ಕಲಬುರಗಿ: ಪಂಚಾಯಿತಿರಾಜ್ ಇಂಜಿನಿಯರಿಂಗ್ ಕಚೇರಿಯಲ್ಲಿನ ಅಧಿಕಾರಿ ಹಾಗೂ ಪ್ರಭಾರಿ ಲೆಕ್ಕ ಪರಿಶೋಧಕ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಜಿ.ಎಂ. ಬಡಿಗೇರ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ್ ಅವರು ಕಾಮಗಾರಿಗಳ ಕುರಿತು ಜರುಗಿದ ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ಪಂಚಾಯಿತಿರಾಜ್ ಇಂಜಿನಿಯರಿಂಗ್ ಕಚೇರಿಯಲ್ಲಿನ ಅಧಿಕಾರಿ ಓರ್ವರಿಗೆ ಛೀಮಾರಿ ಹಾಕಿ ಕರ್ತವ್ಯದಿಂದ ಬಿಡುಗಡೆಗೊಳಿಸಲು ಸೂಚಿಸಿದ್ದರೂ ಸಹ ಇಲ್ಲಿಯವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಲೆಕ್ಕ ಪರಿಶೋಧಕ ಹೆಚ್ಚುವರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿಗೆ ಬರದೇ ಮನೆಗೆ ಕಡತಗಳನ್ನು ತರಿಸಿಕೊಂಡು ತಮಗೆ ಇಷ್ಟ ಬಂದ ಹಾಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೂಲ ಹುದ್ದೆ ಪಿಎಂಆರ್‌ವೈ ವಿಭಾಗದಲ್ಲಿದ್ದು, ಅವರು ಕಚೇರಿಗೆ ಬರದೇ ಇರುವುದರಿಂದ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ನಿಷ್ಠಾವಂತ ಅಧಿಕಾರಿಯನ್ನು ಪೂರ್ಣಾವಧಿಗೆ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಶಾದಿಮಹಲ್ ಯೋಜನೆಯಡಿ ಭ್ರಷ್ಟಾಚಾರ: ಉನ್ನತ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಕಚೇರಿಯಲ್ಲಿ ತಾಂತ್ರಿಕ ಶಾಖೆ ಮತ್ತು ಲೆಕ್ಕ ಪರಿಶೀಲನೆ ಶಾಖೆಯಲ್ಲಿ ಪ್ರತಿಯೊಬ್ಬ ಸಿಬ್ಬಂದಿಗಳು ಅಧೀನದಲ್ಲಿ ಒಬ್ಬರು ಹೊರಗುತ್ತಿಗೆ ಆಧಾರದ ಮೇಲೆ ಸಹಾಯಕರಾಗಿ ನೇಮಿಸಿಕೊಂಡಿದ್ದಾರೆ. ಇದರಿಂದಾಗಿ ಖಾಯಂ ನೌಕರರು ಯಾರೂ ಸರಿಯಾದ ಸಮಯಕ್ಕೆ ಬರುವುದಿಲ್ಲ. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಶಿವಶಂಕರ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್ ಕೆರಮಗಿ, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಕಣಮೇಶ್ವರ್, ತಾಲ್ಲೂಕು ಅಧ್ಯಕ್ಷ ಮೌನೇಶ್ ಬಡಿಗೇರ್, ಗುರಣ್ಣ ಐನಾಪೂರ್ ಮುಂತಾದವರು ಉಪಸ್ಥಿತರಿದ್ದರು.
ಯುನಾನಿ ವೈದ್ಯ ವಿಜ್ಞಾನಕ್ಕೆ ಹಕೀಂ ಅಜ್ಮಲ್ ಖಾನ್ ಕೊಡುಗೆ ಅಪಾರ: ಡಾ. ಸಯ್ಯದಾ ಅತರ್