ಶಹಾಬಾದ: ನಗರ ಸಭೆಯ ವಾರ್ಡ ನಂ. ೧೮ ರ ಉಪ ಚುನಾವಣೆಗೆ ಶಿವಾನಂದ ಅಂಬಣ್ಣ ಬೇಡರ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಬುಧವಾರದಂದು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುಂಚೆ ನಗರದ ಲಕ್ಷ್ಮಿ ಗಂಜ್ನಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಮಾತನಾಡಿ,ಶಹಾಬಾದ ನಗರಸಭೆಯಲ್ಲಿ ಅತಿಹೆಚ್ಚು ಸದಸ್ಯರು ಕಾಂಗ್ರೆಸ್ ಪಕ್ಷದವರಿದ್ದಾರೆ.ಅಲ್ಲದೇ ನಗರಸಭೆಯ ಆಡಳಿತವೂ ನಮ್ಮ ಪಕ್ಷದ ವಶದಲ್ಲಿದೆ.
ನದಾಫ್ ಸಮುದಾಯಕ್ಕೆ ಸರ್ಕಾರ ಆದ್ಯತೆ ನೀಡಲಿ : ವಜೀರಗಾಂವ್
ನಗರದಲ್ಲಿ ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡು ಬಹಳಷ್ಟು ಮತದಾರರು ಇದ್ದಾರೆ.ಈ ಉಪಾಚುನಾವಣೆಯಲ್ಲಿ ಶಿವಾನಂದ ಅಂಬಣ್ಣ ಬೇಡರ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ನಮ್ಮ ಪಕ್ಷದ ಮುಖಂಡರು ಪ್ರತಿ ಮತದಾರರ ಮನವೊಲಿಸಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವತ್ತ ಮುಂದಾಗಬೇಕು ಎಂದು ಹೇಳಿದರು.
ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ರಶೀದ್ ಮರ್ಚಂಟ, ಉಪಾಧ್ಯಕ್ಷ ವಿಜಯಕುಮಾರ ಮುತ್ತಟ್ಟಿ, ಕಾರ್ಯದರ್ಶಿ ಮೃತ್ಯುಂಜಯ ಹಿರೇಮಠ, ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ್ ಕಂಬಾನೂರ, ಉಪಾಧ್ಯಕ್ಷರಾದ ಸಲೀಮಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ನಾಟೀಕರ್,ಶರಣಗೌಡ ಪಾಟೀಲ ಗೋಳಾ,ವಿಶ್ವರಾಧ್ಯ ಬೀರಾಳ, ಗಿರೀಶ ಕಂಬಾನೂರ, ದೇವೆಂದ್ರಪ್ಪ ವಾಲಿ, ಸಾಹೇಬಗೌಡ ಬೋಗುಂಡಿ, ಶರಣು ಪಗಲಾಪೂರ,ನಗರಸಭೆಯ ಸದಸ್ಯರಾದ ಡಾ.ಅಹ್ಮದ್ ಪಟೇಲ್, ಅನ್ವರ್ ಪಾಶಾ, ಕುಮಾರ ಚವ್ಹಾಣ,ಸೂರ್ಯಕಾಂತ ಕೋಬಾಳ,ಮಲ್ಲಿಕಾರ್ಜುನ ವಾಲಿ,ಅವಿನಾಶ ಕಂಬಾನೂರ, ನಾಗರಾಜ ಕರಣಿಕ್,ನಾಗಣ್ಣ ರಾಂಪೂರೆ,ನಾಗೇಂದ್ರ ನಾಟೇಕಾರ,ಶಂಕರ ಕೋಟನೂರ,ಕಿರಣಕುಮಾರ ಚವ್ಹಾಣ, ದಿಲೀಪ ನಾಯಕ, ಮಸ್ತಾನ ಪಟೇಲ್, ಇಮ್ರಾನ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.