ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಪರಿಸರ ತಿಳಿವಳಿಕೆ ಕಾರ್ಯಕ್ರಮ

0
36

ಕಲಬುರಗಿ ತಾಲೂಕಿನ ಪಟ್ಟಣಗ್ರಾಮದಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಪರಿಸರದ ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿ ವಿಜ್ಞಾನಿಯವರಾದ ಡಾ.ಜಹೀರ್‌ಅಹೆಮದ್‌ರವರು ಮಾತನಾಡಿ ಕೃಷಿ ಅತ್ಯಮೂಲ್ಯವಾಗಿದ್ದು ಆಧುನಿಕಯುಗದಲ್ಲಿ ಹೊಸ ತಂತ್ರಜ್ಞಾನ, ಭೂಮಿಯಗುಣ ಧರ್ಮ, ಪರಸಿರ ಸ್ನೇಹಿ ಕೀಟರೋಗ ಹತೋಟಿ ಮಾಡಿರೈತರಆದಾಯ ಹೆಚ್ಚಿಸಲು ವಿಜ್ಞಾನಿಗಳು, ಇಲಾಖೆ, ವಿದ್ಯಾರ್ಥಿಗಳ ಸಹಯೋಗ ಅತ್ಯಗತ್ಯ ಎಂದರು.

Contact Your\'s Advertisement; 9902492681

ಬದಲಾಗುತ್ತಿರುವ ಹವಾಮಾನದಲ್ಲಿಕಂಡು ಬರುವ ಹೊಸ ಕೀಟ ರೋಗಗಳ, ಸಸ್ಯಗಳಲ್ಲಿನ ಉಪಯೋಗಗಳ ಮಾಹಿತಿಯನ್ನು ನೀಡಲಾಯಿತು. ಕೆವಿಕೆಯ ಶ್ರೀ ನಾಗಿಂದ್ರ ಬಡದಾಳಿ ರವರು ವಿದ್ಯಾರ್ಥಿಗಳಿಗೆ ನೆನಪು ಶಕ್ತಿ ಪರೀಕ್ಷೆ, ಚಿತ್ರಕಲೆ, ವಿವಿಧಚಟುವಟಿಕೆವಿವಿಧ ಸಸ್ಯಗಳ, ಬೀಜಗಳಗುರುತಿಸುವಿಕೆಯ ಬಗ್ಗೆ ಮಾಹಿತಿ ನೀಡಿದರು.

ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕ ವರುಣ್‌ಚಿಕ್ಕೋಣಿ ಮತ್ತು ಶರಣು ಪೂಜಾರಿ ಮಣ್ಣು ಪರೀಕ್ಷೆಉಪಯೋಗ, ಕೃಷಿ ಸಂಜೀವಿನಿ ಅನೂಕೂಲ ಹಾಗೂ ಸರ್ಕಾರದಯೋಜನೆಯಯನ್ನು ತಿಳಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣಬಸಪ್ಪಾ ಪಾಟೀಲ್, ಶಿಕ್ಷಕರಾದ ಡಾ.ರವಿಚಂದ್ರ ಮೇಲಶೆಟ್ಟಿ, ಪ್ರವೀಣಾ, ಮೋಹಿತಾ, ಜಗದೇವಿ, ಅಶೋಕ ಮತ್ತು ಶಾಲೆಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here