ನಿಂಬರ್ಗಾ ಗ್ರಾಮದಲ್ಲಿ ವಿಶೇಷ ಪೂಜೆ ಹಾಗೂ ದೀಪೋತ್ಸವ

0
39

ಆಳಂದ: ತಾಲ್ಲೂಕಿನ ನಿಂಬರ್ಗಾ ಗ್ರಾಮದ ಐತಿಹಾಸಿಕ, ಸುಪ್ರಸಿದ್ಧ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಮಹಾಶಿವರಾತ್ರಿ ಪರ್ವವನ್ನು ಶೃದ್ಧೆ, ಭಕ್ತಿಯೊಂದಿಗೆ ಆಚರಿಸಲಾಯಿತು.

ಶ್ರೀ ಶರಣಬಸವೇಶ್ವರ ದೇವಸ್ಥಾನ ನವ ತರುಣ ಕಮಿಟಿ ವತಿಯಿಂದ ವಿಶೇಷ ಪೂಜೆ ಹಾಗೂ ದೀಪೋತ್ಸವ, ಭಜನೆ ಕಾರ್ಯಕ್ರಮ ನಡೆಸಲಾಯಿತು. ಪತ್ರೆ ವನದಲ್ಲಿರುವ ಶ್ರೀ ಮಹಾದೇವ ಮಹಾಲಿಂಗಕ್ಕೆ ನಾನಾ ಪುಷ್ಪಗಳಿಂದ ಹಾಗೂ ಬಿಲ್ವ ಪತ್ರೆಯಿಂದ ಅಲಂಕರಿಸಲಾಗಿತ್ತು.

Contact Your\'s Advertisement; 9902492681

ಮಹಾಶಿವರಾತ್ರಿಯ ನಿಮಿತ್ತ ಪಲ್ಲಕ್ಕಿ ಉತ್ಸವ

ಎಲ್ಲೆಂದರಲ್ಲಿ ಶಿವನ ನಾಮಸ್ಮರಣೆ, ಓಂ ನಮಃ ಶಿವಾಯ ಪಂಚಾಕ್ಷರಿ ಮಂತ್ರ ಕೇಳಿಬರುತ್ತಿತ್ತು. ಸಹಸ್ರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ಪುನೀತರಾದರು.ದರ್ಶನ ಪಡೆದ ಭಕ್ತರಿಗೆ ಭಾಳೆಹಣ್ಣು, ದ್ರಾಕ್ಷಿ ಪ್ರಸಾದ ರೂಪದಲ್ಲಿ ನೀಡಲಾಯಿತು.

ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ದೇವಸ್ಥಾನ ನವ ತರುಣ ಕಮಿಟಿ ಅಧ್ಯಕ್ಷರಾದ ಬಸವರಾಜ ಯಳಸಂಗಿ, ಸಾಗರ ದುರ್ಗದ, ಸೋಮನಾಥ ಹಿರೇಮಠ್, ಶ್ರೀಶೈಲ ನಿಗಶೆಟ್ಟಿ, ಅನಿಲ್ ನಾಗುರ, ಪ್ರಭುಲಿಂಗ ಸಲಗರ, ವೈಜನಾಥ್ ಪಾಟೀಲ್,ಭಾಗ್ಯವಂತ ನಿಗಶೆಟ್ಟಿ, ಮಡಿವಾಳಪ್ಪ ಮಡಿವಾಳ, ಮಹಾದೇವ ಮಿಟೆಕಾರ, ಕ್ಷೇಮಲಿಂಗ ಕಂಭಾರ, ಅನಿಲ್ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here