“ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಇರುವ ಸ್ಪೂರ್ತಿಯ ಸಂಕೇತ ಆಜಾದ್”

1
30

ಕಲಬುರಗಿ : ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಷನ್ ( ಎ ಐ ಡಿ ವೈ ಓ) ಜಿಲ್ಲಾ ಸಮಿತಿ ಯಿಂದ ಮಹಾನ್ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್ ರ 91ನೇ ಸ್ಮರಣ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಭಾಷಣಕಾರರಾಗಿ ಆಗಮಿಸಿ ಎಐಡಿವೈಓ ರಾಜ್ಯಾಧ್ಯಕ್ಷೆ ಎಂ. ಉಮಾದೇವಿ ಮಾತನಾಡಿ ‘ಚಂದ್ರಶೇಖರ್ ಆಜಾದ್ ಅಪ್ರತಿಮ ಕ್ರಾಂತಿಕಾರಿಯಾಗಿದ್ದರು. ಅವರು ವಿದ್ಯಾರ್ಥಿ ದೆಸೆಯಿಂದಲೇ ಕ್ರಾಂತಿಕಾರಿ ಹೋರಾಟದಲ್ಲಿ ಧುಮುಕಿದರು. ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ತುಂಬಾ ಹೊಸ ಸಂಚಲನ ಮೂಡಿಸಿದೆ. ಹರಿದು ಹಂಚಿಹೋಗಿದ್ದ ಕ್ರಾಂತಿಕಾರಿಗಳನ್ನು ಒಗ್ಗೂಡಿ ಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Contact Your\'s Advertisement; 9902492681

ರಾಷ್ಟ್ರದ ಅಭಿವೃದ್ಧಿಗೆ ಎನ್‌ಜಿಓಗಳ ಕೊಡುಗೆ ಅಮೋಘ

ಭಾರತ ಸ್ವಾತಂತ್ರ್ಯಸಂಗ್ರಾಮದ ಕೆಚ್ಚೆದೆಯ ನಾಯಕರಾಗಿದ್ದರು. ಅವರ ದೇಶಪ್ರೇಮ ಮತ್ತು ಸಾಹಸಮಯ ಚಳುವಳಿ ಸಾವಿರಾರು ವಿದ್ಯಾರ್ಥಿ-ಯುವಕರಲ್ಲಿ ಸ್ಪೂರ್ತಿಯನ್ನು ತುಂಬಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಸುವಂತೆ ಮಾಡಿತ್ತು ಎಂದರು.

ಅವರ ಕನಸು ನನಸು ಮಾಡಲು ಪ್ರತಿಯೊಬ್ಬರು ಮುಂದೆ ಬರಬೇಕು. ಅವರ ಭವ್ಯ ಮತ್ತು ಸಾಹಸಮಯ ಜೀವನ ನಮಗೆಲ್ಲರಿಗೂ ಆದರ್ಶ ಸ್ಪೂರ್ತಿ ಎಂದರು.

ಶಾಲಾ-ಕಾಲೇಜು ಸಮಯಕ್ಕೆ ಬಸ್ ಓಡಿಸಿ ಹಿಂಚಗೇರಾ ಗ್ರಾಮದ ವಿದ್ಯಾರ್ಥಿಗಳು, ಪಾಲಕರ ಆಗ್ರಹ

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಜಯ ಲಕ್ಷ್ಮೀ ಎಲ್. ಕೆ. ವಹಿಸಿ ಮಾತನಾಡಿದರು.ಪ್ರಾಸ್ತಾವಿಕ ವಾಗಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ ಎಸ್. ಎಚ್ ಮಾತನಾಡಿದರು. ಸ್ವಾಗತ ಮತ್ತು ನಿರೂಪಣೆ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ್ ಪಾಣೇಗಾಂವ್ ನಡೆಸಿಕೊಟ್ಟರು.

ವೇದಿಕೆ ಮೇಲೆ ಕಾಲೇಜಿನ ಕುಲ ಸಚಿವ ಶಿವಶರಣ ಗೌರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ವನಿತಾ ಮೇಡಂ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯ ಬಸವರಾಜ ಬೇಲೂರ್, ಶಿವಗಣೇಶ್ ಮಾಳಾ, ವಿದ್ಯಾರ್ಥಿನಿಯರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here