ಕಲಬುರಗಿ: ಕ್ಷಯರೋಗವು ವಿದ್ಯಾರ್ಥಿಗಳಲ್ಲಿ ಹೆಚ್ಚು ಹರಡತ್ತದೆ ಏಕೆಂದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸರಿಯಾಗಿ ತಿಂಡಿ/ ಊಟ ಮಾಡದೆ ಕಾಲಿ ಹೊಟ್ಟೆಯಲ್ಲಿ ಶಾಲಾ / ಕಾಲೇಜಿಗೆ ಬರುವುದು ಕಂಡು ಬರುತ್ತದೆ ಹಾಗೆ ವಿದ್ಯಾರ್ಥಿಗಳು ಈ ಕ್ಷಯ ರೋಗ ಮಾಹಿತಿ ಪಡೆದು ಬೇರೆಯವರಿಗೆ ತಿಳುವಳಿಕೆ ನೀಡಲು ಮಾದರಿಯಾಗಬೇಕು,ಕೆಲ ಕ್ಷಯ ರೋಗಿಗಳು ಕಳಂಕ ತಾರತಮ್ಯಇಲ್ಲದೆಸಮಾಜದಲ್ಲಿ ಬದುಕುಬಹುದು ಮುಖ್ಯವಾದದ್ದು ಆರೋಗ್ಯ. ಕ್ಷಯ ರೋಗ ಪರೀಕ್ಷೆ ಮಾಡಿಸಿ ಪತ್ತೆ ಹಚ್ಚುವ ಬಹುದು ಹಾಗೆ ಸೂಕ್ತ ಚಿಕಿತ್ಸೆಯಿಂದ ಬೇಗಗುಣಮುಖರಾಗಬಹುದು ಹಾಗೆ ಕ್ಷಯ ಮುಕ್ತ ಮಾಡಲು ವಿದ್ಯಾರ್ಥಿಗಳು ಪಣ ತೋಡೊಣ ಎಂದು,ಜಿಲ್ಲಾ ಪಂಚಾಯತನ ಸದಸ್ಯರಾದ ಸಿದ್ದರಾಮ ಪ್ಯಾಟಿ ಸಲಹೆ ನೀಡಿದರು.
ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರು ಸಮುದಾಯದ ಜೊತೆಗೆ ಕೈ ಜೋಡಿಸಿ ಅವರು ನಮ್ಮಂತೆ ಸೂಕ್ತ ಚಿಕಿತ್ಸೆ ಪಡೆದು ಬೇರೆಯ ಕ್ಷಯ ರೋಗಿಗಳಿಗೆ ಮಾದರಿ ಅಗಬೇಕು.ಟಿಬಿ.ಶಾಲಾ , ಕಾಲೇಜು ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮದಿಂದ ತಮ್ಮ ಆರೋಗ್ಯದ ಕಡೆ ಲಕ್ಷ ವಹಿಸ ಬುಹುದು ಹಾಗೆ ಕಾರ್ಯಕ್ರಮದ ಉದ್ದೇಶ ನಿಮ್ಮಕುಟುಂಬದ ಸದಸ್ಯರಿಗೆ ಇಂತಹುದೇ ಕ್ಷಯ ರೋಗದ ಲಕ್ಷಣ ಕಂಡುಬಂದರೆ. ಸೂಕ್ತ ಚಿಕಿತ್ಸೆನೀಡಿ ಟಿಬಿ ಸದ್ಯ ಚಿಕಿತ್ಸೆ ಪಡೆದುಕೊಳ್ಳುವಂತ ಕ್ಷಯರೋಗಿಳು ಯಾರೆ ಇರಲಿ ಮಾನವೀಯತೆ ತೋರಿಸಬೇಕು.ಟಿಬಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿದೆ ಎಲ್ಲಾ ಸರ್ಕಾರಿ ಆಸ್ಪತ್ರೆ ಕಫ ಪರೀಕ್ಷೆ ಮತ್ತು ಮಾತ್ರೆ ಉಚಿತವಾಗಿ ನೀಡಲಾಗುತ್ತದೆ, ಎಂದುಹೇಳಿದರು.
