ಕತ್ತಲಾದೊಡನೆ ಇಲ್ಲಿ ರಸ್ತೆ ದಾಟಲು, ಟಾರ್ಚ ಹಿಡಿದೇ ತೆರಳಬೇಕು!

0
119

ಶಹಾಬಾದ: ಕತ್ತಲಾದೊಡನೆ ಇಲ್ಲಿನ ರಸ್ತೆ ದಾಟಬೇಕಿದ್ದರೆ, ಟಾರ್ಚ ಹಿಡಿದೇ ತೆರಳಬೇಕು. ಯಾಕೆಂದರೆ ರಸ್ತೆ ಬದಿ ಬೀದಿ ದೀಪಗಳಿಲ್ಲ. ಹೈಮಾಸ್ಟ ದೀಪ ಇದ್ದರೂ ಇಲ್ಲದಂತಾಗಿದೆ.ಸಂಜೆ ಕತ್ತಲು ಉಂಟಾಗುತ್ತಿದ್ದಂತೆ ಸ್ಮಶಾನ ಮೌನ ಆವರಿಸಿ ಇಲ್ಲಿ ಯಾರು ನಿಲ್ಲದಂತಾಗುತ್ತದೆ.ಇದು ರಾಷ್ಟ್ರೀಯ ಹೆದ್ದಾರಿ-೧೫೦ಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಕಂಡು ಬರುವ ನಿತ್ಯದ ಸ್ಥಿತಿ.

ಹೌದು, ನಗರದ ವಾಡಿ-ಶಹಾಬಾದ ವೃತ್ತದಲ್ಲಿ ಹೈಮಾಸ್ಟ ದೀಪ ಇದ್ದು ಇಲ್ಲದಂತಾಗಿದ್ದು, ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಯಡಿಯೂರಪ್ಪ ಅಪರೂಪದ ರಾಜಕಾರಣಿ: ನಿಂಗಣ್ಣ ಹುಳಗೋಳಕರ್

ಸುಮಾರು ಐದಾರು ತಿಂಗಳ ಹಿಂದೆ ಜಿಪಂ ಚಿತ್ತಾಪೂರ ವಿಭಾಗದಿಂದ ಲಕ್ಷಗಟ್ಟಲೇ ಅನುದಾನದಲ್ಲಿ ಹೈಮಾಸ್ಟ ಕಂಬ ಮತ್ತು ದೀಪ ಅಳವಡಿಸಿ ಹೋಗಲಾಗಿದೆ.ಆದರೆ ಇಲ್ಲಿಯವರೆಗೆ ವಿದ್ಯುತ್  ಜೋಡಣೆ ಮಾಡದಿರುವುದರಿಂದ ಇಲ್ಲಿನ ಬಹುತೇಖ ಸಾರ್ವಜನಿಕರು ಹಾಗೂ ಪ್ರಯಾಣಿಕರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ-೧೫೦ಗೆ ಹೊಂದಿಕೊಂಡಿರುವ ಮುಖ್ಯ ವೃತ್ತದಲ್ಲಿ ಈ ರಿತೀಯ ವ್ಯವಸ್ಥೆ ಕಂಡು ಬಂದಿದ್ದು, ಇಲ್ಲಿನ ಜನಪ್ರತಿನಿಧಿಗಳು ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ದಟ್ಟ ಸಂಚಾರಿ ವ್ಯವಸ್ಥೆ ಹಾಗೂ ಚಿತ್ತಾಪೂರ,ವಾಡಿ, ಯಾದಗಿರಿ ಮುಖ್ಯ ನಗರಕ್ಕೆ ಈ ಮಾರ್ಗದ ಮೂಲಕವೇ ಸಾಕಷ್ಟು ವಾಹನಗಳು ಹೋಗುತ್ತವೆ. ಮುಖ್ಯ ವೃತ್ತವಾಗಿರುವುದರಿಂದ ಜನದಟ್ಟಣೆ ಸಾಕಷ್ಟಿರುತ್ತದೆ.

