ಮಾಸ್ಕ್ ಧರಿಸದೇ ಓಡಾಡುವವರಿಗೆ ಪೌರಾಯುಕ್ತರಿಂದ ದಂಡ

0
115

ಶಹಾಬಾದ: ನಗರದಲ್ಲಿ ಮಾಸ್ಕ್ ಧರಿಸದೇ ಬೇಕಾಬಿಟ್ಟಿ ಓಡಾಡುವ ವಿರುದ್ಧ ನಗರಸಭೆಯ ಪೌರಾಯುಕ್ತ ಡಾ. ಕೆ.ಗುರಲಿಂಗಪ್ಪ ದಂಡ ವಿಧಿಸುವ ಮೂಲಕ ಮಾಸ್ಕ್ ಧರಿಸದವರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಕೊರೊನಾ ಎರಡನೇ ಅಲೆ ಹರಡುತ್ತಿರುವುದರಿಂದ ಅದನ್ನು ತಡೆಗಟ್ಟಲು ಸಾಕಷ್ಟು ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಿದರೂ ಕೆಲವು ಜನರು ಮಾಸ್ಕ್ ಧರಿಸದೇ ಅನಾವಶ್ಯಕವಾಗಿ ರಸ್ತೆಗೆ ಇಳಿಯುತ್ತಿದ್ದನ್ನು ಗಮನಿಸಿ ಅವರಿಗೆ ದಂಡ ವಿಧಿಸಿದ್ದಾರೆ.

Contact Your\'s Advertisement; 9902492681

ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್-19 ಸುರಕ್ಷತಾ ಕ್ರಮಗಳನ್ನು ಪಾಲಿಸಿ

ಅಲ್ಲದೇ ಮಾಸ್ಕ್ ಧರಿಸದಿರುವ ಅಂಗಡಿ ಮುಂಗಟ್ಟುಗಳ ಮಾಲೀಕರ ವಿರುದ್ಧ ಕ್ರಮ ಕೈಗೊಂಡು ದಂಡ ಹಾಕಿದ್ದಾರೆ. ಇಡೀ ದಿನ ನಗರದಲ್ಲಿ ಸಂಚಾರ ಮಾಡಿ ಅಂಗಡಿ ಮಾಲೀಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.ಅಲ್ಲದೇ ಸ್ಯಾನಿಟೈಜರ್ ಬಳಸಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ನಗರದ ಪ್ರಮುಖ ಸ್ಥಳಗಳಲ್ಲಿ ಸ್ಯಾನಿಟೈಜರ್, ಸೊಂಕಿತ ವ್ಯಕ್ತಿಯ ಪ್ರದೇಶಗಳಲ್ಲಿ ಸ್ವಚ್ಛತೆ ಆದ್ಯತೆ ನೀಡಿದ್ದಾರೆ.ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆಯ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಜತೆಗೆ ನಗರದಲ್ಲಿ ಸಂಚರಿಸಿ ಬಿಸಿ ಮುಟ್ಟಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೊರಗಿನವರ ಹೆಸರು ಸೇರ್ಪಡೆ: ಕ್ರಮಕ್ಕೆ ದೂರು

ಅಲ್ಲದೇ ಮಾಸ್ಕ ಮನೆಯಲ್ಲಿ ಬಿಟ್ಟು ಬಂದಿದ್ದೆನೆ, ತೆಗೆದುಕೊಂಡು ಬರುತ್ತೆನೆ, ಒಂದು ಬಾರಿ ರಿಯಾಯಿತಿ ನೀಡಿ ಎಂದು ಸಬೂಬು ಹೇಳದಿರಿ.ಒಂದು ವೇಳೆ ಮಾಸ್ಕ್ ಧರಿಸದೇ ಅನಾವಶ್ಯಕವಾಗಿ ರಸ್ತೆಗೆ ಬಂದರೆ ಹಾಗೂ ಅಂಗಡಿಯ ಮಾಲೀಕರು ಮಾಸ್ಕ್ ಧರಿಸದಿರುವುದು ಹಾಗೂ ಸ್ಯಾನಿಟೈಜರ್ ಇಲ್ಲದಿರುವುದು ಕಂಡರೇ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳುತ್ತೆವೆ ಎಂದು ಎಚ್ಚರಿಕೆ ನೀಡಿದರಲ್ಲದೇ ದಂಡ ವಿಕೂಡ ವಿಧಿಸಿದರು.

ನಗರಸಭೆ ವ್ಯವಸ್ಥಾಪಕ ಶಂಕರ,ಎಇಇ ಮುಜಾಮ್ಮೀಲ ಆಲಮ್, ಆರೋಗ್ಯ ನಿರೀಕ್ಷರಾದ ಶಿವರಾಜಕುಮಾರ, ಶರಣಕುಮಾರ ದಂಡೋತಿ, ರಾಜೇಶ ಮಲಕೂಡ, ಮುತ್ತಣ್ಣ ಭಂಡಾರಿ,ಉಣೇಶ ದೊಡ್ಡಮನಿ, ಅನೀಲ, ಈರಣ್ಣ, ನಿರಂಜನ್, ವಿಜಯಕುಮಾರ,ಪ್ರವೀಣ, ಮೆಹಬೂಬ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here