ಶರಣ ಕಿನ್ನರಿ ಬೊಮ್ಮಯ್ಯ ಜಯಂತಿ

0
21

ಭಾಲ್ಕಿ: ಬಸವಾದಿ ಶರಣರ ಸಮಕಾಲೀನರಲ್ಲಿ ಒಬ್ಬರಾದ ಕಿನ್ನರಿ ಬೊಮ್ಮಯ್ಯ ಅಕ್ಕಸಾಲಿಗ ವೃತ್ತಿಯಲ್ಲಿದ್ದರು. ಕಿನ್ನರಿ ವಾದ್ಯ ನುಡಿಸುವಲ್ಲಿ ಪ್ರವೀಣರಾಗಿದ್ದರು. ತ್ರಿಪುರಾಂತಕ ಲಿಂಗ ವಚನಾಂಕಿತದಲ್ಲಿ ಇವರ ಹದಿನೆಂಟು ವಚನಗಳು ಲಭಿಸಿವೆ ಎಂದು ಪೂಜ್ಯ ಗುರುಬಸವ ಪಟ್ಟದ್ದೇವರು ನುಡಿದರು. ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಜರುಗಿದ ೪೩೯ನೇ ಮಾಸಿಕ ಶಿವಾನುಭವ ಗೋಷ್ಟಿ ಮತ್ತು ಶರಣ ಕಿನ್ನರಿ ಬೊಮ್ಮಯ್ಯ ಜಯಂತಿ ಕಾರ್ಯಕ್ರಮದ ದಿವ್ಯಸನ್ನಿಧಾನ ವಹಿಸಿ ಪೂಜ್ಯಶ್ರೀಗಳು ಆಶೀರ್ವಚನಗೈದರು.

ಹಳ್ಳಿಖೇಡ ಗ್ರಾಮದ ಮುಖಂಡ ಸುಭಾಷ ವಾರದ ಮತ್ತು ಮುಖ್ಯಗುರು ಭಕ್ತರಾಜ ಚಿತ್ತಾಪುರ ಮುಖ್ಯ ಅತಿಥಿಗಳಾಗಿ ಮಾತಾಡಿದರು. ದಾಡಗಿ ಮತ್ತು ಹಳ್ಳಿಖೇಡ ಗ್ರಾಮದ ವಿಶ್ವನಾಥ ಚಿಕ್ಕಪಾಟೀಲ, ಜಗನ್ನಾಥ ಪಾಂಚಾಳ, ಗುರುಬಸವಯ್ಯ ಹಿರೇಮಠ, ಮಹಾದೇವ ಇಂಡಿ, ಗುಂಡಪ್ಪ ಕೋರಿ, ಜಗನ್ನಾಥ ಚಿಕ್ಕಪಾಟೀಲ, ಕಲ್ಯಾಣರಾವ, ಜಗನ್ನಾಥ, ಬಸವರಾಜ, ಮಲ್ಲಿಕಾರ್ಜುನ ಮಣಗೀರೆ, ಶಾಂತಯ್ಯ ಸ್ವಾಮಿ, ಬಾಬು ಬೆಲ್ದಾಳ ಉಪಸ್ಥಿತರಿದ್ದರು.

Contact Your\'s Advertisement; 9902492681

ಡಾ.ಹಾಲಸ್ವಾಮಿ ಕೆ.ಜಿಗೆ ವಿದ್ಯಾರ್ಥಿಗಳು, ಹಿರಿಯ ಪತ್ರಕರ್ತರಿಂದ ಸನ್ಮಾನ

ಚಂದ್ರಮ್ಮ ಶಿವಮೂರ್ತೆಪ್ಪ ಪಟ್ನೆ ಸ್ಮರಣಾರ್ಥ ಶ್ರೀದೇವಿ ರಮೇಶ ಪಟ್ನೆ ಭಕ್ತಿ ದಾಸೋಹ ವಹಿಸಿಕೊಂಡಿದ್ದರು. ನವದಂಪತಿಗಳಾದ ಡಾ.ಶಿವಲೀಲಾ ಮತ್ತು ಡಾ.ಸಂಗಮೇಶ ಅವರಿಗೆ ಆಶೀರ್ವದಿಸಲಾಯಿತು. ಪ್ರಸಾದ ನಿಲಯದ ಮಕ್ಕಳಿಂದ ವಚನ ಪ್ರಾರ್ಥನೆ ನಡೆಯಿತು. ವೀರಣ್ಣ ಕುಂಬಾರ ನಿರೂಪಿಸಿದರು. ರಾಜು ಜುಬರೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here