ಸಮಾಜದ ಸ್ವಾಸ್ಥ್ಯ ಕಾಪಾಡುವ ಶಿಕ್ಷಣ ಬೇಕು: ಸೆಲಿನ್

1
66

ವಾಡಿ: ಕ್ರೌರ್ಯಗಳಿಂದ ಮೌಲ್ಯ ಸಾಯಿಸಿರುವ ಈ ಸಾಮಾಜಿಕ ವ್ಯವಸ್ಥೆಯ ಸ್ವಾಸ್ಥ್ಯ ಕಾಪಾಡಲು ಗುಣಮಟ್ಟದ ಶಿಕ್ಷಣ ಬೇಕಾಗಿದೆ ಎಂದು ನಗರದ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಸೆಲಿನ್ ಹೇಳಿದರು.

ಮುಖ್ಯಶಿಕ್ಷಕಿ ಹುದ್ದೆಯಿಂದ ಸೇಂಟ್ ಅನ್ನಾಸ್ ಶಿಕ್ಷಣ ಸಂಸ್ಥೆಯ ಕೋಲ್ಕತ್ತಾ ವಿಭಾಗೀಯ ಮುಖ್ಯಸ್ಥೆಯಾಗಿ ಪದೋನ್ನತಿ ಹೊಂದಿದ ಕಾರಣಕ್ಕೆ ಸೇಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯ ಶಿಕ್ಷಕರಿಂದ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಸುಕ್ಷೇತ್ರ ದೇವಲ ಗಾಣಗಾಪುರದ ಭೀಮಾ – ಅಮರ್ಜಾ ಸಂಗಮ ನದಿಯಲ್ಲಿ ಸ್ವಚ್ಚತಾ ಅಭಿಯಾನ

ಪ್ರಸಕ್ತ ಸಾಮಾಜಿಕ ವ್ಯವಸ್ಥೆಯಲ್ಲಿ ನಿಸ್ವಾರ್ಥ ಭಾವ, ತ್ಯಾಗ, ಕರುಣೆ, ಸಮಾನತೆ, ಪ್ರೀತಿ, ವಿಶ್ವಾಸಗಳು ಕಣ್ಮರೆಯಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ದೇಶದ ಮುಂದಿನ ಭವಿಷ್ಯವಾದ ಇಂದಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡುವಲ್ಲಿ ಶಿಕ್ಷಕರು ವಿಫಲರಾದರೆ ಮತ್ತಷು ಕ್ರೌರ್ಯ ಕಾಣಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ ಸೆಲಿನ್, ಶಿಕ್ಷಣ ನಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡುವಂತಿರಬೇಕು. ಎಲ್ಲರೂ ನನ್ನವರು ಎಂಬ ಭಾವ ಮೂಡಿಸುವಲ್ಲಿ ಸಫಲತೆ ಕಾಣಬೇಕು. ವಾಡಿ ನಗರದಲ್ಲಿ ಆರು ವರ್ಷಗಳ ಕಾಲ ನೀಡಿದ ಶೈಕ್ಷಣಿಕ ಸೇವೆ ತೃಪ್ತಿ ತಂದಿದೆ. ಶಿಕ್ಷಣ ಸಂಸ್ಥೆ ಮುನ್ನೆಡಸಲು ಸ್ಥಳೀಯರಿಂದ ದೊರೆತ ಸಹಕಾರ ನಾನೆಂದಿಗೂ ಮರೆಯುವುದಿಲ್ಲ ಎಂದರು.

ಶಿಕ್ಷಕರಾದ ಇಮ್ಮಾನವೆಲ್ ಹಾಗೂ ಡಾನ್ ಬಾಸ್ಕೊ ಮಾತನಾಡಿ, ಸಿಸ್ಟರ್ ಸೆಲಿನ್ ಅವರು ಸೆಂಟ್ ಅಂಬ್ರೋಸ್ ಕಾನ್ವೆಂಟ್ ಶಾಲೆಯ ಮುಖ್ಯಶಿಕ್ಷಕಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಶೈಕ್ಷಣೀಕವಾಗಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಮಕ್ಕಳ ಶಿಸ್ತಿನಲ್ಲಿ ಮತ್ತು ಶಿಕ್ಷಕರ ಬೋಧನಾ ಶೈಲಿಯಲ್ಲಿ ಪ್ರಗತಿ ಕಾಣುವಂತೆ ಮಾರ್ಗದರ್ಶನ ನೀಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ನಮ್ಮ ಶಾಲೆ ಮತ್ತಷ್ಟು ಮುನ್ನಡೆ ಸಾಧಿಸುವಲ್ಲಿ ಯಶಸ್ಸು ಕಾಣಲು ಸಿಸ್ಟರ್ ಸೆಲಿನ್ ಕಾರಣರಾಗಿದ್ದಾರೆ ಎಂದು ಸ್ಮರಿಸಿದರು.

ಕ್ಯಾಂಪಸ್ ಫ್ರಂಟ್ ರಾಜ್ಯ ನೂತನ ಪದಾಧಿಕಾರಿಗಳಿಗೆ  ಅಭಿನಂದನಾ ಸಭೆ

ಪ್ರೌಢ ಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ತೆಕಲಾಮೇರಿ, ಸಿಸ್ಟರ್ ಜೆರ್ಸಾ, ಸಿಸ್ಟರ್ ಸೆಲ್ವಿ, ಶಿಕ್ಷಕರಾದ ಸುಭಾಷ ಮೇಲಕೇರಿ, ಪ್ರಕಾಶ ಯೇಸುದಾಸ, ಗೋಪಾಲ ಕಾನಕುರ್ತೆ, ರವಿಕುಮಾರ, ಶಶಿಕಲಾ, ಶಬಾನಾ, ಕುಲಸುಂಬಿ, ಸವಿತಾ ಜಾರ್ಜ್, ಸುಪ್ರೀಯಾ ಸುತ್ರಾವೆ, ರೇಣುಕಾ ಮೇನಗಾರ, ಮಮತಾ, ಮೇಘಾ, ಕರೀಷ್ಮಾ, ಮಾರ್ತಾ, ಉಮಾದೇವಿ, ಸರೋಜಾ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಸಿಸ್ಟರ್ ಸೆಲಿನ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here