ಬಿಜೆಪಿಯಿಂದ ರೈತ ಮೋರ್ಚಾದ ಪ್ರಥಮ ಕಾರ್ಯಕರಣಿ ಸಭೆ

0
91

ಶಹಾಬಾದ: ರೈತರಿಗೆ ಅನುಕೂಲವಾಗುವಂತ ಕಾನೂನು ಜಾರಿಗೆ ತರುವ ಮೂಲಕ ಎರಡು ಸರಕಾರಗಳು ರೈತ ಪರವಾದಂತಹ ಒಂದು ಐತಿಹಾಸಿಕ ನಿರ್ಣಯವನ್ನು ಮಾಡಿವೆ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧರ್ಮಣ್ಣ ದೊಡ್ಡಮನಿ ಹೇಳಿದರು.

ಅವರು ಮಂಗಳವಾರ ಬಿಜೆಪಿ ರೈತ ಮೋರ್ಚಾ ಶಹಾಬಾದ ಮಂಡಲ ವತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಲಾದ ರೈತ ಮೋರ್ಚಾದ ಪ್ರಥಮ ಕಾರ್ಯಕರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Contact Your\'s Advertisement; 9902492681

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಸಿಎಂ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ರೈತರ ಅಭಿವೃದ್ಧಿಗೆ, ಕೃಷಿಕರ ಒಳಿತಿಗಾಗಿ ಹಮ್ಮಿಕೊಂಡಿರುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಬಾಲಕಾರ್ಮಿಕ, ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ ಚಾಲನೆ

ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿ, ದೇಶದ ಅತಿಹೆಚ್ಚು ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ರೈತರ ಉತ್ಪ ನ್ನಗಳ ಇಳುವರಿ ಹೆಚ್ಚಳ ಹಾಗೂ ಆದಾಯ ದುಪ್ಪಟ್ಟು ಮಾಡಲು ಜನಪರ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯುಪಯುಕ್ತ ಕಾರ್ಯಕ್ರಮಗಳನ್ನು ಅನು?ನಗೊಳಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವವೇ ಇಲ್ಲ. ಅಧಿಕಾರವೂ ಇಲ್ಲದ ಕಾರಣ ಕಾಂಗ್ರೆಸ್ಸಿಗರು ರೈತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಅಲ್ಲದೇ ನಮ್ಮದು ರೈತಪರ ಸರಕಾರ.ಕೃಷಿ,ಆರೋಗ್ಯ ಹಾಗೂ ಶಿಕ್ಷಣ ನಮ್ಮ ಆದ್ಯತೆಯಾಗಿದೆ.ಕೃಷಿಯನ್ನು ಲಾಭದಾಯಕ ಉದ್ದಿಮೆ ಮಾಡುವ ನಿಟ್ಟಿನಲ್ಲಿ ನಮ್ಮ ಸರಕಾರ ಗರಿ? ಪ್ರಯತ್ನ ಮಾಡುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ.ಆರ್.ದುತ್ತರಗಿ ಮಾತನಾಡಿ, ಕೇಂದ್ರ ಸರಕಾರದ ಕೃಷಿ ಮಸೂದೆಗಳು ರಾಜ್ಯ ಸರಕಾರದ ಭೂ ಸುಧಾರಣೆ ತಿದ್ದುಪಡೆ ಕಾನೂನು ಬಗ್ಗೆ ವಿರೋಧ ಪಕ್ಷಗಳು ಇದರ ಬಗ್ಗೆ ಅಪಪ್ರಚಾರ ಮಾಡುತ್ತಿವೆ. ಅದಕ್ಕಾಗಿ ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ನೀಡಬೇಕೆಂದು ಎಂದು ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಸನ್ಮಾನ

ಶಹಾಬಾದ ತಾಲೂಕಾ ರೈತ ಮೋರ್ಚಾ ಅಧ್ಯಕ್ಷ ಸಂತೋ? ಪಾಟೀಲ,ಸದಾನಂದ ಕುಂಬಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶಗೌಡ ಇನಾಮದಾರ ವೇದಿಕೆ ಮೇಲಿದ್ದರು. ಸಭೆಯಲ್ಲಿ ನೂರೋದ್ದಿನ್ ಅಬ್ದುಲ್ ಜಫರ್ ಮುಲ್ಲಾ, ಶರಣಬಸಪ್ಪ ಅರಳಿ,ಬಸವರಾಜ ಮದ್ರಕಿ, ಸುರೇಶ, ತಿಪ್ಪಣ, ಬಸವರಾಜ ಪತ್ತಾರ,ಶಿವಕುಮಾರ,ಸಿದ್ದು ಬೆಳಗುಂಪಿ,ಜಿಗೂರ ಹಾಸಿಂಸಾಬ,ವೈಜನಾಥ ಹುಗ್ಗಿ,ನಾಗರಾಜ,ಗುರಣ್ಣ ಡೆಂಗಿ,ಶರಣಪ್ಪ ಬುಗಶೆಟ್ಟಿ ಇತರರು ಉಪಸ್ಥಿತರಿದ್ದರು.

ಬಸವರಾಜ ಬಿರಾದಾರ ನಿರೂಪಿಸಿದರು, ಶರಣಪ್ಪ ಕೊಡದೂರ ಸ್ವಾಗತಿಸಿದರು, ಚಂದ್ರಕಲಾ ಕುಂಬಾರ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here