ಕೇಂದ್ರೀಯ ವಿಶ್ವವಿದ್ಯಾಲಯದ 13ನೇ ಸಂಸ್ಥಾಪನಾ ದಿನಾಚರಣೆ

0
35

ಕಲಬುರಗಿ: ಕಲ್ಯಾಣಕರ್ನಾಟಕ ಪ್ರದೇಶದಲ್ಲಿಉನ್ನತ ಶೈಕ್ಷಣದಲ್ಲಿದಾಖಲಾತಿಅನುಪಾತತುಂಬಾಕಡಿಮೆಇದೆ, ಆದ್ದರಿಂದ, ಇಲ್ಲಿ ಸಿಯುಕೆಯಂತಹ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಅಗತ್ಯತೆಇದೆ ಎಂದುಆಂದ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ. ವಿ. ಕಟ್ಟಿಮನಿ ಹೇಳಿದರು.

ಅವರು ಕಲಬುರಗಿಯಕರ್ನಾಟಕಕೇಂದ್ರೀಯ ವಿಶ್ವವಿದ್ಯಾಲಯದ ೧೩ನೇ ಸಂಸ್ಥಾಪನಾ ದಿನದ ಅಂಗವಾಗಿ ಉಪನ್ಯಾಸ ನೀಡುತ್ತಿದ್ದರು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಾಯಕತ್ವದ ಬಗ್ಗೆ ಅವರು ವಿಶ್ವವಿದ್ಯಾಲಯದ ಭವಿಷ್ಯವನ್ನುರೂಪಿಸುವಲ್ಲಿ ನಾಯಕತ್ವ ಬಹಳ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿಶ್ವವಿದ್ಯಾಲಯದ ಕುಲಪತಿಗಳಾದವರಿಗೆ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳ ಮಾಹಿತಿಇರಬೇಕು.

Contact Your\'s Advertisement; 9902492681

ಗ್ರಾಪಂ ಲಕ್ಷಾಂತರ ಹಣ ದುರ್ಬಳಕ್ಕೆ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ

ಏಕೆಂದರೆ, ಪ್ರತಿಯೊಂದು ವಿಷಯಗಳ ನಡುವೆ ಸಂಬಂಧವಿದೆ. ನಾವು ವಿಶ್ವವಿದ್ಯಾಲಯದಲ್ಲಿ ಬಹುಶಿಸ್ತಿನ ಹಾಗೂ ಅಂತರ್ ಶಿಸ್ತೀಯ ವ್ಯವಸ್ಥೆಯನ್ನುಜಾರಿಗೆತರಬೇಕು. ಪಾಣಿನಿ ಅವರಿಗೆಗಣಿತ, ಸಂಸ್ಕೃತ, ಸಂಗೀತ, ವ್ಯಾಕರಣ ಹೀಗೆ ಅನೇಕ ವಿಷಯಗಳಲ್ಲಿ ಪರಿಣಿತರಾಗಿದ್ದರು. ಅವರಂತೆ ವಿಶ್ವವಿದ್ಯಾಲಯವನ್ನು ನಿರ್ಮಿಸುವಜವಾಬ್ದಾರಿ ಹೊಂದಿರುವ ಕುಲಪತಿಗಳು ಬಹುಶಿಸ್ತೀಯ ವಿದ್ವಾಂಸರಾಗಿರಬೇಕು ಮತ್ತು ಶೈಕ್ಷಣಿಕ ಮುನ್ನೋಟದಅರಿವಿರಬೇಕು ಎಂದು ಹೇಳಿದರು.

ಹೊಸದಾಗಿ ರಚಿಸಿರುವ ರಾಷ್ಟ್ರೀಯಶಿಕ್ಷಣ ನೀತಿಯ (ಎನ್‌ಇಪಿ) ಕುರಿತು ಮಾತನಾಡಿದಅವರು ಭಾರತಕ್ಕೆಪ್ರಸ್ತುತವಾಗಿ ನಮ್ಮಲ್ಲಿರುವುದರ ಕ್ಕಿಂತ ಭಿನ್ನವಾದ ಶೈಕ್ಷಣಿಕ ವ್ಯವಸ್ಥೆಯಅಗತ್ಯವಿದೆ. ನಾವು ನಮ್ಮ ಹಳ್ಳಿಯ ಜೀವನ, ಸ್ಥಳೀಯ ಸಂಸ್ಕೃತಿ, ಸ್ಥಳೀಯ ಕೃಷಿ ವ್ಯವಸ್ಥೆ, ಬೀಜ ಸಂಸ್ಕರಣೆ. ನೀರಾವರಿ ವ್ಯವಸ್ಥೆ, ಆಹಾರತಯಾರಿಕೆ ಪದ್ಧತಿ, ಇತ್ಯಾದಿಗಳನ್ನು ಪುನರ್‌ಅಧ್ಯಯನ ಮಾಡುವಅವಶ್ಯಕತೆಇದೆ. ಆದ್ದರಿಂದ, ಸ್ಥಳೀಯ ಜ್ಞಾನದಆಧಾರದ ಮೇಲೆ ಹೊಸ ಶಿಕ್ಷಣ ವ್ಯವಸ್ಥೆಯನ್ನುರೂಪಿಸುವ ಮತ್ತುಅದನ್ನು ಅನುಷ್ಠಾನಕ್ಕೆ ತರುವಅಗತ್ಯತೆಇದೆ. ನಮ್ಮಲ್ಲಿ ಪ್ರಮಾಣಪತ್ರ ಹೊಂದಿದವರನ್ನು ಮಾತ್ರ ವಿಜ್ಞಾನಿಗಳೆಂದು ಪರಿಗಣಿಸುತ್ತೇವೆ, ಆದರೆ, ನಮ್ಮಲ್ಲಿ ಸ್ಥಳೀಯ ಜ್ಞಾನ ಹೊಂದಿರುವ ಲಕ್ಷಾಂತರ ವಿಜ್ಞಾನಿಗಳಿದ್ದಾರೆ.

