ಕಲಬುರಗಿ: ನಗರದ ಎಂಎಸ್‌ಕೆ ಮಿಲ್ ರಹೀಮಿಯಾ ಮಜೀದ್ ಎದುರುಗಡೆ ಇರುವ ವೆಲ್‌ಕೇರ್ ಫಾರ್ ಎಕ್ಸ್‌ಲೆಂನ್ ವಿ ಕೇರ್ ಹಾಗೂ ನವೋದಯ ಸೂಪರ್ ಸ್ಪೇಶಾಲಿಟಿ ಸೆಂಟರ್ ಸಂಯುಕ್ತಾಶ್ರಯದಲ್ಲಿ ಹಲ್ಲಿನ ಪರೀಕ್ಷೆ, ಮಧುಮೇಹ, ಹೃದಯ, ಬಿಪಿ, ಅಸ್ತಮಾ, ಸಾಮಾನ್ಯ ಪರೀಕ್ಷೆಗಳನ್ನು ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಯಿತು.
ಎಂಡೋಕ್ರಿನೋಲಾಜಿಸ್ಟ್ ಹಾಗೂ ಸಕ್ಕರೆ ಕಾಯಿಲೆ ತಜ್ಙರಾದ ಡಾ.ಸಂತೋಷ ಎನ್.ಹರಕೂಡೆ, ಹೃದಯ ತಜ್ಞರಾದ ಡಾ.ಶಂಕರಗೌಡ ಬಿ.ಎಚ್, ಡಾ.ಶ್ರೀಕಾಂತ ದುರ್ಗೆ, ಡಾ.ಮಹ್ಮದ್ ವಾಸಿಂ ಅಹ್ಮದ್ ಇದ್ದರು.