ಕಾಯಕ, ದಾಸೋಹ ಶರಣರು ಜಗತ್ತಿಗೆ ಕೊಟ್ಟ ಬಹುದೊಡ್ಡ ಕೊಡುಗೆ: ಡಾ. ಶಾಂತಾ ಅಷ್ಟಗಿ

1
62

ಕಮಲಾಪುರ: 12ನೇ ಶತಮಾನ ಅನೇಕ ರೀತಿಯ ಬದಲಾವಣೆ ತಂದ ಕಾಲ ಶತಮಾನಗಳಿಂದ ಜಡಗಟ್ಟಿ ಹೋಗಿದ್ದ ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದ ಜನರ ದಾಸ್ಯದ ಸಂಕೋಲೆಯನ್ನು ಕಳಚಿ ಸಮಾನತೆಯನ್ನು ಕೊಡುವುದರ ಮೂಲಕ ಕಾಯಕ ಮತ್ತು ದಾಸೋಹದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಶರಣರಿಗೆ ಸಲ್ಲುತ್ತದೆ.ಶರಣರು ಜಗತ್ತಿಗೆ ಕೊಟ್ಟ ಬಹುದೊಡ್ಡ ಕೊಡುಗೆಯೆಂದರೆ ಕಾಯಕ ಮತ್ತು ದಾಸೋಹಎಂದರು.

ತಾಲೂಕಿನ ಡೊ0ಗರಗಾoವ್  ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಲಿಂಗೈಕ್ಯ ಶ್ರೀಮತಿ ಶರಣಮ್ಮ ವೀರಭದ್ರಪ್ಪ ಅಕ್ಕೋನಿ  ಸ್ಮಾರಕ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಹಾಗಾoವ್ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಶಾಂತಾ  ಅಷ್ಟಗಿ ಅವರು ಮಾತನಾಡುತ್ತಾ ಕಾಯಕವೆಂದರೆ ಶಾರೀರಿಕ ಶ್ರಮ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಶ್ರಮವಹಿಸಿ ದುಡಿಯಬೇಕು ಯಾವುದೇ ಕಾಯಕ ಇದ್ದರೂ ಅದನ್ನು ಸತ್ಯಶುದ್ಧ ಮನಸ್ಸಿಂದ ಮಾಡಬೇಕು ಎನ್ನುವುದು.

Contact Your\'s Advertisement; 9902492681

ಶರಣರ ಅಭಿಪ್ರಾಯದಲ್ಲಿ ಮೇಲು-ಕೀಳು ಎಂಬ ಭೇದವಿಲ್ಲ ಎಂದು ಹೇಳಿದ ಅವರು  ಶರಣರು ತಮ್ಮ ಹೆಸರಿನ ಜೊತೆಯಲ್ಲಿ ಕಾಯಕವನ್ನು  ಸೂಚಿಸಿ ಅಭಿಮಾನ ಪಟ್ಟುಕೊಂಡರು.ಅಲ್ಲದೆ ಸತ್ಯಶುದ್ಧ ಕಾಯಕದಿಂದ ಬಂದ ಸಂಪತ್ತು ಇಡೀ ಸಮಾಜಕ್ಕೆ ಅರ್ಪಿತವಾಗಿರುವುದನ್ನು ದಾಸೋಹ ಎಂದು  ದಾಸೋಹವನ್ನು ಅಡಗಿಸಿ ವಿನಮ್ರಭಾವ ಮೂಡಿಸುತ್ತದೆ.ಸರ್ವ ಸಮರ್ಪಣಾ ಮನೋಭಾವದಿಂದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು ಎನ್ನುವುದು ಮುಖ್ಯವಾಗುತ್ತದೆ, ಸ್ವಯoರ್ಜಿತ ವಾದದ್ದು,ಸರ್ವಜಿತ ವೆನ್ನಿಸುವ ಮಟ್ಟಕ್ಕೆ ತಲುಪುತ್ತದೆ ಕಾಯಕ ದಾಸೋಹಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಒಂದನ್ನು ಆಗಲಿ ಇನ್ನೊಂದಿಲ್ಲ, ಒಂದಕ್ಕೆ ಕುಂದು  ಉಂಟಾದರೆ ಅಥವಾ ದೋಷಪೂರಿತವಾದರೆ  ಇನ್ನೊಂದು ಅಪಮೌಲಿಕರಣಕ್ಕೆ  ಒಳಗಾಗುತ್ತದೆ ಎಂದರು.

