ಶಹಾಬಾದ: ಪ್ರತಿಯೊಬ್ಬರ ಮನೆಯಲ್ಲಿ ಮಕ್ಕಳು ಶಿವಾಜಿಯಂತಾಗಬೇಕಾದರೆ ಹುಟ್ಟಬೇಕಾದರೆ ಮೊದಲು ನಾವು ತಾಯಂದಿರು ಜೀಜಾಬಾಯಿ ಆಗಬೇಕು ಎಂದು ಬಿಜೆಪಿ ಮುಖಂಡೆ ಜಯಶ್ರೀ ಬಸವರಾಜ ಮತ್ತಿಮಡು ಕರೆ ನೀಡಿದರು.
ಅವರು ನಗರದ ವಿಠ್ಠಲ್ ಮಂದಿರದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಮರಾಠಾ ಯುವಕ ಮಂಡಳಿ ವತಿಯಿಂದ ಆಯೋಜಿಸಲಾದ ಛತ್ರಪತಿ ಶಿವಾಜಿ ಮಹಾರಾಜರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿವಾಜಿ ಮಹಾರಾಜರು ಛತ್ರಪತಿ ಶಿವಾಜಿ ಮಹಾರಾಜರಾಗಲು ಅವರ ತಾಯಿ ಜೀಜಾಬಾಯಿ ಮುಖ್ಯ ಕಾರಣಳಾಗಿದ್ದಾಳೆ.ಚಿಕ್ಕಂದಿನಿಂದಲೇ ಶಿವಾಜಿಗೆ ಒಳ್ಳೆಯ ಸಂಸ್ಕಾರ, ಧೈರ್ಯ ತುಂಬಿ ಬೆಳೆಸಿದವಳು. ತಾಯಂದಿರು ಮಕ್ಕಳಿಗೆ ಒಳ್ಳೆ ಸಂಸ್ಕೃತಿ, ವಿದ್ಯೆ ಕಲಿಸಬೇಕಾದರೆ ನಾವು ಸ್ವಂತ ಕಲಿತಿರಬೇಕು.ಅದಕ್ಕಾಗಿ ಹೆಣ್ಣು ಮಕ್ಕಳಿಗೆ ಹೆಚ್ಚು ಹೆಚ್ಚು ಕಲಿಸಿ. ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಆ ಕುಟುಂಬ ತನ್ನಿಂದ ತಾನೇ ಸುಶಿಕ್ಷಿತರಾಗುತ್ತಾರೆ. ನಾವು ಮಕ್ಕಳಿಗೆ ಒಳ್ಳೆ ಸಂಸ್ಕಾರ ಕಲಿಸಿದಾಗ ಮಾತ್ರ ಮುಂದೆ ನಾವು ವೃದ್ದಾಶ್ರಮಗಳನ್ನು ಆಶ್ರಯಿಸುವದು ತಪ್ಪುತ್ತದೆ ಎಂದು ಹೇಳಿದರು.
