ಅಂಗನವಾಡಿ ಕಾರ್ಯಕರ್ತೆಯರಿಂದ ಮಾ 15ಕ್ಕೆ ಉಪವಾಸ ಸತ್ಯಾಗ್ರಹ

0
30

ಸುರಪುರ: ಅಂಗನವಾಡಿ ನೌಕರರಿಗೆ ಸೇವಾ ಜೇಷ್ಠತೆ ಆಧಾರದ ಮೇಲೆ ವೇತನ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ನಾಳೆ (ಸೋಮವಾರ) ಸಿಡಿಪಿಓ ಕಚೇರಿ ಮುಂದುಗಡೆ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸಿಐಟಿಯು ರಾಜ್ಯ ಉಪಾಧ್ಯಕ್ಷೆ ಸುರೇಖಾ ಕುಲಕರ್ಣಿ ಕೆಂಭಾವಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು ಅಂಗನವಾಡಿ ನೌಕರರಿಗೆ ಸೇವಾ ಜೇಷ್ಠತೆ ಆಧಾರದ ಮೇಲೆ ವೇತನ ಹೆಚ್ಚಳಗೊಳಿಸಬೇಕು ಮಿನಿ ಅಂಗನವಾಡಿಗಳಿಗೆ ಸಹಾಯಕಿಯರನ್ನು ನೇಮಿಸಿಕೊಳ್ಳಬೇಕು ಸಹಾಯಕಿಯರ ವೇತನ ಹೆಚ್ಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ವಿವಿಧ ಹಂತಗಳಲ್ಲಿ ಹೋರಾಟ ಕೈಗೊಳ್ಳುತ್ತಾ ಬಂದಿದ್ದು ನೌಕರರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಕೂಡಾ ನೀಡಲಾಗಿತ್ತು ಆದರೆ ಈ ಸಾಲಿನ ಬಜೆಟ್‌ನಲ್ಲಿ ನೌಕರರ ಯಾವುದೇ ಬೇಡಿಕೆಗಳನ್ನು ಈಡೇರಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಕೊಟ್ಟಿಲ್ಲ ಇದು ನಿರಾಸೆ ತಂದಿದೆ ಅಲ್ಲದೆ ಕೊರೋನಾ ಸಂದರ್ಭದಲ್ಲಿ ಕಡಿಮೆ ಸೌಲಭ್ಯಗಳು ಹಾಗೂ ಸೇವಾ ಭದ್ರತೆ ಇಲ್ಲದಿದ್ದರೂ ಅಂಗನವಾಡಿ ನೌಕರರು ತಮ್ಮ ಜೀವದ ಹಂಗನ್ನು ತೊರೆದು ಕೆಲಸ ನಿರ್ವಹಿಸಿದ್ದಾರೆ.

Contact Your\'s Advertisement; 9902492681

ಸಾಲಬಾಧೆ: ಕಾಲುವೆಗೆ ಹಾರಿ ಯಡಿಯಾಪುರ ರೈತ ಆತ್ಮಹತ್ಯೆ

ಕೊರೋನಾ ಸಂದರ್ಭದಲ್ಲಿ ಅಪೌಷ್ಠಿಕತೆಯನ್ನು ತಡೆಯಲು ಮಕ್ಕಳಿಗೆ,ಮಹಿಳೆಯರಿಗೆ ಪೌಷ್ಠಿಕ ಅಹಾರ ತಲುಪಿಸಲು ಶ್ರಮಿಸುವ ಮೂಲಕ ಸರಕಾರದ ಘನತೆಯನ್ನು ಕಾಪಾಡಿದ್ದಾರೆ ತಮ್ಮ ಜೀವನವನ್ನೇ ಪಣಕ್ಕಿಟ್ಟು ಸೇವೆ ಮಾಡಿದ ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸದೇ ಕಡೆಗಣಿಸಿದ್ದು ಸರಕಾರದ ಈ ಧೋರಣೆಯನ್ನು ಖಂಡಿಸಿ ರಾಜ್ಯ ಸಮಿತಿಯು ನೀಡಿರುವ ಕರೆ ಮೇರೆಗೆ ನಾಳೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಒಂದು ದಿನ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here