ಬಿಜೆಪಿ ರೈತ ಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ಯಳಮೇಲಿಗೆ ಸನ್ಮಾನ

ಆದರೆ, ಅವರ ಈ ಜ್ಞಾನ ಮತ್ತುಕೌಶಲ್ಯವನ್ನುಗುರುತಿಸುವಲ್ಲಿ ಹಾಗೂ ಅದನ್ನು ಬಳಸುವಲ್ಲಿ ನಾವು ವಿಫಲರಾಗಿದ್ದೇವೆ. ಆರ್ಥಿಕಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ನಾವು ಈ ಸ್ಥಳೀಯ ಜ್ಞಾನ ಮೂಲಗಳನ್ನು ಅನ್ವೇಷಿಸಬೇಕಾಗಿದೆ. ಜ್ಞಾನ ಸೃಷ್ಠಿ ಕೇವಲ ಇಂಗ್ಲೀಷ್ ಭಾಷೆಯ ಪ್ರಾವೀಣ್ಯತೆಯ ಮೇಲೆ ಅವಲಂಬಿತವಾಗಿದೆ ಎಂಬ ತಪ್ಪುಕಲ್ಪನೆಯಲ್ಲಿ ನಾವಿದ್ದೇವೆ, ಆದರೆ, ಇದು ನಿಜವಲ್ಲ. ಏಕೆಂದರೆ, ನಮಗೆ ಸ್ಥಳೀಯ ಭಾಷೆಗಳಲ್ಲಿ ಅಪಾರಜ್ಞಾನವಿದೆ ಮತ್ತು ಸ್ಥಳೀಯವರಿಗೆ ತಿಳಿದಿರುವ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರಿಂದಜ್ಞಾನದ ಸಂಪಾದನೆ ಮತ್ತು ಪ್ರಸರಣೆ ಸರಾಗವಾಗುತ್ತದೆ.

ಎನ್‌ಇಪಿಯು ಮುಖ್ಯವಾಗಿ ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ. ಆದ್ದರಿಂದ ಸ್ಥಳೀಯ ಜ್ಞಾನ ಮತ್ತು ಸಂಸ್ಕೃತಿಯೊಂದಿಗೆ ಹೊಂದಾಣಿಕೆ ಮಾಡಲು ನಾವು ಎನ್‌ಇಪಿ ಅನುಗುಣವಾಗಿ ನಮ್ಮ ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕೌಶಲ್ಯ ಮತ್ತುಜ್ಞಾನದಅಭಿವೃದ್ಧಿಗಾಗಿ ವಿ.ವಿ. ಗಳು ಸ್ಥಳೀಯ ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಎಲ್ಲಾ ವಿಷಯಗಳಲ್ಲಿ ಮತ್ತು ತರಗತಿಗಳಲ್ಲಿ ’ಕಲಿಯುವಾಗ ಸಂಪಾದಿಸು’ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ವಿಶ್ವವಿದ್ಯಾಲಯಗಳು ಸಮಾಲೋಚನೆ, ಸಂಶೋಧನೆ, ಉದ್ಯಮಗಳೊಂದಿಗೆ ಸಹಯೋಗ ಮತ್ತು ಶೈಕ್ಷಣಿಕ ಉದ್ಯಮಶೀಲತೆಯ ಮೂಲಕ ಆಂತರಿಕ ಸಂಫನ್ಮೂಲವನ್ನುಕ್ರೋಢೀಕರಿಸುವತ್ತ ಹೆಚ್ಚಿನಒತ್ತು ನೀಡಬೇಕು ಎಂದುಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ‌ ಮುಂದೆ ವೈದ್ಯನಿಗೆ ಚಾಕಿವಿನಿಂದ ಕೊಲೆಗೆ ಯತ್ನ

ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕುಲಾಧಿಪತಿಗಳಾದ ಪ್ರೊ. ಎನ್. ಆರ್. ಶೆಟ್ಟಿಅವರು ಮಾತನಾಡಿ ಸಿಯುಕೆ ಅಲ್ಪಾವಧಿಯಲ್ಲಿ ಅಸಾಧಾರಣ ಪ್ರಗತಿ ಮತ್ತು ಶೈಕ್ಷಣಿಕಉತ್ಕೃಷ್ಠತೆಂiiನ್ನು ಸಾಧಿಸಿದೆ; ಆದ್ದರಿಂದ, ನಾವು ಕುಲಪತಿ ಮತ್ತು ಅವರತಂಡವನ್ನು ಅಭಿನಂದಿಸುತ್ತೇನೆ. ಶೈಕ್ಷಣಿಕ ಬೆಳವಣಿಗೆಗಾಗಿ ವಿಶ್ವವಿದ್ಯಾಲಯವು ಅನೇಕ ರಾಷ್ಟೀಯ ಮತ್ತುಅಂತರ್‌ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಮತ್ತು ವಿದ್ಯಾರ್ಥಿಗಳಿಗೆ ಹಾಗೂ ಅಧ್ಯಾಪಕರಿಗೆ ವಿಶ್ವದರ್ಜೆಯ ಕಲಿಕೆ ಮತ್ತು ಸಂಶೋಧನೆಗೆ ವೇದಿಕೆಯನ್ನು ಸೃಷ್ಠಿಸಿದೆ ಎಂದು ಹೇಳಿದರು.

ಕುಲಪತಿಗಳಾದ ಪ್ರೊ. ಎಂ. ವಿ. ಅಳಗವಾಡಿ ಅವರು ಮಾತನಾಡಿ, ಸಿಯುಕೆಯನ್ನು ದೇಶದಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಏಕೆ ಸ್ಥಾಪಿಸಲಾಗಿದೆ? ಮತ್ತು ಸ್ಥಳೀಯ ಸಮುದಾಯದ ಬಗ್ಗೆ ವಿಶ್ವವಿದ್ಯಾಲಯವುಯಾವಜವಾಬ್ದಾರಿಯನ್ನು ಹೊಂದಿದೆ? ಎಂಬುದನ್ನು ಆತ್ಮಾವಲೋಕನ ಮಾಡಲುಇದು ಸರಿಯಾದ ಸಮಯವಾಗಿದೆ. ವಿಶ್ವವಿದ್ಯಾಲಯವುಎಲ್ಲರನ್ನು ಒಳಗೊಳ್ಳಬೇಕು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಕೂಡಿ ಈ ಭಾಗದ ಅಭಿವೃದ್ಧಿಗೆ ಕಾರ್ಯನಿರ್ವಹಿಸಬೇಕಾದ ಜವಾಬ್ದಾರಿಯನ್ನು ಹೊಂದಿದೆ. ೧೯೬೦ರಲ್ಲಿ ಚೈನಾ ಅನೇಕ ಅಂಶಗಳಲ್ಲಿ ಭಾರತಕ್ಕಿಂತ ಹಿಂದೆ ಇತ್ತು.

ಪ್ರಬಲ ಜಾತಿಗಳನ್ನು 2(ಎ) ಸಮುದಾಯಕ್ಕೆ ಸೇರ್ಪಡೆಗೊಳಿಸಬಾರದೆಂದು ಸಿಎಂ ಬಳಿ ನಿಯೋಗ

ಆದರೆ, ಇಂದುಅದುಆರ್ಥಿಕ ಬೆಳವಣಿಗೆ, ಕ್ರೀಡೆ, ಶಿಕ್ಷಣ, ಸಂಶೋಧನೆ, ಪ್ರಕಟಣೆಗಳು, ತಂತ್ರಜ್ಞಾನಇತ್ಯಾದಿ ಕ್ಷೇತ್ರಗಳಲ್ಲಿ ನಮಗಿಂತಲೂ ಬಹಳ ಮುಂದೆ ಸಾಗಿದೆ. ಆದ್ದರಿಂದ, ನಾವು ಅವರಿಂದಕಲಿಯಬೇಕು ಮತ್ತು ಶೈಕ್ಷಣಿಕಉತ್ಕೃಷ್ಠತೆಯನ್ನು ಸಾಧಿಸಲು ಬದ್ಧತೆ ಮತ್ತುಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದುಅವರು ಹೇಳಿದರು.

ಈ ಮೊದಲು ಕುಲಸಚಿವರಾದ ಪ್ರೊ. ಬಸವರಾಜ್‌ಡೋಣೂರ್‌ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಯದೇವಿ ಜಂಗಮಶೆಟ್ಟಿ ಮತ್ತುಡಾ. ರವಿಕಿರಣ್ ನಾಕೋಡ್‌ಅವರು ಸಂಗೀತಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಮಹಿಮರಾಜ್ ನಿರೂಪಿಸಿ ಎಲ್ಲರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿಎಲ್ಲಾ ನಿಕಾಯದಡೀನರು, ವಿಭಾಗಗಳ ಮುಖ್ಯಸ್ಥರು ಹಾಗೂ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here