ಭಾರತ್ ಬಂದ್: ಕಲಬುರಗಿಯಲ್ಲಿ ಕೇಂದ್ರ ಬಸ್ ನಿಲ್ದಾಣ ಎದುರು ಪ್ರತಿಭಟನೆ

0
108

ಕಲಬುರಗಿ: ಸಂಯುಕ್ತ ಕಿಸಾನ್ ಮೋರ್ಚಾದಿಂದ ಭಾರತ್ ಬಂದ್ ಕರೆ ಕಲಬುರಗಿ ಜಿಲ್ಲಾ ಸಮಿತಿಯಿಂದ ಇಂದು ಬೆಳ್ಳಂಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣ ಎದುರು ಸಾರಿಗೆ ಸಂಚಾರ ತಡೆದು ರಸ್ತೆಯ ಮೇಲೆ ಪ್ರತಿಭಟನೆ ನಡೆಸಿ ಕಲಬುರಗಿ ಬಂದ್ ಬಿಸಿ ಆರಂಭವಾಗಿದೆ.

ಜನವಾದಿ ಮಹಿಳಾ ಸಂಘಟನೆಯ ಕೆ ನೀಲಾ, ರೈತ ಮುಖಂಡರಾದ ಮೌಲಾ‌ಮುಲ್ಲಾ, ಸಿಪಿಐಎಂ ಪಕ್ಷದ ಶರಣಬಸಪ್ಪ ಮಮಶೇಟ್ಟಿ, ಕಾರ್ಮಿಕ ಮುಖಂಡರಾ ಸಿನೀಲ್ ಮಾನ್ಪಡೆ ಅವರ ನೇತೃತ್ವದಲ್ಲಿ ಪ್ರತಿಭಟನೆ ಶುರುವಾಗಿದೆ.

Contact Your\'s Advertisement; 9902492681

ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಂ.ಎಸ್ ಸಾಜಿದ್ ಆಯ್ಕೆ

ಮೂರು ಕಪ್ಪು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಭಾರತ ಬಂದ್ ಗೆ ಬೆಂಬಲವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷವಾಗಿ ಕಲಬುರಗಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ವಿವಿಧ ಸಂಘಟನೆಗಳು ಕಲಬುರಗಿ ಬಂದ್ ಕರೆ ನೀಡಿವೆ.

ರೈಲ್ವೆ ವಿಭಾಗೀಯ ಕಚೇರಿ, ಎಮ್ಸ್ ಆಸ್ಪತ್ರೆ, ತೊಗರಿ ತಂತ್ರಜ್ಞಾನ ಪಾರ್ಕ್, ಜವಳಿ ಪಾರ್ಕ್, ನಗರದಲ್ಲಿ ಕುಡಿಯುವ ನೀರು ಖಾಸಗೀಕರಣ ವಿರೋಧಿಸಿ ಬಂದ್ ಮಾಡಲುಗುತ್ತಿದೆ.

ಆಕ್ರಮ ನಾಡ ಪಿಸ್ತೂಲ್ ಮಾರಾಟ ಜಾಲ ಪತ್ತೆ: ಐವರ ಬಂಧನ

ಭಾರತ ಬಂದ್ ಕರೆಗೆ ಕಲಬುರಗಿ ಬಂದಗೆ ಜಿಲ್ಲೆಯ ಅಟೊ ಚಾಲಕರು, ಲಾರಿ ಮಾಲಿಕರು, NEKSRTC ಚಾಲಕರು, ಕಿರಾಣಾ ಬಜಾರ್ ವ್ಯಾಪಾರಸ್ಥರು, ಎಪಿಎಂಸಿ ವರ್ತಕರು, ಹಮಾಲರು, ಎಲ್ಲಾ ಹೊಟೇಲ್ ಮಾಲಿಕರು, ಚಪ್ಪಾಲ ಬಜಾರ್ ವ್ಯಾಪಾರಸ್ಥರು, ಗ್ಯಾರೇಜ್ ಕಂ ಮೆಕಾನಿಸಂ ಗೆಳೆಯರು, ಒಟ್ಟಾರೆ ಖಾಸಗೀಕರಣ ವಿರುದ್ಧ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here