ವಕೀಲರ ಕಲ್ಯಾಣ ಅಭೀವೃಧ್ಧಿ ಸಂಘ ಸುರಪುರ ಅಸ್ತಿತ್ವಕ್ಕೆ
ನಗರದ ಶ್ರೀ ಗುರು ವಿದ್ಯಾಪೀಠ ಕಾಲೇಜು ಖಣದಾಳ ಸಭಾಂಗಣದಲ್ಲಿ. ಜಿಲ್ಲಾ ಪಂಚಾಯತ್ ಕಲಬುರಗಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ಕಲಬುರಗಿ. ಹಾಗೂ ಶ್ರೀ ಗುರು ವಿದ್ಯಾಪೀಠ ಕಾಲೇಜು ಇವರ ಸಂಯುಕ್ತಶ್ರಾಯದಲ್ಲಿ. ಕಾಲೇಜು ವಿದ್ಯಾರ್ಥಿಗಳಿಗೆ ವಿಶ್ವ ಕ್ಷಯರೋಗ ದಿನ ಅಂಗವಾಗಿ ಗಿಡಕ್ಕೆ ನೀರು ಊಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಗುರು ವಿದ್ಯಾಪೀಠದ ಕಾರ್ಯದರ್ಶಿ ಶಿವರಾಜ ದಿಗ್ಗಾಂವಿ, ಮಾತನಾಡಿದರು.ವೇದಿಕೆ ಮೇಲೆ ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ವಿವೇಕಾನಂದ ರೆಡ್ಡಿ ಅವರು ಪ್ರಸ್ಥಾವಿಕ ನುಡಿ ಮಾತನಾಡುತ್ತ ಕ್ಷಯ ರೋಗ ಮುಕ್ತ ವಾಗಿಸಲು ಭಾರತ ಸರ್ಕಾರದ ಘೋಷಣೆ ಪ್ರತಿ ಒಂದು ಮನೆಯಲ್ಲಿ ಕ್ಷಯ ರೋಗಿ ತಪ್ಪದೆ ಬಂದು ಉಚಿತ ಚಿಕಿತ್ಸೆಇದೆ ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗಿ ಬಹುಬೇಗ ಗುಣಮುಖನಾಗಿ ಚಾಂಪಿಯನ್ಸ್ ಅಗಲು ಸಾಧ್ಯ ಹಾಗೆ ಇದೆ ತಿಂಗಳು 24ರಂದು ವಿಶ್ವ ಕ್ಷಯರೋಗ ದಿನವನ್ನಾಗಿ ಆಚರಿಸಲಾಗುತ್ತದೆ. ಅದರ ಅಂಗವಾಗಿ ಎಲ್ಲಾ ಶಾಲಾ ಕಾಲೇಜು ಗಳಲ್ಲಿ ರಸ ಪ್ರಶ್ನೆ ಕ್ವಿಜ್ ಇಡಲಾಗಿದೆ.ಅದರಲ್ಲಿ ಭಾಗವಹಿಸಿದವರಿಗೆ ಸೂಕ್ತ ನಗದು ರೂಪದಲ್ಲಿ ಕೊಡಲಾಗುತ್ತಿದೆ ಎಂದು ಹೇಳಿದರು ಹಾಗೆ ಪ್ರತಿ ಒಬ್ಬರು ಎರಡೂ ವಾರಕಿಂತ ಹೆಚ್ಚು ಕೆಮ್ಮು ರಾತ್ರಿ ವೇಳೆ, ಜ್ವರ, ತೂಕ ಕಡಿಮೆ ಅಗುವ ಲಕ್ಷಣ ಕಂಡುಬಂದಲ್ಲಿ ತಪ್ಪದೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದು.ಕ್ಷಯರೋಗ ನಿರ್ಮೂಲನೆ ಮಾಡಲು ಕೈ ಜೋಡಿಸಿ ಎಂದು ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಪಾಠದ ಜೊತೆ ಕೌಶಲ್ಯ ಅಭಿವೃದ್ಧಿಪಡಿಸಿಕೊಳ್ಳಬೇಕು: ಡಾ. ಶಾಸ್ತ್ರಿ
ವೇದಿಕೆ ಮೇಲೆ ಪ್ರಮುಖರಾದ ಡಿಪಿಎಸ್. ಅಬ್ದುಲ್ ಜಬ್ಬರ್ , ಜಿಲ್ಲಾ ಪಿ ಪಿ ಎಂ ಸಂಯೋಜಕ ಶಶಿಧರ್ ಕಮಲಪೂರ, ಕ್ಷೇತ್ರ ಅಧಿಕಾರಿ ಸುಬ್ಬಯ್ಯ ಗುತ್ತೆದಾರ,ಉಪಸ್ಥಿತರಿದ್ದರು.
ಇದೆ ಸಂಧರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನೆ ಕೇಳಿ ಉತ್ತರ ಪಡೆದುಕೊಂಡರು,ಸುಬ್ಬಯ್ಯ ಸ್ವಾಗತಿಸಿದರು, ಶಶಿಧರ್ ವಿದ್ಯಾರ್ಥಿಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.