ಸಂಜೆ  ಕತ್ತಲು ಆವರಿಸಿರುವುದರಿಂದ ಪಾದಚಾರಿಗಳು, ವಾಯುವಿಹಾರ ಮಾಡುವವರು, ಪ್ರಯಾಣಿಕರು ಈ ಕಡೆ ಬರಲು ಭಯ ಪಡುತ್ತಿದ್ದಾರೆ. ಅಲ್ಲದೇ ವಾಹನಗಳ ಅಪಘಾತಗಳು ಹೆಚ್ಚುತ್ತಿವೆಯದರೂ ಯಾರು ಈ ಕಡೆ ಗಮಹರಿಸುತ್ತಿಲ್ಲ.ಹೈಮಾಸ್ಟ ದೀಪ ಅಳವಡಿಸಿ ವಿದ್ಯುತ್ ಜೋಡಣೆ ಮಾಡದಿರುವ ಗುತ್ತಿಗೆದಾರರಿಗೆ  ಮೇಲೆ ಕ್ರಮಕೈಗೊಂಡಿಲ್ಲ.ಅಲ್ಲದೇ ಸುಮಾರು ತಿಂಗಳಿಂನಿಂದ ಸಂಬಂಧಪಟ್ಟ ಅಧಿಕಾರಿ ಮೌನವಾಗಿದ್ದಾರೆ. ದೀಪವೇ ಉರಿಯುತ್ತಿಲ್ಲ ಎಂದರೆ ಲಕ್ಷಗಟ್ಟಲೇ ಸಾರ್ವಜನಿಕ ಹಣ ಪೋಲು ಮಾಡುವುದಾದರೂ ಯಾಕೇ? ಎಂಬ ಪ್ರಶ್ನೆ ಸಾರ್ವಜನಿಕರದ್ದು.ಜಿಪಂ ಅಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೇ ವಿದ್ಯುತ್ ಜೋಡಣೆ ಮಾಡದಿರುವುದು ಕೂಡ ಅವರಿಗೆ ಗೊತ್ತಿಲ್ಲ ಎಂಬ ಹೇಳಿಕೆ ನೀಡಿರುವುದು ಮಾತ್ರ ವಿಷಾದಧ ಸಂಗತಿ.ಕೂಡಲೇ ಹೈಮಾಸ್ಟ ದೀಪ ಉರಿಯುವಂತೆ ಮಾಡಬೇಕೆಂಬುದು ಸಾರ್ವಜನಿಕರು ಆಗ್ರಹವಾಗಿದೆ.

ವಾಡಿ-ಶಹಾಬಾದ ವೃತ್ತದಲ್ಲಿ ಬೆಳಕಿನ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗೆ ತಿಳಿಸಿ ವ್ಯವಸ್ಥೆ ಮಾಡಿಸುತ್ತೆನೆ.ಅಲ್ಲದೇ ಪ್ರಯಾಣಿಕರಿಗೆ ಕೂಡಲು ಯಾವುದೇ ವ್ಯವಸ್ಥೆ ಇಲ್ಲ ಎಂದು ತಿಳಿದುಬಂದಿದ್ದು, ಸದ್ಯದಲ್ಲೇ ಬಸ್ ಸ್ಟ್ಯಾಂಡ್ ನಿರ್ಮಾಣ ಮಾಡಲಾಗುವುದು.  ಬಸವರಾಜ ಮತ್ತಿಮಡು ಶಾಸಕರು.

“ಮೇ ಆಜಾದ್ ತಾ. ಆಜಾದ್ ಹೊಂಔ ಆಜಾದ್ ಹೀ ರಹೊಂಗಾ “

ಮೊದಮೊದಲು ಅಧಿಸೂಚಿತ ಕ್ಷೇತ್ರ ಸಮಿತಿಯವರು ಹೈಮಾಸ್ಟ ದೀಪ ಅಳವಡಿಸಿದ್ದಾರೆ ಎಂದು ತಿಳಿದುಕೊಂಡಿದ್ದರು.ನಂತರ ದೀಪ ಬೆಳಗತ್ತಿಲ್ಲ ಎಂದು ಅವರಿಗೆ ತಿಳಿಸಿದರೇ,ಅದನ್ನು ನಾವು ಅಳವಡಿಸಿಲ್ಲ್ಲ ಎಂದು ಹೇಳಿದರು.ನಂತರ ನಗರಸಭೆಯ ಅಧಿಕಾರಿಗಳಿಗೆ ತಿಳಿಸಿದಾಗ ಅವರು ನಾವು ಅಳವಡಿಸಿದಲ್ಲ ಎಂದರು.ಆಗ ಯಾರಿಗೆ ಸೇರಿದ್ದು ಎಂಬ ಗೊಂದಲ ಉಂಟಾಗಿತ್ತು.ನಂತರ ಜಿಪಂ ಸಂಬಂಧಿಸಿದ್ದು ಎಂದು ತಿಳಿದಾಗ ಗೊಂದಲ ನಿವಾರಣೆಯಾಗಿದೆ.ಆದರೆ ಗೊಂದಲ ನಿವಾರಣೆಯಾದರೂ ಬೆಳಕಿನ ವ್ಯವಸ್ಥೆಯಾಗದಿರುವುದು ಮಾತ್ರ ದುರ್ದೈವ.

ಚಿತ್ತಾಪೂರ ಜಿಪಂದಿಂದ ಹೈಮಾಸ್ಟ ಕಂಬ ಮತ್ತು ದೀಪ ಅಳವಡಿಸಲಾಗಿದೆ.ಆದರೆ ವಿದ್ಯುತ್ ಜೋಡಣೆ ಮಾಡದಿರುವ ಬಗ್ಗೆ ಮಾಹಿತಿ ಇಲ್ಲ.ಕೂಡಲೇ ವಿದ್ಯುತ್ ದೀಪ ಬೆಳಗುವಂತೆ ಕ್ರಮಕೈಗೊಳ್ಳುತ್ತೆನೆ. -ಶ್ರೀಧರ್ ಜಿಪಂ ಎಇಇ ಚಿತ್ತಾಪೂರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here