಿಸಲಾಗುತ್ತಿದ್ದು ಆದರೂ ಕೂಡಾ ಸ್ಥಳಿಯ ಶಾಸಕರು ಪತ್ರಿಕೆಗಳಲ್ಲಿ ಜಗಳವಾಡಬೇಡಿ ಎಂದು ಬಣ್ಣದ ಮಾತುಗಳನ್ನಾಡುತ್ತಿರುವುದು ವಿಪರ್ಯಾಸ ಎಂದಿರುವ ಅವರು, ನಮ್ಮ ಪಕ್ಷದ ಕಾರ್ಯಕರ್ತರಿಗೆ ಎಲ್ಲಿಯಾದರು ತೊಂದರೆಯಾದರೆ ನೋಡಿ ಸುಮ್ಮನೆ ಕುಳಿತುಕೊಳ್ಳುವದಿಲ್ಲ ಜನರ ಪರವಾಗಿ ಹೋರಾಟವನ್ನು ನಾವು ಕೈಗೊಳ್ಳುತ್ತೇವೆ.

ನಿರುದ್ಯೋಗ ಸಮಸ್ಯೆ: ಎಐಡಿವೈಒ ಸಹಿ ಸಂಗ್ರಹ 18 ರಂದು

ಕೊಡೇಕಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಿರುವ ಗೆದ್ದಲಮರಿ ತಾಂಡಾದ ವ್ಯಕ್ತಿಯು ರೌಡಿಶೀಟರ್ ಎಂದು ಶಾಸಕರು ಹೇಳಿದ್ದು ಅವರನ್ನು ಬಂಧಿಸಿ ವಿಚಾರಣೆಗೆ ಕರೆತರುವ ಅವಶ್ಯವಿತ್ತೇ ತಾಲೂಕಿನಲ್ಲಿ ಯಾವ ಯಾವ ಪಕ್ಷಗಳಲ್ಲಿ ರೌಡಿಶೀಟರ್‌ಗಳು ಇದ್ದಾರೆ ಅವರ ವಿಚಾರಣೆ ಹೇಗೆ ನಡೆಯುತ್ತಿದೆ? ಪೋಲಿಸರು ಎಷ್ಟು ಜನ ರೌಡಿ ಶೀಟರ್‌ಗಳನ್ನು ಕರೆಯಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂಬುದು ಕೂಡಾ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದಿದ್ದಾರೆ.

ಇನ್ನು ಅಡ್ಡೊಡಗಿ ಗ್ರಾಮದಲ್ಲಿ ವಶಪಡಿಸಿಕೊಂಡ ಮರಳಿಗೂ ಕೊಡೇಕಲ್‌ನಲ್ಲಿ ನಾನು ಹಾಗೂ ನನ್ನ ತಂದೆಯವರು ಕೈಗೊಂಡ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ನಮ್ಮ ಹೋರಾಟಕ್ಕೆ ಶಾಸಕರು ಹೆದರಿ ಸಂಬಂಧನೆ ಇಲ್ಲದ ವಿಷಯವನ್ನು ಪ್ರಸ್ತಾಪಿಸಿ ಹೇಳಿಕೆ ನೀಡಿದ್ದು ಅವರ ಸ್ಥಾನಕ್ಕೆ ಶೋಭೆ ತರವಂತದಲ್ಲಾ ಎಂದು ಸ್ಪಷ್ಟಪಡಿಸಿದ್ದಾರೆ.

ಎಸಿಸಿ ಕಾರ್ಖಾನೆ ವಿರುದ್ಧ ಸಿಡಿದೆದ್ದ ಲಾರಿ-ಟ್ರಾನ್ಸ್‌ಪೋರ್ಟ್ ಮಾಲೀಕರು: ಸಿಮೆಂಟ್ ಸಾಗಾಣಿಕೆ ತಡೆಯುವ ಎಚ್ಚರಿಕೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here