“ಮೇ ಆಜಾದ್ ತಾ. ಆಜಾದ್ ಹೊಂಔ ಆಜಾದ್ ಹೀ ರಹೊಂಗಾ “

3
63

ಕಲಬುರಗಿ: “ಮೇ ಆಜಾದ್ ತಾ. ಆಜಾದ್ ಹೊಂಔ ಆಜಾದ್ ಹೀ ರಹೊಂಗಾ”  ಎಂದು ಚಂದ್ರ ಶೇಖರ್ ಆಜಾದ್ ಹೇಳಿದರು ಎಂದು ಎಸ್‌ಯುಸಿಐ ಕಮುನಿಷ್ಟ ಪಕ್ಷದ ಶಹಾಬಾದ ಕಾರ್ಯದರ್ಶಿ ಕಾ. ಗಣಪತ್‌ರಾವ್ ಕೆ ಮಾನೆ ಹೇಳಿದರು

ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆಯ ಕಛೇರಿಯಲ್ಲಿ  ಹಮ್ಮಿಕೊಂಡಿದ್ದ ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ರವರ ೯೧ನೇ ಹುತಾತ್ಮ ದಿನಾಚಾರಣೆ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಆಗಮಿಸಿ ಮಾತನಾಡುತ್ತ ಹೇಳಿದರು.

Contact Your\'s Advertisement; 9902492681

ಸಾರ್ವಜನಿಕರಿಗೆ 108 ಅಂಬುಲೆನ್ಸ್ ಸೇವೆ ಒದಗಿಸಲು ಆಗ್ರಹ

ಮುಂದುವರೆದು ಅವರು ಚಂದ್ರಶೇಖರ್ ಆಜಾದ ರವರು ಕೇವಲ ೧೪ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕ್ಕಿದ್ದು  ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷಿನ್ನಿನ ನಾಯಕತ್ವ ವಹಿಸಿದ್ದು ದೇಶದ ಹಲವಾರು ಕ್ರಾಂತಿಕಾರಗಳನ್ನು ಸೇರಿಸಿ ಬ್ರಿಟಿಷರ ವಿರುದ್ದ  ಹೋರಾಟ ಬೆಳಸಿ ಬ್ರಿಟಿಷರ ನಂತರ ನಿರುದ್ಯೊಗ,ಬಡತನ,ಅನಕ್ಷರತೆ ಮಾನವನಿಂದ ಮಾನವ ಶೋಷಣೆ ಮುಕ್ತ ಸಮ ಸಮಾಜವಾದ ಸ್ಥಾಪನೆಯ ಗುರಿ ಹೊಂದಿದ್ದರು. ಅವರು ನಾನು ಸ್ವತಂತ್ರ ನು ಸ್ವತಂತ್ರವಾಗಿ ಇರುತ್ತೆ ಎಂದು  ಕೊನೆಯವರೆಗು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದು ಸ್ವತಂತ್ರವಾಗಿಯೇ ಬ್ರಿಟಿಷರ ಬಲೆಗೆ ಸಿಗದೆ ಪ್ರಾಣ ಕೊಟ್ಟರು ಎಂದು ಹೇಳಿದರು.

ಈ ಕಾಯಕ್ರಮದಲ್ಲಿ ಎಐಡಿಎಸ್‌ಓ ಶಹಾಬಾದ ಅಧ್ಯಕ್ಯರಾದ ತುಳಜರಾಮ ಎನ್ ಕೆ ರವರು ಮಾತನಾಡುತ್ತ ಚಂದ್ರ ಶೇಖರ್ ಆಜಾದ್ ರವರು ೧೯೦೬ ಜುಲೈ  ೨೩ ರಂದು ಮಧ್ಯೆಪ್ರದೇಶದ ಝಬುವಾಗೆ ಎಂಬ ಹಳ್ಳಿಯ ಬಡ ಕುಟುಂಬದಲ್ಲಿ ಜನಿಸಿದ ಅವರು ಮುಂದೆ ದೇಶದ ಪರಿಸ್ಥಿಯನ್ನು ನೋಡಿ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನ ಸಂಪೂರ್ಣವಾಗಿ ತೊಡಗಿಸಿಕೊಂಡರು. ಇವರು ಸ್ಥಾಪಿಸಿದ ಎಚ್ ಎಸ್ ಆರ್ ಎ ಸಂಘಟನೆಯಲ್ಲಿನೆ ಭಗತ್ ಸಿಂಗೆ,ರಾಜ್ ಹರು, ಸುಖದೇವ್,ಹಲವಾರು ಕ್ರಾಂತಿಕಾರಿಗಳು ಇದ್ದರು.

ಬೆಲೆ ಏರಿಕೆ ಖಂಡಿಸಿ ಮಾ.೪ ರಂದು ಜನಾಂದೋಲನ

ಆದರೆ ಇವತ್ತಿನ  ಸರಕಾರ ದೇಶಕ್ಕಾಗಿ ಹೋರಾಡಿದ ಹಲವಾರು ಕ್ರಾಂತಿಕಾಳ ನೈಜಾ ಇತಿಹಾಸವನ್ನು  ಪಠ್ಯಪುಸ್ತಕದಿಂದ ಕೈ ಬಿಟ್ಟದೆ ಎಂದು ವಿಷಾದಿಸಿದರು.ಮುಂದುವರೆದು ಅವರು ಇವತ್ತಿ ವಿದ್ಯಾರ್ಥಿ-ಯುವಜನರು ಆಜಾದ ಅವರ ಆದರ್ಶವನ್ನು ಮೈಗೂಡಿಸಿಕೊಂಡು ಅವರ ಕನಸಿನ ಸಮಾಜವಾದ ಭಾರತ ವನ್ನು ಕಟ್ಟಲು ಪಣತೊಡೊಣ ಎಂದು ಹೇಳಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್‌ಓ ನ ಉಪಾಧ್ಯಕ್ಷರಾದ ರಮೇಶ ದೇವಕರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಐಡಿಎಸ್‌ಓ ಸದಸ್ಯರಾದ ಕಿರಣ್ ಜಿ ಮಾನೆ, ಅಜಯ್ ಎ ಜಿ, ಸಾಕ್ಷಿ ಜಿ ಮಾನೆ,  ಬಾಬು ಪವರ್, ಶ್ರೀಧರ, ರಂಗನಾಥ ಮಾನೆ,  ಚೇತನ ಅತನೂರ, ಸೇರಿ ಹಲವಾರು ವಿದ್ಯಾರ್ಥಿಗಳು ಭಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here