ಕಲಬುರಗಿ: ರಾಜ್ಯದಲ್ಲಿ ಮುಸ್ಲಿಂ ಸಮುದಾಯದಲ್ಲಿ ಅತೀ ಹಿಂದುಳಿದಿರುವ ನದಾಫ್ ಜನಾಂಗಕ್ಕೆ ರಾಜಕೀಯ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಆದ್ಯತೆ ನೀಡಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಪಣತೊಡಬೇಕಿದೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) ನಿರ್ದೇಶಕರಾದ ಸದ್ದಾಮ್ ವಜೀರಗಾಂವ್ ಹೇಳಿದರು.
ನಗರದ ಸರ್ದಾರ ವಲ್ಲಭ್‌ಭಾಯಿ ಪಟೇಲ್ ವೃತ್ತದ ಸಮೀಪದಲ್ಲಿರುವ ಕನ್ನಡಭವನದಲ್ಲಿ ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ಜಿಲ್ಲಾ ಘಟಕದಿಂದ ಬುಧವಾರ ಹಮ್ಮಿಕೊಂಡಿರುವ ಗ್ರಾಮ ಪಂಚಾಯತ ನೂತನ ಸದಸ್ಯರನ್ನು ಸನ್ಮಾನಿಸುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾಸ್ಕ್ ಇಲ್ಲದಿದ್ದರೆ ಪ್ರವೇಶ ಕೊಡಬೇಡಿ: ಅಂಗಡಿ ಮಾಲೀಕರಿಗೆ ಪಾಲಿಕೆ ಸೂಚನೆ
೧೯೯೨ರಲ್ಲಿ ನದಾಫ, ಪಿಂಜಾರ ಸಮುದಾಯಕ್ಕೆ ಪ್ರವರ್ಗ ೧ ಜಾತಿ ಪ್ರಮಾಣ ಪತ್ರ ನೀಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಹಲವು ಜಿಲ್ಲೆಗಳಲ್ಲಿ ಸಮುದಾಯದ ಜನರಿಗೆ ಈ ಸೌಲಭ್ಯ ನೀಡದೇ ವಂಚಿಸುತ್ತಿರುವುದು ಕಂಡು ಬರುತ್ತಿದೆ, ಸರ್ಕಾರ ಕೂಡಲೇ ಸ್ಪಂದಿಸಿ ರಾಜ್ಯಾದ್ಯಂತ ಈ ಜನಾಂಗಕ್ಕೆ ಪ್ರಮಾಣಪತ್ರ ದೊರಕಿಸಿ ನ್ಯಾಯ ಒದಗಿಸಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೌಲಾಲಿ ನದಾಫ್ ಮಾತನಾಡಿ, ನ್ಯಾ. ಸಿ.ಎಸ್ ದ್ವಾರಕನಾಥ ಸಮಿತಿಯ ಶಿಫಾರಸ್ಸಿನಂತೆ ನದಾಫ್, ಪಿಂಜಾರ ಸಮುದಾಯವನ್ನು ಅತೀ ಹಿಂದುಳಿದ ಜನಾಂಗದ ಏಳಿಗೆಗಾಗಿ ಪ್ರತ್ಯೇಕವಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಇನ್ನೂ ಆ ಭರವಸೆ ಸರ್ಕಾರ ಈಡೇರಿಸಿಲ್ಲ , ಹೀಗಾಗಿ ಮುಂದಿನ ದಿನಗಳಲ್ಲಿ ನದಾಫ್ ಸಮಾಜಕ್ಕೆ ಒತ್ತು ನೀಡಿ ನಿಗಮ ಮಂಡಳಿ ಜೊತೆಗೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಡ ಹೇರಬೇಕಾಗಿದೆ ಎಂದರು.
ಅಂತರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ಸನ್ಮಾನ
ಆಯ್ಕೆಯಾದ ಗ್ರಾ.ಪಂ ಸದಸ್ಯರು ರಾಜಕೀಯವಾಗಿ ಬೆಳೆಯುವುದರ ಜೊತೆಗೆ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸಕೊಡುವುದರಲ್ಲಿ ಪಾತ್ರ ವಹಿಸಬೇಕೆಂದರು. ಜಿಲ್ಲಾಧ್ಯಕ್ಷ ಉಮರ್ ನದಾಫ್ ಮಾತನಾಡಿ, ಸಮಾಜದ ಏಳಿಗೆಗೆ ನಾವೆಲ್ಲರೂ ಶ್ರಮಿಸಬೇಕಾಗಿದ್ದು, ರಾಜಕೀಯ, ಶೈಕ್ಷಣಿಕವಾಗಿ ಸಮುದಾಯದ ಬೆಳವಣಿಗೆಗೆ ಹೆಜ್ಜೆ ಇಡಬೇಕೆಂದರು.
ಉಪಾಧ್ಯಕ್ಷ ಆಸೀಫ್ ಅತನೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಇಮ್ರಾನ್ ನದಾಫ್ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ಮಹೀಬೂಬ್ ನದಾಫ್, ಯೂಸಫ್ ನದಾಫ್, ಇಸ್ಮಾಯಿಲ್, ಅಮೀರ ನದಾಫ್, ಮಹೀಮೂದ್ ನದಾಫ್ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ನ ನೂತನ ಸದಸ್ಯರು ಹಾಜರಿದ್ದರು.