ಜ್ಲಾನದ ಉತ್ಪಾದನೆ ಮುಹಿಳೆ ಮತ್ತು ಅಸ್ಪೃಶ್ಯರಲ್ಲಿ ಹುಟ್ಟುತ್ತದೆ- ಡಾ. ಶಿವಗಂಗಾ ರುಮ್ಮಾ

0
36

ಕಲಬುರಗಿ: ನಗರದ ಡಾ. ಅಂಬೇಡ್ಕರ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾದ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ, ಕಡಗಂಚಿ, ಕಲಬುರಗಿ ಕನ್ನಡ ಅಧ್ಯಾಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ. ಶಿವಗಂಗಾ ರುಮ್ಮಾ ಹೇಳಿದರು

ಮಹಿಳೆಯರು ತಮ್ಮ ಹೊರಾಟದ ಮೂಲಕ ಹಕ್ಕುಗಳನ್ನು ಪಡೆದಿದ್ದಾರೆ. ನಿಸರ್ಗದಲ್ಲಿ ಪುರುಷ ಮತ್ತು ಮಹಿಳೆ ಸಮಾನರು ಆದರೆ ಸಮಾಜದಲ್ಲಿ ಮಹಿಳೆಯರನ್ನು ಗುಲಾಮರಾಗಿ ಕಾಣುತ್ತೇವೆ. ಅನಾದಿ ಕಾಲದಲ್ಲಿ ನಾಗರೀಕರ  ಕೃಷಿ, ಹಾಗೂ ಬೆಂಕಿಯನ್ನು ಮೊದಲು ಕಂಡು ಹಿಡಿದವರು ಮಹಿಳೆಯರು ಯಾವ ದೇಶದಲ್ಲಿ ಮಹಿಳೆಗೆ ಸಮಾನ ಅವಕಾಶಗಳನ್ನು ಕೊಡುತ್ತಾರೋ ಆ ದೇಶ ಸಮೃದ್ಧಿಯಾಗುತ್ತದೆ. ಹೆಣ್ಣಿಗೆ ನೆಮ್ಮದಿ ಜೀವನ ಕೊಟ್ಟರೆ ಒಳ್ಳೆಯ ಮಕ್ಕಳು ಹುಟ್ಟುತ್ತಾರೆ. ಹೆಣ್ಣು ಗಂಡು ಬೇರೆ ಇಲ್ಲ ಜೊತೆ ಗೂಡಿದರೆ ಒಳ್ಳೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

Contact Your\'s Advertisement; 9902492681

ಗ್ರಾಪಂ ಲಕ್ಷಾಂತರ ಹಣ ದುರ್ಬಳಕ್ಕೆ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ 2ನೇ ದಿನಕ್ಕೆ

ರಾಷ್ಟೀಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಸುರೇಖಾ ಡಾಂಗೆ ಅತಿಥಿಗಳಾಗಿ ಮಾತನಾಡುತ್ತ  ಮಹಿಳೆಯರು ಜೀವನದಲ್ಲಿ ಸಾಧನೆ ಮಾಡಬೇಕು ಮನಸು ಮಾಡಿದರೆ ಎನ್ನೆಲ್ಲ ಸಾಧನೆ ಮಾಡಲು ಸಾಧ್ಯ ನನಗೆ ಬಂದಿರುವ ರಾಷ್ಟೀಯ ಪ್ರಸಸ್ತಿಯು ಮಹಿಳಾ ಶಿಕ್ಷಕಿಯರ ಸಮುದಾಯಕ್ಕೆ ಸಲ್ಲಿಸುತ್ತೇನೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕೆ.ಪಿ.ಇ. ಸಂಸ್ಥೆಯ ಪ್ರಧಾನ ಕಾರ್ಯಾದರ್ಶಿಗಳಾದ ಡಾ. ಮಾರುತಿರಾವ ಡಿ. ಮಾಲೆಯವರು ಬುದ್ಧ, ಬಸವ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರರು ಮಹಿಳೆಯರಿಗಾಗಿ ಅನೇಕ ಸುಧಾರಣೆಗಳನ್ನು ಕೈಗೊಂಡು ಸ್ತ್ರೀ ಚಿಂತಕರಾಗಿದ್ದಾರೆ ಡಾ. ಅಂಬೇಡ್ಕರ ರವರು ಸಂವಿಧಾನದಲ್ಲಿ ಹಿಂದು ಕೊಡ ಬಿಲ್ಲ್ ಮುಂಡನೆ ಮಾಡಿ ಮಹಿಳೆಯರಿಗೆ ಸಾಮಾಜಿಕ,ರಾಜಕೀಯ, ಶೈಕ್ಷಣಿಕ, ಆರ್ಥಿಕ ಹೀಗೆ ಸರ್ವಾಂಗಿಣಿ ಬೆಳವಣಿಗೆ ಯಾಗಲು ಸಾಧ್ಯವೆಂದರು. ಪ್ರಾಚಾರ್ಯರಾದ ಡಾ. ಐ.ಎಸ್. ವಿದ್ಯಾಸಾಗರ ಉಪಸ್ಥಿತರಿದ್ದರು.

ಕಲಬುರಗಿಯನ್ನು ಮಾಲಿನ್ಯ ಮುಕ್ತ ಜಿಲ್ಲೆಯನ್ನಾಗಿಸಿ: ಅನಂತ ಹೆಗಡೆ ಆಶೀಸರ

ಕಾಲೇಜಿನ ಎನ್.ಎಸ್.ಎಸ್. ಅಧಿಕಾರಿಗಳಾದ ಪ್ರೊ. ಸಿದ್ದಪ್ಪಾ ಎಂ ಕಾಂತಾ ರವರು ಸ್ವಾಗತ ಮತ್ತು ಪ್ರಸ್ಥಾವಿಕ ಮಾತನಾಡಿದರು. ಡಾ. ಹರ್ಷವರ್ಧನ ಅತಿಥಿಗಳ ಪರಿಚಯ ಮಾಡಿದರು ಹಾಗೂ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಡಾ. ಗಾಂಧೀಜಿ ಮೋಳಕೆರೆಯವರು ಕಾರ್ಯಾಕ್ರಮ ನಿರೂಪಿಸಿದರು. ಪ್ರೋ ನಿರ್ಮಲಾ ಸಿರಗಾಪೂರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here