’ಅರ್ಥಪೂರ್ಣ ಆಚರಣೆಗೆ ಪ್ರಾಮುಖ್ಯತೆ ನೀಡುವುದು ಅಗತ್ಯ’

0
22

ಕಲಬುರಗಿ: ನಾವು ಆಚರಿಸುವ ಜನ್ಮದಿನ ಸೇರಿದಂತೆ ಮುಂತಾದ ಆಚರಣೆ, ಕಾರ್ಯಕ್ರಮಗಳು ಕೇವಲ ಪ್ರತಿಷ್ಠೆಗೆ ಜೋತುಬಿದ್ದು, ಅನಾವಶ್ಯಕ ವೆಚ್ಚಕ್ಕೆ ಕಾರಣವಾಗಬಾರದು. ಆಚರಣೆಯು ಸ್ವತಃ ತೃಪ್ತಿಯ ಜೊತೆಗೆ ಸಮಾಜಕ್ಕೆ ಅದರಿಂದ ಉಪಯೋಗವಾಗುವ ಅರ್ಥಪೂರ್ಣ ಆಚರಣೆಗಳಿಗೆ ಪ್ರಸ್ತುತ ಸಂದರ್ಭದಲ್ಲಿ ಪ್ರಾಮುಖ್ಯತೆ ನೀಡುವುದು ತುಂಬಾ ಅಗತ್ಯವಾಗಿದೆಯೆಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ ಅಭಿಮತ ವ್ಯಕ್ತಪಡಿಸಿದರು.

ಸಮಾಜ ಸೇವಕ ಸುನೀಲಕುಮಾರ ವಂಟಿ ಅವರ ೫೧ನೇ ಜನ್ಮದಿನದ ಪ್ರಯುಕ್ತ ’ಸುಜಯ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆ’, ’ಬಸವೇಶ್ವರ ಸಮಾಜ ಸೇವಾ ಬಳಗ’, ’ಜೈ ಭೀಮ ಸಮಾಜ ಸೇವಾ ಬಳಗ’, ’ಕರ್ನಾಟಕ ಸಮತಾ ಸೈನಿಕ ದಳ’, ’ಕರ್ನಾಟಕ ಜನ ಜಾಗೃತಿ ಸಂಗರ್ಷ ಸಮಿತಿ’, ’ಫೆವಾರ್ಡ್ ಕಲಬುರಗಿ’, ’ಗೌತಮಿ ಸ್ವ-ಸಹಾಯ ಸಂಘ’, ’ಸಿದ್ಧಾರ್ಥ ಸ್ವ-ಸಹಾಯ ಸಂಘ’, ’ಶ್ರೀ ಸಾಯಿ ಪ್ರಸಾದ ಎಂ.ಎಸ್.ಡಬ್ಲ್ಯೂ, ಪದವಿ, ಸ್ನಾತಕೋತ್ತರ ಕಾಲೇಜು’ ಇವೆಲ್ಲವುಗಳ ವತಿಯಿಂದ ನಗರದ ಟೌನಹಾಲ್‌ನಲ್ಲಿ ಬುಧವಾರ ಪೌರಕಾರ್ಮಿಕರಿಗೆ ಉಪಹಾರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸಂಸದ ಜಾಧವ್ ಗೆ ಶಾಸಕ ಖರ್ಗೆ ತಿರುಗೇಟು

ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಸಮಾಜಮುಖಿ ಆಚರಣೆ ನಮ್ಮದಾಗಬೇಕಾಗಿದೆ. ಮೋಜು-ಮಸ್ತಿ ಮಾಡಿ, ಕುಣಿದು ಕುಪ್ಪಳಿಸಿದರೆ ಮಾತ್ರ ಜನ್ಮದಿನಾಚರಣೆಯಾಗುವುದಿಲ್ಲ. ಬದಲಿಗೆ ಕಾಯಕಜೀವಿಗಳು, ಅನಾಥರು, ಬಡವರು, ಅಸಹಾಯಕರು, ವಯೋವೃದ್ಧರಿಗೆ ಅವಶ್ಯಕತೆಗನುಗುಣವಾಗಿ ಸಹಾಯಹಸ್ತ ಚಾಚುವ ಮೂಲಕ ಆಚರಿಸಿದರೆ ಅದಕ್ಕೆ ಹೆಚ್ಚಿನ ಮೌಲ್ಯ ಬರಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನೂರಾರು ಜನ ಪೌರ ಕಾರ್ಮಿಕರಿಗೆ ಉಪಹಾರ ವಿತರಣೆ ಮಾಡುವ ಮೂಲಕ ಅರ್ತಪೂರ್ಣವಾದ ಜನ್ಮದಿನ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆಯೆಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಜಯಶೀ ಎಸ್.ವಂಟಿ, ಸುಜಯ್, ಸಾಯಿಪ್ರಸಾದ, ಅನೀಲ ಎಂಟಮನಿ, ಆದಂ ಅಲಿಸಾಹೇಬ್ ಬಾಬಾ, ಡಾ.ನಾಗರತ್ನ ದೇಶಮಾನೆ, ಎಂ.ಬಿ.ನಿಂಗಪ್ಪ, ರಾಮಚಂದ್ರ ಕಾರಭೋಸಗಾ, ಈಶ್ವರ ಇಂಗನ್, ಸಂಜೀವ ಮಾಲೆ, ಎಂ.ಎನ್.ಸುಗಂಧಿ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ರಾಜಕುಮಾರ ಬಟಗೇರಿ, ದೇವೇಂದ್ರಪ್ಪ ಗಣಮುಖಿ, ಸಂಗಮೇಶ ಇಮ್ಡಾಪೂರ, ಬಸವರಾಜ ಗುತ್ತೇದಾರ, ಗುಡುಸಾಬ್, ಲಕ್ಷ್ಮೀಬಾಯಿ ಸಂಗವಾಡೆ, ಮಲ್ಲಿಕಾರ್ಜುನ ಜಮಾದಾರ ಸೇರಿದಂತೆ ಅನೇಕ ಪೌರ ಕಾರ್ಮಿಕರು, ಮತ್ತಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here