ಶಹಾಬಾದ: ತ್ರಿಕಾಲ ಜ್ಞಾನಿಯಾಗಿ,ವಾಸ್ತವಿಕೆ ಅರಿತು,ತ್ರಿಪದಿಗಳ ಮೂಲಕ ಕಂಡ ಸತ್ಯವನ್ನು ನೇರ ಮತ್ತು ನಿಷ್ಠುರವಾಗಿ ಹೇಳಿ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ವರಕವಿ ಸರ್ವಜ್ಞ ಇಂದಿಗೂ ಅಜರಾಮರವಾಗಿದ್ದಾರೆ ಎಂದು ನಗರಸಭೆಯ ವ್ಯವಸ್ಥಾಪಕ ಶಂಕರ ಇಂಜಗನೇರಿ ಹೇಳಿದರು.
ಅವರು ಶನಿವಾರ ನಗರದ ನಗರಸಭೆಯ ಕಛೇರಿಯಲ್ಲಿ ಆಯೋಜಿಸಲಾದ ಸರ್ವಜ್ಞ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸರ್ವಜ್ಞನ ಸಂದೇಶ ಇಡೀ ಮಾನವ ಸಮಾಜಕ್ಕೆ ದಾರಿ ದೀಪವಿದ್ದಂತೆ: ಸೂಫಿಯಾ ಸುಲ್ತಾನ
ನಾಡಿನೆಲ್ಲಡೆ ಸಂಚರಿಸಿ ಎಲ್ಲಾ ಕ್ಷೇತ್ರಗಳಲ್ಲಿ ಕಂಡ ಸತ್ಯವನ್ನು ನೇರವಾಗಿ ಹೇಳುವ ಮೂಲಕ ಸಮಾಜಕ್ಕೆ ಎಚ್ಚರಿಕೆ ನೀಡಿದ್ದಾರೆ. ವಿದ್ಯೆ,ಜಾತಿ,ಕೃಷಿ,ಮಾತು,ದುಶ್ಚಟಗಳ ಕುರಿತು ವಚನಗಳ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.ಆದರೆ ಇಂದು ಗುಟಕಾ,ತಂಬಾಕು ಹಾಗೂ ಕುಡಿತ ಮೋಜಿಗೆ ಜನರು ಬಲಿಯಾಗುತ್ತಿದ್ದಾರೆ.ಆದ್ದರಿಂದ ಸರ್ವಜ್ಞನ ವಚನಗಳ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ನಡೆದರೆ ದುಶ್ಚಟ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ನಗರಸಭೆಯ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ನಗರಸಭೆಯ ಉಪಾಧ್ಯಕ್ಷ ಸಲೀಮಾಬೇಗಂ, ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್,ಮಾಜಿ ನಗರಸಭೆಯ ಮಾಜಿ ಅಧ್ಯಕ್ಷ ಗಿರೀಶ ಕಂಬಾಣೂರ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣು ಪಗಲಾಪೂರ,ಎಇ ಶಾಂತರೆಡ್ಡಿ ದಂಡಗುಲಕರ್, ರಘುನಾಥ ನರಸಾಳೆ, ಸುನೀಲ ವೀರಶೆಟ್ಟಿ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ, ರಾಜೇಶ, ಶರಣು, ನಾರಾಯಣರೆಡ್ಡಿ, ಅಪ್ಸರ್, ಶಬಾನಾಬೇಗಂ ಇತರರು ಇದ್ದರು.
ಗ್ರಾಮದಲ್ಲಿ ಯಶಸ್ವಿಯಾದ ಜಿಲ್ಲಾಧಿಕಾರಿಗಳ ನಮ್ಮ ನಡೆ ಹಳ್ಳಿ ಕಡೆ ಕಾರ್ಯಕ್ರಮ