ಕಲಬುರಗಿ: 2020ರಲ್ಲಿ ಹೊಸದಾಗಿ ಬಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪಾಠದ ಜೊತೆಯಲ್ಲಿ ಹೆಚ್ಚು ಕೌಶಲ್ಯಕ್ಕೆ ಮಹತ್ವ ನೀಡಿರುತ್ತಾರೆ ಎಂದು ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ಲಿಂಗರಾಜ ಶಾಸ್ತ್ರಿ ನುಡಿದರು.
ನಗರದ ಪ್ರತಿಷ್ಠಿತ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಇಂದು 16.03.2021ರಂದು ಹಮ್ಮಿಕೊಂಡ 2020-21ನೆಯ ಸಾಲಿನ ವಿದ್ಯಾರ್ಥಿ ಸಂಘ, ಎನ್.ಎಸ್.ಎಸ್. ರೆಡ್ ಕ್ರಾಸ್, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆಗೆ ಮುತ್ತಿಗೆಹಾಕಿ ಭೀಮ ಆಮಿ೯ ಪ್ರತಿಭಟನೆ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್.ಎ. ಪಾಟೀಲರು ವಹಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕೌಶಲ್ಯಭಿವೃದ್ಧಿಗೆ ಮಹತ್ವ ನೀಡಬೇಕಾಗಿ ಪ್ರೇರಿಪಿಸಿದರು.
ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಕು. ಸಿದ್ದಮ್ಮ್, ಸ್ವಾಗತ ಮತ್ತು ಪ್ರಸ್ತಾವಿಕತೆಯನ್ನು ಪ್ರೊ. ಜಗದೇವಿ ಹಿರೇಮಠ, ನಿರೂಪಣೆಯನ್ನು ಕವಿತಾ ಅಶೋಕ, ವಂದನೆಯನ್ನು ವಿಜಯಲಕ್ಷ್ಮಿ ವಾರದ, ಅತಿಥಿಗಳ ಪರಿಚಯವನ್ನು ಗೀತಾ ಪಾಟೀಲ ರವರು ಮಾಡಿದರು.