ಸುರಪುರ: ಯಾದವ ಸಂಘದ ರಾಜ್ಯ ಉಪಾಧ್ಯಕ್ಷ ವಿಠ್ಠಲ್ ಯಾದವ್ ನೇತೃತ್ವದಲ್ಲಿ ನಗರದ ಅವರ ನಿವಾಸದಲ್ಲಿ ಸಭೆ ನಡೆಸಿ ತಾಲೂಕು ಯಾದವ ಸಮಾಜದ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.
ಈ ಸಂದರ್ಭದಲ್ಲಿ ವಿಠ್ಠಲ್ ಯಾದವ್ ಅವರು ಮಾತನಾಡಿ, ಯಾದವ ಸಮುದಾಯಕ್ಕೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಸಮಾಜವನ್ನು ಒಗ್ಗೂಡಿಸುವಲ್ಲಿ ಶ್ರಮಿಸಬೇಕು. ಸಮುದಾಯ ಸಂಘಟಿತವಾಗಿದರೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸಮುದಾಯ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಸಮಾಜ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಒಂದೇ ಮಾರ್ಗ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಸುರಪುರ ಪದವಿ ಮಹಾವಿದ್ಯಾಲಯ ಆವರಣದಲ್ಲಿ ಉದ್ಯೋಗ ಮೇಳ
ಪದಾಧಿಕಾರಿಗಳ ನೇಮಕ: ಯಾದವ ಸಮಾಜದ ತಾಲೂಕು ಅಧ್ಯಕ್ಷರಾಗಿ ಮಲ್ಲೇಶ್(ಅಭಿಮಾನ್) ಯಾದವ ಭೈರಿಮರಡಿ, ಉಪಾಧ್ಯಕ್ಷರಾಗಿ ರಮೇಶ ಡೊಳ್ಳೆ ರಂಗಂಪೇಟ, ವೆಂಕಟೇಶ ಜಲೋಡಿ ಅಮ್ಮಾಪುರ, ಆನಂದ ಪ್ಯಾಟಿ ದಿವ್ವಳಗುಡ್ಡ (ಪ್ರಧಾನ ಕಾರ್ಯದರ್ಶಿ), ವೀರೇಶ ಎಲಿತೋಟದ ತಳವಾರಗೇರಾ, ಮೇಲಗಿರಿ ಮಂಗಿಹಾಳ ತಿಮ್ಮಾಪುರ(ಸಹ ಕಾರ್ಯದರ್ಶಿಗಳು), ಅಯ್ಯಪ್ಪ ಗೆಜ್ಜೇಲಿ ರತ್ತಾಳ, ಸಂಘದ ನಿರ್ದೇಶಕರಾಗಿ ನಿಂಗಪ್ಪ ಎಲಿತೋಟದ ತಿಮ್ಮಾಪುರ, ಶ್ರೀನಿವಾಸ ಮಂಗಳೂರು, ಬಲಬೀಮ ದೇವಿಕೇರಾ, ವೀರೇಶ ರತ್ತಾಳ, ಬಸವರಾಜ್ ಡೊಳ್ಳೆ ರಂಗಂಪೇಟ, ಲಕ್ಷ್ಮಣ್ ಆಡಿನ್ ದೇವಿಕೇರಾ, ಮಲ್ಲಪ್ಪ ಕಟಿಗೇಲಾ ತಳವಾರಗೇರಾ, ಮೇಲಗಿರಿ ಮಂಗಿಹಾಳ ತಿಮ್ಮಾಪುರ, ಹನುಮಂತ್ರಾಯ ಚಿಗರಿಹಾಳ, ಕೃಷ್ಣ ಚಿಕ್ಕನಳ್ಳಿ, ಹೊಳೆಪ್ಪ ಬಿಂಗೇರಿ ಗೋಡ್ರಿಹಾಳ ಆಯ್ಕೆಯಾದರು.
ವಿಧಾನಪರಿಷತ್ ಕಲಾಪಕ್ಕೆ ಮಾಧ್ಯಮ ನಿರ್ಬಂಧ ಇಲ್ಲ: ಸಭಾಪತಿ ಬಸವರಾಜ ಹೊರಟ್ಟಿ
ಮುಖಂಡರಾದ ವೆಂಕೋಬ ಯಾದವ್, ವಾಸುದೇವ ಮಂಗಳೂರು, ಅರವಿಂದ ಡೊಳ್ಳೆ, ನಾಗರಾಜ ಸೇಡಂ, ರಾಜೇಂದ್ರ ಯಾದವ್, ಶ್ರೀನಿವಾಸ ಡೊಳ್ಳೆ, ಭೀಮರಾಯ ಯಾದವ್ ಭೈರಮಡ್ಡಿ, ಹುಣಸಗಿ ತಾಲೂಕಿನ ಅಲೆಮಾರಿ ಸಂಘದ ಅಧ್ಯಕ್ಷ ಪರಶುರಾಮ ಚಿಕ್ಕನಳ್ಳಿ ಹಾಗೂ ಅಮ್ಮಾಪುರ, ಮಂಗಳೂರ, ದೇವಿಕೇರಾ, ರಂಗಂಪೇಟ, ರತ್ತಾಳ, ಭೈರಿಮಡ್ಡಿ, ದೇವತ್ಕಲ್, ಕೊಡೇಕಲ್, ಗೋಡ್ರಿಹಾಳ, ಕನ್ನೆಳ್ಳಿ, ತಳವಾರಗೇರಾ, ಚಿಗರಿಹಾಳ ಗ್ರಾಮದ ಯಾದವ ಸಮುದಾಯದ ಬಾಂಧುವರು ಪಾಲ್ಗೊಂಡಿದ್ದರು.