ಉಪನ್ಯಾಸ ನೀಡಿದ ಸೋಲಾಪೂರದ ಬಾಬಾ ಸಾಹೇಬ ವಿಠ್ಠಲ್ ಭಟೆ ಮಾತನಾಡಿ, ದೇಶದ ಪ್ರತಿ ಹೆಣ್ಣು ಮಕ್ಕಳು ಜೀಜಾಬಾಯಿಯಂತಾಗಿ ತಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟು ಶಿವಾಜಿಯಂತಹ ದೇಶಭಕ್ತ ವೀರರನ್ನು ದೇಶಕ್ಕೆ ಒಪ್ಪಿಸಬೇಕು. ಶಿವಾಜಿ ಯುದ್ದನೀತಿ, ರಣ ತಂತ್ರ ತಾಯಿ ಜೀಜಾಬಾಯಿಯಿಂದ, ಗುರು ದಾದಾಜೀ ಕೊಂಡದೇವ ಅವರಿಂದ ಕಲಿತ ಯುದ್ದ ನೀತಿಯನ್ನೆ ಬಳಸಿಕೊಂಡು ವಿಯಟ್ನಾಂ ದೇಶ ಬಲಾಢ್ಯ ಅಮೇರಿಕಾವನ್ನು ಸೋಲಿಸಿದ್ದ ಶಿವಾಜಿಯ ತಂತ್ರಗಾರಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ನಗರಸಭೆ ಅರ್ಧಯಕ್ಷೆ ಅಂಜಲಿ ಗಿರೀಶ ಕಂಬಾನೂರ, ವಾಡಿ-ಶಹಾಬಾದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ ದಂಡಗುಲಕರ್ ಮಾತನಾಡಿದರು. ನಗರಸಭೆ ಸದಸ್ಯ ಶ್ರವಣಕುಮಾರ,ಬಾಬುರಾವ ನಾರಾಯಣರಾವ ಸುರವಸೆ, ಮರಾಠಾ ಸಮಾಜದ ಗೌರವಾಧ್ಯಕ್ಷ ಜ್ಞಾನೇಶ್ವರ ನನ್ನವರೇ,ಕೆಕೆಎಮ್‌ಪಿ ತಾಲೂಕಾಧ್ಯಕ್ಷ ಶಂಕರ ಭಗಾಡೆ ವೇದಿಕೆಯ ಮೇಲಿದ್ದರು.ಮರಾಠಾ ಸಮಾಜದ ಅಧ್ಯಕ್ಷ ದತ್ತಾ.ವಿ.ಶಿಂಧೆ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಭೋವಿ ಸಮಾಜದ ಅಧ್ಯಕ್ಷ ಭೀಮರಾವ ಸಾಳೊಂಕೆ, ಡಾ.ಅಶೋಕ ಜಿಂಗಾಡೆ, ರವಿ ರಾಥೋಡ, ಭಾಗಿರತಿ ಗುನ್ನಾಪುರ, ಸುನೀಲ ಭಗತ, ದತ್ತಾ ಫಂಡ್, ಜ್ಞಾನೇಶ್ವರ ನನ್ನವರೆ, ಶಂಕರಬಾಬಾ ಬಗಾಡೆ ಉಪಸ್ಥಿತಿರಿದ್ದರು.ಮರಾಠ ಸಮಾಜದ ಅಧ್ಯಕ್ಷ ದತ್ತಾ ಸಿಂಧೆ ಅಧ್ಯಕ್ಷತೆ ವಹಿಸಿದ್ದರು.
ಬಾಬಾ ಸಾಹೇಬ ಸಾಳೊಂಕೆ ಸ್ವಾಗತಿಸಿದರು. ಮನೀಷಾ ಸಾಳೊಂಕೆ ನಿರೂಪಿಸಿದರು. ಪವನಕುಮಾರ ಜಾಧವ ವಂದಿಸಿದರು.
ಸಮಾಜದ ಗಣ್ಯರಾದ ಚಂದ್ರಕಾಂತ ಸೂರ್ಯವಂಶಿ,ರಾಜೇಶ ಸಾಳುಂಕೆ,ಪ್ರದೀಪ ಸೋಲಾಪೂರಕರ್,ದಿಗಂಬರ ಮಾನೆ,ಅಶೋಕ ಶಿಂಧೆ, ಉಮಾಕಾಂತ ಸೂರ್ಯವಂಶಿ, ಭೀಮ ಭಗಾಡೆ,ಸುನೀಲ ದೇಶಮುಖ, ಶಿವುಕುಮಾರ ಭಗಾಡೆ,ದಶರಥ ಜಗತಾಪ,ಔದಂಬರ ಜಾವಳೆ, ಉಮೇಶ ಜೋಗದಂಡೆ, ಉದಯ ಚವ್ಹಾಣ, ಸಂತೋಷ ಸಾವಂತ ಸೇರಿದಂತೆ ಯುವಕರು, ಮಹಿಳೆಯರು ಪಾಲ್ಗೊಂಡಿದ್ದರು.