ಶಾಲಾ-ಕಾಲೇಜು ಸಮಯಕ್ಕೆ ಬಸ್ ಓಡಿಸಿ ಹಿಂಚಗೇರಾ ಗ್ರಾಮದ ವಿದ್ಯಾರ್ಥಿಗಳು, ಪಾಲಕರ ಆಗ್ರಹ

0
37

ಅಫಜಲಪುರ: ತಾಲೂಕಿನ ಹಿಂಚಗೇರಾ ಗ್ರಾಮದ ಮಾರ್ಗವಾಗಿ ಘತ್ತರಗಾ ಗ್ರಾಮಕ್ಕೆ ಹೆಚ್ಚವರಿ ಹಾಗೂ ವಿದ್ಯಾರ್ಥಿಗಳ ಶಾಲಾ-ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್ ಓಡಿಸಿಲು ತಾಲೂಕಿನ ಹಿಂಚಗೇರಾ ಗ್ರಾಮದ ವಿದ್ಯಾರ್ಥಿಗಳು ಹಾಗೂ ಪಾಲಕರು ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಆಗ್ರಹ ಪಡಿಸಿದ್ದಾರೆ.

ತಾಪಂ ಮಾಜಿ ಸದಸ್ಯೆ ಹಾಗೂ ಗಾಪಂ ಮಾಜಿ ಸದಸ್ಯ ಪರಮೇಶ್ವರ ಕುಂಬಾರ ಮಾತನಾಡಿ ಅಫಜಲಪುರದಿಂದ ಹಿಂಚಗೇರಾ ಮಾರ್ಗವಾಗಿ ಘತ್ತರಗಾ ಗ್ರಾಮಕ್ಕೆ ಬಸ್‌ಗಳ ಸಂಖ್ಯೆ ಇನ್ನು ಹೆಚ್ಚವರಿ ಮಾಡಬೇಕು ಕಾರಣ ಘತ್ತರಗಾ ಮಾರ್ಗವಾಗಿ ಬರುವ ಬಸ್ಸಿಗೆ ಹವಳಗಾ, ಹಿಂಚಗೇರಾ, ಕೇಸಾಪೂರ, ಶಿವಪೂರ, ಬನ್ನಟ್ಟಿ ಐದಾರು ಗ್ರಾಮಗಳಿಂದ ಎರಡನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ದಿನ ನಿತ್ಯ ಪ್ರಯಾಣ ಮಾಡುತ್ತಾರೆ.

Contact Your\'s Advertisement; 9902492681

ಸುಕ್ಷೇತ್ರ ದೇವಲ ಗಾಣಗಾಪುರದ ಭೀಮಾ – ಅಮರ್ಜಾ ಸಂಗಮ ನದಿಯಲ್ಲಿ ಸ್ವಚ್ಚತಾ ಅಭಿಯಾನ

ಈ ಮಧ್ಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಒಂದೇ ಸಮಯಕ್ಕೆ ಹತ್ತುವದರಿಂದ ಬಸ್ ತುಂಬಿ ತುಳುಕುತ್ತಿದೆ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯರಿಗೆ ಕುಳಿತು ಕೊಳ್ಳಲು ಆಸನಗಳು ಇಲ್ಲದೇ ನಿಂತುಕೊAಡು ಪ್ರಯಾಣ ಮಡಬೇಕು ಅಲ್ಲದೇ ವಿದ್ಯಾರ್ಥಿಗಳು ಬಾಗೀಲ ಬಳಿ ಜೋತು ಬಿದ್ದು ಅಪಾಯದ ಪ್ರಯಾಣ ಮಾಡುತ್ತಿದ್ದಾರೆ ಹೀಗಾಗಿ ವಿದ್ಯಾರ್ಥಿಳ ಶಾಲಾ ಕಾಲೇಜು ಸಮಯಕ್ಕೆ ಅನುಗುಣವಾಗಿ ಬಸ್‌ಗಳನ್ನು ಓಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಿ ಎಂದು ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here