ಕಾಂಗ್ರೆಸ್ ಭದ್ರಕೋಟೆಯ ಇಬ್ಬರು ನಾಯಕರು ಬೇರೆ ಪಕ್ಷಕ್ಕೆ

1
158
  • ಸಾಜಿದ್ ಅಲಿ

ಕಲಬುರಗಿ: ಜಿಲ್ಲೆಯ ಉತ್ತರ ಮತ ಕ್ಷೇತ್ರದಲ್ಲಿ ರಾಜಯಕೀಯ ಚದುರಂಗದಾಟ ಬಲು ಜೋರು ನಡೆಯುತ್ತಿದ್ದು, ಮುಂಬರುವ ವಿಧಾನ ಸಭಾ ಚುನಾವಣೆಗೆ ರಾಜಕಾರಣಿಗಳ ಲೆಕ್ಕಚಾರ ಆರಂಭ ಶುರುವಾಗಿದೆ.

ದಿವಂಗತ ಮಾಜಿ ಸಚಿವ ಡಾ. ಖಮರುಲ್ ಇಸ್ಲಾಂ ಅವರ ನಿಧನದ ನಂತರ ಕಾಂಗ್ರೆಸ್ ಭದ್ರಕೋಟೆ ಎಂದೆ ಎನ್ನಿಸಿಕೊಳ್ಳುವ ಕಲಬುರಗಿ ಉತ್ತರ ಮತ ಕ್ಷೇತ್ರದ ರಾಜಕೀಯ ಚಿತ್ರ ಬದಲಾಗುತ್ತಿದೆ. ಕ್ಷೇತ್ರದಲ್ಲಿ ನಾಯಕರು ಭಾರಿ ಪೈಪೋಟಿ ಆರಂಭವಾಗಿದೆ ಎಂದು ಹೇಳಲಾಗುತ್ತಿದ್ದು, ಖಮರುಲ್ ಇಸ್ಲಾಂ ಅವರ ಆಪ್ತರೆಲ್ಲರೂ ಪಕ್ಷ ತೊರೆಯುತ್ತಿರುವುದು ಶುರುವಾಗಿದೆ ಎಂದೆ ಹೇಳಲಾಗುತ್ತಿದೆ.

Contact Your\'s Advertisement; 9902492681

ಪೊಗರು ಸಿನಿಮಾದಲ್ಲಿ ಬ್ರಾಹ್ಮಣರಿಗೆ ಅಪಮಾನ: ದೃಶ್ಯ ತೆಗೆದು ಹಾಕಲು ಆಗ್ರಹ

ಇತ್ತೀಚಿಗೆ ಖಮರುಲ್ ಇಸ್ಲಾಂ ಅವರ ಸಚಿವರಾಗಿದ್ದಾಗ ಎನ್ಎಕೆಆರ್ಟಿಸಿ ಅಧ್ಯಕ್ಷರಾಗಿ ನೇಮಕಗೊಂಡ ಉದ್ಯಮಿ ಇಲಿಯಾಸ್ ಸೇಠ್ ಭಾಗವಾನ್ ಫೆ. 22 ರಂದು ಕಾಂಗ್ರೆಸ್ ತೊರೆದು ಎಐಎಮ್ಐಎಮ್ ಪಕ್ಷಕ್ಕೆ ಸೇರ್ಪಡೆಯಾದ್ದ ಬೆನ್ನಲೆ, ಈಗ ದಿ.ಖಮರುಲ್ ಇಸ್ಲಾಂ ಅವರ ತೀರ ಅಪ್ತರಾಗಿದ್ದ ಮತ್ತು ಅವರ ಸಹಾಯಕರಾಗಿದ್ದ, ಡಾ. ಮೊಹ್ಮದ್ ಅಸಗರ್ ಚುಲಬುಲ್ ಸಹ ಪಕ್ಷ ತೊರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಾ. ಚುಲಬುಲ್ ಅವರು ದಿ. ಶಾಸಕರಾದ ಖಮರುಲ್ ಇಸ್ಲಾಂ ಅವರ ಅಧಿಕಾರ ಅವಧಿಯಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದು, ಖಮರುಲ್ ಅಪ್ತರಾಗಿ ಹಾಗೂ ಸಹಾಯಕರಾಗಿ ಸೇವೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಹುತೇಕ ಹಿರಿಯ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.

ಸ್ಮಾರ್ಟ್ ಕ್ಲಾಸ್ ಆರಂಭಕ್ಕೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಸಂಘ ನೆರವು

ಆದರೆ ಪಕ್ಷದಲ್ಲಿ ಆತಂರಿಕ ಹಾಗೂ ರಾಜಕೀಯ ಲೆಕ್ಕಾಚಾರದ ಹಿನ್ನೆಯಲ್ಲಿ ಚುಲಬುಲ್ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರುತ್ತಿರುವುದು ಬಹುತೇಕ ಖಚ್ಚಿತವಾಗಿದ್ದು, ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿ ಉಳಿದಿದೆ.

ಕಾಂಗ್ರೆಸ್ ಭದ್ರಕೋಟೆ ಎಂದೆನಿಸಿಕೊಂಡರುವ ಕಲಬುರಗಿ ಕಾಂಗ್ರೆಸ್ ನಾಯಕರು ಪಕ್ಷ ಬಿಟ್ಟು ಹೊಗುತ್ತಿರುವ ಪಕ್ಷಕ್ಕೆ ಹಿನ್ನೆಡೆ ಯಾಗುತ್ತಿದ್ದೇಯೆ ಎಂದು ಹೇಳಲಾಗುತ್ತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here