ಯಡಿಯೂರಪ್ಪ ಅಪರೂಪದ ರಾಜಕಾರಣಿ: ನಿಂಗಣ್ಣ ಹುಳಗೋಳಕರ್

1
104

ಶಹಾಬಾದ: ಬಿ.ಎಸ್.ಯಡಿಯೂರಪ್ಪನವರು ಈ ನಾಡು ಕಂಡ ಅಪರೂಪದ ರಾಜಕಾರಣಿ. ಯಾವಾಗಲೂ ಜನರ ಸಮಸ್ಯೆಗಳಿಗೋಸ್ಕರ ಹೋರಾಟ ಮಾಡುತ್ತ ಬಂದ ದೀಮಂತ ನಾಯಕ ಎಂದು ಬಿಜೆಪಿ ಮುಖಂಡ ನಿಂಗಣ್ಣ ಹುಳಗೋಳಕರ್ ಹೇಳಿದರು.

ಅವರು ಶನಿವಾರ ನಗರದ ಬಸವರಾಜ ಮತ್ತಿಮೂಡ ಅಭಿಮಾನಿ ಬಳಗ ಮತ್ತು ಬಿಎಸ್‌ಐ ಅಭಿಮಾನಿ ಬಳಗದ ವತಿಯಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹಾಗೂ ಶಾಸಕ ದತ್ತಾತ್ರೇಯ ಪಾಟೀಲ ಅವರ ಹುಟ್ಟು ಹಬ್ಬದ ನಿಮಿತ್ತ ಸರಕಾರಿ ಜಿ.ಪಿ.ಎಸ್ ಶಾಲೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

“ಮೇ ಆಜಾದ್ ತಾ. ಆಜಾದ್ ಹೊಂಔ ಆಜಾದ್ ಹೀ ರಹೊಂಗಾ “

ಇವರ ರಾಜಕೀಯ ಜೀವನ ಹುಟ್ಟಿಕೊಂಡಿದ್ದೆ ರೈತ ಹೋರಾಟದಿಂದ.ಯಡಿಯೂರಪ್ಪನವರು ಸವೆಸಿದ ಹಾದಿ ಹೋರಾಟದಿಂದ ಕೂಡಿದೆ.ಬಡ ರೈತ ಕುಟುಂಬದಲ್ಲಿ ಜನಿಸಿದ ಇವರು ದಿಡೀರ್ ನಾಯಕರಾದವರಲ್ಲ.ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ನಾಯಕ.ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು.ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಡವರಿಗೆ, ಶೋಷಿತರಿಗೆ,ನಿರ್ಗತಿಕರಿಗೆ ಸಹಾಯಹಸ್ತ ಚಾಚಿದ್ದರು.ಅಂದು ಯಡಿಯೂರಪ್ಪನವರು ಮಾಡಿದ ಅಂಬುಲೆನ್ಸ್ (೧೦೮) ಸೇವೆ,ಬಾಲಕಿಯರಿಗೆ ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್ ಯೋಜನೆ, ವೃದ್ಯಾಪ ವೇತನದಂತಹ ಅನೇಕ ಕೆಲಸಗಳು ಇಂದಿಗೂ ಪರಿಣಾಮಕಾರಿಯಾಗಿದ್ದು, ಎಲ್ಲ ಕಾಲಗಳ ಸರಕಾರಕ್ಕೆ ಮಾದರಿಯಾಗಿದೆ ಎಂದು ಹೇಳಿದರು.

ವಿರೇಶ ಬಂದಳ್ಳಿ ಮಾತನಾಡಿ, ನಾಡಿನ ಮೂಲೆಮೂಲೆಗೂ ಸಂಚರಿಸಿ ಪಕ್ಷಕ್ಕಾಗಿ ಬೆವರು ಹರಿಸಿ ನಿರಂತರ ಶ್ರಮಿಸಿದಕ್ಕೆ ಕರ್ನಾಟಕದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದವರು ಬಿಎಸ್‌ವೈ . ಮುಖ್ಯ ಮಂತ್ರಿಯಾಗಿದ್ದಾಗ ಎಲ್ಲಾ ವರ್ಗದ ಜನರಿಗೆ ಹಲವಾರು ಯೋಜನೆಗಳನ್ನು ತರುವುದರ ಮೂಲಕ ರಾಜ್ಯದ ಜನತೆಯ ನಂಬಿಕೆಯನ್ನು ಗಳಿಸಿದರು ಎಂದರು.

ಬೆಲೆ ಏರಿಕೆ ಖಂಡಿಸಿ ಮಾ.೪ ರಂದು ಜನಾಂದೋಲನ

ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ, ದಿನೇಶ ಗೌಳಿ, ದೇವೆಂದ್ರಪ್ಪ ಯಲಗೋಡಕರ್, ರಾಜು ಕುಂಬಾರ, ದತ್ತಾತ್ರೆಯ ಘಂಟಿ, ಜಯಶ್ರೀ ಸೂಡಿ, ಶಶಿಕಲಾ ಸಜ್ಜನ್, ಮುಖ್ಯಗುರು ಶಿಪುತ್ರ ಕೋಣಿನ್,ಶಿಕ್ಷಕ ಬಸವರಾಜ ಇತರರು ಇದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್, ಪೆನ್ನು ವಿತರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here