ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘದ ಪದಾಧಿಕಾರಿಗಳ ನೇಮಕ

0
76

ಸುರಪುರ: ತಾಲೂಕಿನ ಲಕ್ಷ್ಮೀಪುರ ಶ್ರೀಗಿರಿ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ವೀರಶೈವ ಜಂಗಮ ಅರ್ಚಕ ಪುರೋಹಿತರ ಸಂಘದ ಸುರಪುರ ತಾಲೂಕು ಘಟಕದ ನೂತನ ಪದಾಧಿಕಾರಿಗಳ ನೇಮಕ ಸಭೆಯನ್ನು ನಡೆಸಲಾಯಿತು.

ಸಭೆಯ ಸಾನಿಧ್ಯ ವಹಿಸಿದ್ದ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಆದಿಕಾಲ ದಿಂದಲೂ ಸನಾತನ ಪರಂಪರೆಯಲ್ಲಿ ವೇದ ಶಾಸ್ತ್ರ ಪುರಾಣಗಳಿಗೆ ಅದರದ್ದೇ ಆದ ಮಹತ್ವವಿದೆ,ಅದನ್ನು ಮಾನವ ಸಮಾಜಕ್ಕೆ ತಲುಪಿಸುವ ಮೂಲಕ ವೇದಾಗಮಗಳ ಪಠಣ ಮತ್ತು ಮಂತ್ರ ಶಾಸ್ತ್ರೋಕ್ತ ಆಚರಣೆಗಳನ್ನು ನಡೆಸಿಕೊಂಡು ಬಂದಿರುವುದು ವೀರಶೈವ ಜಂಗಮ ಅರ್ಚಕ ಪುರೋಹಿತರು.ಇಂತಹ ಒಂದು ವಿದ್ಯೆ ನಿರಂತರವಾಗಿ ಮುಂದುವರೆಯಲು ಹಾಗು ವೀರಶೈವ ಜಂಗಮ ಅರ್ಚಕರ ಅನೇಕ ಸಮಸ್ಯೆಗಳನ್ನು ನಿವಾರಣೆಗೆ ಸಂಘಟನೆಯ ಅವಶ್ಯಕತೆಯಿದೆ.

Contact Your\'s Advertisement; 9902492681

ಸುರಪುರ:ತಾಲೂಕು ಪಂಚಾಯತ ಆವರಣದಲ್ಲಿ ವಿಕಲಚೇತನರ ತರಬೇತಿ ಉದ್ಯೋಗ ಶಿಬಿರ

ಇದನ್ನು ಅರಿತು ರಾಜ್ಯದಲ್ಲಿ ಸಂಘಟನೆಯನ್ನು ಕಟ್ಟುವ ಮೂಲಕ ಪುರೋಹಿತ ಸಮುದಾಯವನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿರುವ ಸಂಘಟನೆಯ ಸೇವೆ ಅನನ್ಯವಾಗಿದೆ.ಇಂತಹ ಸಂಘ ಇಂದು ನಮ್ಮ ಸುರಪುರ ತಾಲೂಕಿನಲ್ಲಿಯೂ ಜನಿಸಿರುವುದು ಸಂತೋಷದ ಸಂಗತಿಯಾಗಿದೆ.ಸಂಘಟನೆಯ ಬೆಳವಣಿಗೆಗೆ ಎಲ್ಲ ರೀತಿಯ ನೆರವನ್ನು ನೀಡಲು ಶ್ರೀಮಠ ಸದಾ ನಿಮ್ಮೊಂದಿಗಿದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಶ್ರೀ ವೇದ ವಿದ್ಯಾಭೂಷಣ ಚನ್ನಯ್ಯ ಶಾಸ್ತ್ರಿಗಳು ಸಂಸ್ಥಾನಮಠ ಹಾಗು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ವೇದ ಶಿವಯ್ಯ ಗುಡಿಮಠ ಬೀರನಾಳ ಇವರುಗಳ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

15 ದಿನದಲ್ಲಿ ನೆರೆಯ ರಾಜ್ಯಗಳಿಂದ ಮರಳಿದವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ

ಪದಾಧಿಕಾರಿಗಳು: ಶ್ರೀ ವೇ.ಮೂ ಶಿವಪುತ್ರ ಸ್ವಾಮಿ ಮುಷ್ಠಹಳ್ಳಿ ಗೌರವಾಧ್ಯಕ್ಷರನ್ನಾಗಿ ಶ್ರೀ ವೇ.ಮೂ ಬಸವಲಿಂಗಯ್ಯ ಶಾಸ್ತ್ರಿ ಶ್ರೀಗಿರಿ ಮಠ ಲಕ್ಷ್ಮೀಪುರ ಅಧ್ಯಕ್ಷರಾಗಿ,ಶ್ರೀ ವೇ.ಮೂ.ಷಡಕ್ಷರಿ ಶಾಸ್ತ್ರಿ ಸೂಗುರು ಪ್ರಧಾನ ಕಾರ್ಯದರ್ಶಿಶ್ರೀ ಮಹೇಶ ಶಾಸ್ತ್ರಿ ಹಿರೇಮಠ ತಿಮ್ಮಾಪುರ ಸಹ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಲಾಯಿತು.

ಸಭೆಯಲ್ಲಿ ಗಂಗಾಧರಯ್ಯ ಶಾಸ್ತ್ರಿ ಹಿರೇಮಠ ವಿದ್ವಾನ್ ಶರಣಯ್ಯ ಶಾಸ್ತ್ರಿ ಶಹಾಪುರ ವಿರೇಶ ಪಂಚಾಂಗಮಠ ಹಾಗು ತಾಲೂಕು ವೀರಶೈವ ಜಂಗಮ ಪುರೋಹಿತ ಅರ್ಚಕ ವೃಂದ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here