ಆಳಂದ: ತಾಲೂಕಿನ ಸುಂಟನೂರ ಗ್ರಾಮ ಪಂಚಾಯತನಲ್ಲಿ ನಡೆದಿದೆ ಎನ್ನಲಾದ ಲಕ್ಷಾಂತ ರೂಪಾಯಿ ಅವ್ಯವಹಾರವನ್ನ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಗ್ರಾಪಂ ಕಚೇರಿಯ ಮುಂದೆ ಮಂಗಳವಾರ ಪ್ರಾರಂಭಿಸಿದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಗುರುವಾರ ೨ನೇ ದಿನಕ್ಕೆ ಕಾಲಿಟ್ಟಿದೆ.
ಸ್ಥಳಕ್ಕೆ ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಮೊಮ್ಮದ್ ಸಲೀಂ ಭೇಟಿ ನೀಡಿ ಬೇಡಿಕೆಗೆ ಸ್ಪಂದಿಸಲಾಗುವುದು ಧರಣಿ ಹಿಂದಕ್ಕೆ ಪಡೆಯುವಂತೆ ಮಾಡಿದ ಮನವಿ ಫಲಿಸದ ಹಿನ್ನೆಲೆಯಲ್ಲಿ ಗುರುವಾರ ೨ನೇ ದಿನಕ್ಕೆ ಧರಣಿ ಕಾಲಿಟ್ಟಿತು.
ಬಿಜೆಪಿ ರೈತ ಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಯಳಮೇಲಿಗೆ ಸನ್ಮಾನ
ಧರಣಿಯಲ್ಲಿ ಪಾಲ್ಗೊಂಡಿದ್ದ ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ ಅವರು ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಬಂದ ಅನುದಾನವನ್ನು ಸದ್ಬಳಕೆ ಮಾಡಬೇಕಾದ ಅಧಿಕಾರಿಗಳು ಮತ್ತು ಸಂಬಂಧಿತ ಜನಪ್ರತಿನಿಧಿಗಳು ಸೇರಿಕೊಂಡು ಸುಮಾರು ೫೭ ಲಕ್ಷ ರೂಪಾಯಿ ದುರ್ಬಳಕ್ಕೆ ಮಾಡಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಳ್ಳದೆ ಲೂಟಿಕೂರರ ಮೇಲೆ ಸಹನುಭೂತಿ ತೋರಿಸಲಾಗುತ್ತಿದೆ ಎಂದು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.
ಕಳೆದ ಜ.೨೧ರಂದು ಬೇಡಿಕೆಗೆ ಒತ್ತಾಯಿಸಿ ಪ್ರತಿಭಟನಾ ಧರಣಿ ಕೈಗೊಂಡ ಮೇಲೆ ವಾರದಲ್ಲಿ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿತು. ಆದರೆ ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಇರುವುದರಿಂದ ಮಂಗಳವಾರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಸ್ಥಳಕ್ಕೆ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಭರವಸೆ ನೀಡುವತನಕ್ಕೆ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಅವರು ಹೇಳಿದರು.
ಕರೋನಾ ಸೇವೆಗೈದ ಪೋಲಿಸರಿಗೆ ಸನ್ಮಾನ
೨೦೨೦ ಹಾಗೂ ೨೦೨೧ನೇ ಸಾಲಿನ ೧೪ನೇ ಹಣಕಾಸು ಯೋಜನೆಯ ಅಡಿಯಲ್ಲಿ ೩೦ ಲಕ್ಷ ರೂಪಾಯಿ ನಿರ್ಮಲ ಭಾರತ ಯೋಜನೆಯ ೭ ಲಕ್ಷ ರೂಪಾಯಿ, ೧೫ನೇ ಹಣಕಾಸಿನ ೫ ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಬಸವ ವಸತಿ ಯೋಜನೆಯ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಣ ಒದಗಿಸದೆ ಚಂಚಿಸಲಾಗಿದೆ. ಗ್ರಾಪಂ ಪಂಪಸೆಟ್, ಕಬ್ಬಿಣ ಪೈಪಗಳು ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ದುರ್ಬಳಕೆಯಾದ ಅನುದಾನದ ಕುರಿತು ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಂಡು ದುರ್ಬಳಕೆಯಾದ ಅನುದಾನವನ್ನು ವಸೂಲಾಯಿತಿ ಕೈಗೊಂಡು ಗ್ರಾಮದಲ್ಲಿ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟದ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದೆಂದು ಸಿಎಂ ಬಳಿ ನಿಯೋಗ
ಸತ್ಯಾಗ್ರಹದಲ್ಲಿ ಸುಂಟನೂರ ಗ್ರಾಮ ಘಟಕದ ಅಧ್ಯಕ್ಷ ಅಂಬರೀಶ ಕುಂಬಾರ, ಗೌರವ ಅಧ್ಯಕ್ಷ ಜನಾರ್ಧನ ದೇಶಪಾಂಡೆ, ನಿಂಬರಗಾ ವಲಯ ಮುಖಂಡ ನೀಲಕಂಠ ಶೇರಿ, ಸುನೀಲ ಐರೊಡಗಿ, ಮಲ್ಲಿಕಾರ್ಜುನ ಕೋರಳ್ಳಿ, ಜನಾರ್ಧನ ದೇಶಪಾಂಡೆ, ಬಾಬುರಾವ್ ಚಿಂಚೋಳಿ, ಶರಣಬಸಪ್ಪ ದಣ್ಣೂರ, ವಿಠ್ಠಲ ಗುಂಡದ, ಶಮೀರ್‌ಸಾಬ ಆಳಂದ, ಈರಣ್ಣಾ ಸುತ್ತಾರ, ಶ್ರೀಮಂತ ನಾಯಿಕೊಡಿ, ಶರಣಪ್ಪ ನ್ಯಾಮನ್,ಸಾಗರ ಕುಲಕರ್ಣಿ, ಅಪ್ಪಾರಾಯ ನಾಯಿಕೋಡಿ, ಕುಪೇಂದ್ರ ಮೇಲಿನಕೇರಿ ಮತ್ತಿತರ ಪಾಲ್ಗೊಂಡಿದ್ದರು.
ಜಿಪಂ ಸಿಇಒ ಅವರು ಭೇಟಿ ನೀಡಿ ಸೂಕ್ತ ಭರವಸೆ ನೀಡುವ ತನಕ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದು ಕಾರ್ಯಕರ್ತರು ಧರಣಿ ಮುಂದುವರೆಸಿದರು.