ಭಕ್ತಿಯ ಹೊನಲು ಹರಿಸಿದ ವಚನ ಮಾಧುರ್ಯ

0
18

ಕಲಬುರಗಿ: ಶರಣರು ರಚಿಸಿದ ವಚನಗಳು ಕನ್ನಡ ಸಾಹಿತ್ಯದ ರತ್ನಗಳು, ಸಾಮಾಜಿಕಧಾರ್ಮಿಕ ನೆಲೆಗಟ್ಟಿನಲ್ಲಿ ಸಕಲರ ಲೇಸನ್ನೇ ಬಯಸಿ ಅನುಭವ ಮಂಟಪದಲ್ಲಿಚರ್ಚಿತಗೊಂಡು ಹೊರಬಂದ ಬೆಳಕಿನ ಸ್ಫುರಣಗಳು.

ಕಲಬುರಗಿ ಬಸವ ಸಮಿತಿವತಿಯಿಂದ ಶರಣರ ಸ್ಮರಣಾರ್ಥಅರಿವಿನ ಮನೆ ೬೬೩ ನೆಯದತ್ತಿಕಾರ್ಯಕ್ರಮದಲ್ಲಿ ಶರಣರ ವಚನಗಳ ಚಿಂತನ ಮತ್ತುಗಾಯನಕಾರ್ಯಕ್ರಮಏರ್ಪಡಿಸಲಾಗಿತ್ತು. ಕಲಬುರಗಿ ಶ್ರೀ ಶರಣಬಸವೇಶ್ವರ ಮಹಾವಿದ್ಯಾಲಯದ ಸಂಗೀತ ಪ್ರಾಧ್ಯಾಪಕರಾದಡಾ.ಛಾಯಾಭರತನೂರ ಈ ಸಂಗೀತ ಸಂಜೆಯಲ್ಲಿ ಶರಣರ ವಚನಗಳಿಗೆ ವಿವಿಧ ರಾಗಗಳಿಂದ ಸಂಯೋಜಿಸಿ ಹಾಡಿದ ರೀತಿ ಅನುಪಮವಾಗಿತ್ತು.

Contact Your\'s Advertisement; 9902492681

ಪ್ರಾರಂಭದಲ್ಲಿ ಭವಭವದಲ್ಲಿ ಭಕ್ತನಾದಡೆ ಆ ಭವವೇ ಲೇಸು ಕಂಡಯ್ಯ ಎಂಬ ಬಸವಣ್ಣನವರ ವಚನವನ್ನು ಹಾಡಿದಾಗಇಡೀ ಪರಿಸರವನ್ನು ಭಕ್ತಿ ಭಾವದಿಂದ ಪಾವನ ಮಾಡಿದಂತಿತ್ತು.ನಂತರ ವಚನ ಚಿಂತನೆಯೊಂದಿಗೆಕಾರ್ಯಕ್ರಮ ವಿದ್ಯುಕ್ತವಾಗಿ ಪ್ರಾರಂಭವಾಯಿತು.ಶ್ರೀ ಶರಣಬಸವೇಶ್ವರ ಕಲಾ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶ್ರೀಮತಿ ವಿಜಯಲಕ್ಷ್ಮಿಅಲ್ಲದಅವರು ವಚನಗಳನ್ನು ಒಂದೊಂದಾಗಿ ಪಠಣ ಮಾಡಿ ಅವುಗಳನ್ನು ಚಿಂತನೆಗೊಳಪಡಿಸಿದರು.ಡಾ. ಛಾಯಾ ಭತನೂರ ಆ ವಚನಗಳನ್ನು ವಿವಿಧರಾಗಗಳಲ್ಲಿ ಹಾಡಿಆನ್‌ಲೈನ್ ನೇರ ಪ್ರಸಾರದಲ್ಲಿ ನೋಡಿದಅನೇಕರ ಮೆಚ್ಚುಗೆಗ ಪಾತ್ರವಾಯಿತು.

ಸಿಡಿ ಪ್ರಕರಣ ರಾಜಕಾರಣಕ್ಕೆ ಕಪ್ಪು ಚುಕ್ಕೆ: ಬಿಜೆಪಿ ಶಾಸಕ ರಾಜೂಗೌಡ

ಶಿವ ಮಂತ್ರವೆನಗೆಕಾಮಧೇನುವಯ್ಯ, ಶಿವಮಂತ್ರವೆನಗೆ ಕಲ್ಪವೃಕ್ಷವಯ್ಯ ಎಂಬ ಷಣ್ಮುಖ ಶಿವಯೋಗಿಗಳ ವಚನವನ್ನು ಗೋರಖ ಕಲ್ಯಾಣರಾಗದಲ್ಲಿ ಹಾಡಿಎಲ್ಲರ ಗಮನ ಸೆಳೆದರು.

ನಂತರದಲ್ಲಿಜೇಡರ ದಾಸಿಮಯ್ಯನವರ ಮರದೊಳಗೆ ಮಂದಾಗ್ನಿಯ ಉರಿಯದಂತಿರಿಸಿದೆಎಂಬ ವಚನವನ್ನುಝಿಂಜೋಟಿರಾಗದಲ್ಲಿ, ಹದತಪ್ಪಿಕುಟ್ಟಲು ನುಚ್ಚಲ್ಲದೆಅಕ್ಕಿಯಿಲ್ಲಎನ್ನುವಕೊಟ್ಟಣದ ಸೋಮವ್ವೆಯ ವಚನವನ್ನುದೇಶರಾಗದಲ್ಲಿ ಹಾಡಿದಾಗ ಆನ್‌ಲೈನ್‌ನಲ್ಲಿ ಅನೇಕರು ಆನಂದದಿಂದ ಉತ್ತಮ ಪ್ರತಿಕ್ರಿಯೆ ನೀಡಿದರು.ಶರಣರ ಹಲವಾರು ವಚನಗಳಚಿಂತನೆ ಮತ್ತುಗಾಯನಕಾರ್ಯಕ್ರಮಕ್ಕೆ ದೇಶ-ವಿದೇಶಗಳಿಂದ ಉತ್ತಮ ಪ್ರತಿಕ್ರಿಯೆದೊರೆಯಿತು.

ಸಹಕಲಾವಿದರಾಗಿ ವಿಶ್ವನಾಥ ವಸ್ತ್ರದಮಠ ಹಾರ್ಮೋನಿಯಂ, ಬದರಿನಾಥ ಮುಡಬಿ ಪಿಟೀಲು, ಹಾಗೂಡಾ.ಎಂ.ಎಸ್. ಪಾಟೀಲ , ಷಣ್ಮುಖ ಪಾಟೀಲರು ತಬಲಾಸಾಥ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು. ಕಾರ್ಯಕ್ರಮದಲ್ಲಿ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದ ಡಾ.ವೀರಣ್ಣದಂಡೆ ಉಪಸ್ಥಿತ್ತರಿದ್ದರು. ಹೆಚ್.ಕೆ.ಉದ್ದಂಡಯ್ಯ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here