ಲಕ್ಷ್ಮೀಪುರ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವದ ಅಂಗವಾಗಿ ಕಬ್ಬಡ್ಡಿ ಪಂದ್ಯಾವಳಿ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷರಾದ ಅಪ್ಪಾರಾವ್ ಅಕ್ಕೋನಿ ಅವರು ಮಾತನಾಡಿ 12ನೇ ಶತಮಾನ ಅನೇಕ ರೀತಿಯ ಬದಲಾವಣೆ ತಂದ ಕಾಲ. ಶತಮಾನಗಳಿಂದ ಜಿಡ್ಡುಗಟ್ಟಿ ಹೋಗಿದ್ದ ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದ ಜನರ ದಾಸ್ಯದ  ಸಂಕೋಲೆಯನ್ನು  ಕಳಚಿ  ಸಮಾನತೆಯನ್ನು ಕಲ್ಪಿಸಿಕೊಟ್ಟ ಈ ಕಾಲ ಧಾರ್ಮಿಕ,ಸಾಮಾಜಿಕ ಆಧ್ಯಾತ್ಮಿಕ,ಸಾಹಿತ್ಯಕ, ಕ್ಷೇತ್ರಗಳಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಿ  ಸಮಾನತೆಯನ್ನು ಒದಗಿಸಿತು. ಶ್ರೀಮಂತ-ಬಡವ, ಹೆಣ್ಣು -ಗಂಡು ಎಂಬ ಭೇದವನ್ನು ತೊಡೆದು ಹಾಕಿ ಸಮಾನತೆಯ ತಳಹದಿಯ ಮೇಲೆ ಸಮಾಜ ಕಟ್ಟಲು ಪ್ರಯತ್ನಿಸಿದರು ಎಂದರು.

ವೇದಿಕೆ ಮೇಲೆ ಇದ್ದ ಡಾ. ಮಲ್ಲಿಕಾರ್ಜುನ ವಡ್ಡನ ಕೇರಿ ಅವರು ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರು ಆರಂಭಿಸಿದ ಅಪೂರ್ವ ಮತ್ತು ಸಮಗ್ರ ಜೀವನ ಕ್ರಾಂತಿಯ ಹಿನ್ನೆಲೆಯಲ್ಲಿ ಮೂಡಿಬಂದ ವಚನಗಳು ತಮ್ಮ ಉದ್ದೇಶವನ್ನು ಹಾಗೂ ಕಾಲದೇಶಗಳನ್ನು ಮೀರಿ ನಿತ್ಯ ಪ್ರಸ್ತುತವಾಗಿವೆ ಎಂದರು.

ಉದ್ಯೋಗಕ್ಕಾಗಿ ಆಗ್ರಹಿಸಿ ಎಐಡಿವೈಒ ಸಹಿ ಸಂಗ್ರಹ ಚಳುವಳಿ

ವೇದಿಕೆಯ ಮೇಲೆ ಬಸವರಾಜ ಪಾಟೀಲ್, ಶಂಕರಯ್ಯ ಸ್ವಾಮಿ, ಶಂಕರ್ ಕಾರಂಗಿ,ಶ್ರೀಮತಿ ಜಯಶ್ರೀ ಕೊರಳ್ಳಿ,ಶ್ರೀಮತಿ ಸುಲೋಚನಾ ಅ  ಕೋಣಿ,ಶ್ರೀಮತಿ ಕಾಶಿಬಾಯಿ ಹರಕಂಚಿ,ಕಮಲಾಪುರ ತಾಲೂಕ ಅಧ್ಯಕ್ಷರಾದ ಬಸವರಾಜ ಜನ ಕಟ್ಟಿ, ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಗಳಾದ ಸುನಿತಾ ಬಿರಾದಾರ್ ಅವರು ವಹಿಸಿದ್ದರು.ಡಾ. ಶರಣಬಸಪ್ಪ ವಡ್ಡನಕೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here