ಬಿಜೆಪಿ ಪಕ್ಷದ ಕಚೇರಿಯಲ್ಲಿ ದಿ. ವಾಲ್ಮೀಕಿ ನಾಯಕಗೆ ಶ್ರದ್ಧಾಂಜಲಿ

0
61

ಶಹಾಬಾದ: ಭಾರತೀಯ ಜನತಾ ಪಾರ್ಟಿ ಶಹಾಬಾದ ಮಂಡಲ ವತಿಯಿಂದ  ಶುಕ್ರವಾರ ಚಿತ್ತಾಪೂರ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕರವರ ಶ್ರದ್ಧಾಂಜಲಿ ಸಭೆ ಪಕ್ಷದ ಕಾರ್ಯಲಯದಲ್ಲಿ ಆಚರಿಸಲಾಯಿತು.

ನಗರಸಭೆ ಸದಸ್ಯ ರವಿ ರಾಠೋಡ ಮಾತನಾಡಿ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ವಾಲ್ಮೀಕಿ ನಾಯಕ ಅವರು ಅಗಲಿ ಹೋಗಿರುವುದು ಪಕ್ಷಕ್ಕೆ ಎಲ್ಲಿಲ್ಲದ ನಷ್ಟವಾಗಿದೆ.ಯಾವಾಗಲೂ ಜನರೊಂದಿಗೆ ಬೆರೆತು ಜೀವಿಸುವ ವ್ಯಕ್ತಿ.ಅವರಂತ ಸಜ್ಜನ ರಾಜಕಾರಣಿ ನಮಗೆ ಸಿಗುವುದು ದುರ್ಲಭ ಎಂದು ಹೇಳಿದರು.

Contact Your\'s Advertisement; 9902492681

ಕಡ್ಡಾಯವಾಗಿ ಮಾಸ್ಕ್ ಧರಿಸಿ: ಇಲ್ಲದಿದ್ದರೇ 200 ರೂ. ದಂಡ

ಮಂಡಲ ಉಪಾಧ್ಯಕ್ಷರಾದ ಮಹಾದೇವ ಗೋಬ್ಬುರಕರ, ಪ್ರಧಾನ ಕಾರ್ಯದರ್ಶಿ ಸದಾನಂದ ಕುಂಬಾರ,ಯೋಜನಾ ಪ್ರಾಧಿಕಾರ ಅಧ್ಯಕ್ಷರಾದ ಕನಕಪ್ಪ ದಂಡಗೂಲಕರ, ನಿಂಗಣ್ಣ ಹುಳಗೋಳಕರ,ಬಸವರಾಜ ಬಿರಾದಾರ, ಅಪ್ಪರಾವ,ಯಲ್ಲಪ್ಪ ದಂಡಗೂಲಕರ,ಮೋಹನ ಗಂಟ್ಲಿ, ಸುನೀಲ ನಿಕ್ಕಮ,ರಾಜು ಕುಂಬಾರ,ದಿನೇಶ ಗೌಳಿ,ದೇವೆಂದ್ರ ಯಲಗೋಡ, ಸಂಜಯ ಕೋರೆ,ತಿಮ್ಮಣ್ಣ ದಂಡಗೂಲಕರ, ಜಗದೇವ ಶರಣು ಕೌಲಗಿ, ಭೀಮಯ್ಯ ಗುತ್ತೆದಾರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುಲಭವಾಗಿ ಉದ್ಯೋಗ ಲಭಿಸುವ ಕೋರ್ಸ ಎಂದರೆ ಸಿರಾಮಿಕ್, ಸಿಮೆಂಟ್ ವಿಭಾಗ 

ಸಂತಾಪ: ಚಿತ್ತಾಪೂರ ಮಾಜಿ ಶಾಸಕ ದಿ. ವಾಲ್ಮೀಕಿ ನಾಯಕ ಅವರು ನಿಧನರಾಗಿದಕ್ಕೆ ನಗರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್,ಪ್ರಧಾನ ಕಾರ್ಯದರ್ಶಿ ಮೃತ್ಯುಂಜಯ್ ಹಿರೇಮಠ, ನಾಗಣ್ಣ ರಾಂಪೂರೆ, ಬಿಜೆಪಿ ಮುಖಂಡರಾದ ಶಶಿಕಾಂತ ಪಾಟೀಲ ಭಂಕೂರ, ಭಂಕೂರ ಗ್ರಾಪಂ ಸದಸ್ಯರಾದ ಈರಣ್ಣ ಕಾರ್ಗಿಲ್,ಲಕ್ಷ್ಮಿಕಾಂತ ಕಂದಗೂಳ  ಸೇರಿದಂತೆ ಅನೇಕರು ಸಂತಾಪ ಸಲ್ಲಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here