ಸುಕ್ಷೇತ್ರ ದೇವಲ ಗಾಣಗಾಪುರದ ಭೀಮಾ – ಅಮರ್ಜಾ ಸಂಗಮ ನದಿಯಲ್ಲಿ ಸ್ವಚ್ಚತಾ ಅಭಿಯಾನ

2
40

ಅಫಜಲಪುರ: ಪ್ರತಿಯೊಬ್ಬರು ಆರೋಗ್ಯವಾಗಿ ಇರಬೇಕಾದರೆ ಅಲ್ಲಿ ಉತ್ತಮ ಪರಿಸರ ಬಹಳ ಅಗತ್ಯವಾಗಿದೆ ಮತ್ತು ಸ್ವಚ್ಚತೆ ಇದ್ದಲ್ಲಿ ದೈವತ್ವ ಹೆಚ್ಚಿಗೆ ಇರುತ್ತದೆ ಹೀಗಾಗಿ ನಾವೂ ಸ್ವಚ್ಚತೆ ಕಡೆ ಹೆಚ್ಚು ಗಮನ ಹರಿಸಬೇಕು ಆ ಕೆಲಸ ಬಿಜೆಪಿ ಯುವ ಮೋರ್ಚಾದ ನಿರಂತರವಾಗಿ ಆ ಕೆಲಸ ಮಾಡುತ್ತಿದೆ ಎಂದು ಯುವ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.

ಬಿಜೆಪಿ ಯುವ ಮೋರ್ಚಾ ಕಲ್ಬುರ್ಗಿ ಜಿಲ್ಲಾ ಗ್ರಾಮೀಣ ಹಾಗೂ ಅಫಜಲಪುರ ಯುವ ಮೋರ್ಚಾ ಮಂಡಲದ ವತಿಯಿಂದ ಅಫಜಲಪುರ ತಾಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದ ಭೀಮಾ – ಅಮರ್ಜಾ ಸಂಗಮ ನದಿಯಲ್ಲಿ ಕಾರ್ಯಕರ್ತರು ಸ್ವಚ್ಚತಾ ಅಭಿಯಾನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ಭಾಗದಲ್ಲಿ ಅತ್ಯಂತ ಪುಣ್ಯ ಕ್ಷೇತ್ರ ಎಂದರೆ ದೇವಲಗಾಣಪೂರ ಶ್ರೀ ದತ್ತಾತ್ರಾಯ ಮಹಾರಾಜರು ಸನ್ನಿದಾನವಿದು, ಅತ್ಯಂತ ಪವಿತ್ರ ಭೀಮಾ-ಅಮರ್ಜಾ ಸಂಗಮನದಿಯಾಗಿದೆ ಎಂದರು.

Contact Your\'s Advertisement; 9902492681

ಅಟ್ಟದ ಮೇಲೆ ಬೆಟ್ಟದಂಥ ವಿಚಾರ: ಕುಂ. ವೀ. ಅವರ ‘ಬೇಲಿ ಮತ್ತು ಹೊಲ’ ಕೃತಿ ವಿಮರ್ಶೆ ಇಂದು

ಈ ಸ್ಥಳಕ್ಕೆ ಹೊರ ರಾಜ್ಯಗಳಾದ ಮಹಾರಾಷ್ಟç ಹಾಗೂ ಆಂದ್ರ ಪ್ರದೇಶ, ತಮೀಳನಾಡು, ತೆಲಂಗಾಣ ಹೀಗೆ ನಾಡಿನ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ ನದಿಯಲ್ಲಿ ಭಕ್ತಿ ಭಾವದಿಂದ ಸ್ನಾನ ಮಾಡುತ್ತಾರೆ ಹೀಗಾಗಿ ನದಿ ಸ್ವಚ್ಚತೆಯಿಂದ ಇಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಯುವ ಮೋರ್ಚಾ ವತಿಯಿಂದ ನದಿ ನೀರಲ್ಲಿ ಬಿದ್ದ ಕಸ, ಕಡ್ಡಿ, ಹಾಗೂ ದಡದಲ್ಲಿದ್ದ ಬಟ್ಟೆಗಳುನ್ನು ಹೊರತೆಗಿಯಲಾಯಿತು. ಈ ಸ್ವಚ್ಚತಾ ಅಭಿಯಾನದಲ್ಲಿ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದರು.

ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಈರಣ್ಣ ಅಂಗಡಿ, ಜಿಲ್ಲಾಧ್ಯಕ್ಷ ಪ್ರವೀಣ ತೆಗನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಿನಯ ವಲ್ಲಾಪೂರೆ, ಉಪಾಧ್ಯಕ್ಷರಾದ ಸಚೀನ್ ರಾಠೋಡ, ಅಫಜಲಪುರ ಯುವ ಮೋರ್ಚಾ ಅಧ್ಯಕ್ಷರಾದ ಭಾಗೇಶ ಬೊರೆಗಾಂವ, ಮುಖಂಡರಾದ ಕುಶಾಲ ಗುತ್ತೇದಾರ,ಮಂಜುನಾಥ ಜಾಧವ, ರಾಘವೇಂದ್ರ ಗೋಳಸಾರ, ಮಂಡಲದ ಅಧ್ಯಕ್ಷರಾದ ಶೈಲೇಶ ಗುಣಾರಿ, ಭೀಮಾರಾಯ ಕಲಶೆಟ್ಟಿ, ಶರಣು ಪದಕಿ, ಅಫಜಲಪುರ ತಾಲೂಕಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಪ್ರಭಾವತಿ ಮೇತ್ರಿ, ಬಸವರಾಜ ಕರಜಗಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮೋರ್ಚಾ ಪದಾಧಿಕಾರಿಗಳುಸ್ವಚ್ಚತಾ ಅಭಿಯಾನದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here