ಜಿಲ್ಲೆಯಲ್ಲಿ 9ನೇ ತರಗತಿ ವರೆಗೆ ರಜೆ ಘೋಷಣೆಗೆ ಡಾ. ಚುಲಬುಲ್ ಆಗ್ರಹ

0
55

ಕಲಬುರಗಿ: ಎರಡನೇ ಹಂತದ ಕೊರೊನಾ ಪ್ರಕರಣ ಮತ್ತೆ 150ಕ್ಕೆ ಏರಿಕೆಯಾಗುತ್ತಿದ್ದು, ಇನ್ನೊಂದೆಡೆ ಗುಣಮುಖರಾಗುತ್ತಿರುವ ಸಂಖ್ಯಯಲ್ಲಿ ಇಳಿಮುಖವಾಗಿದ್ದರಿಂದ ಕೋವಿಡ್ ಆಸ್ಪತ್ರೆಗಳು ಮತ್ತೆ ಭರ್ತಿಯಾಗುತ್ತಿವೆ.

ಇಂತಹ ಸಂದರ್ಭದಲ್ಲಿ ಜನರಿಲ್ಲಿ ಮತ್ತೊಮ್ಮ ಜಾಗೃತಿ ಮಾಡಬೇಕಾಗಿದೆ. ಬೆಂಗಳೂರು ಮಾದರಿಯಲ್ಲಿ ಜಿಲ್ಲೆಯಲ್ಲಿ ಸಹ 1ನೇ ತರಗತಿಯಿಂದ 9ನೇ ತರಗತಿ ವರೆಗೆ 15 ದಿನ ರಜೆ ನೀಡಿ ಸೂತ್ತೊಲೆ ಜಾರಿ ಮಾಡಬೇಕೆಂದು ನಗರಾಭಿವೃದ್ಧಿ ಮಾಜಿ ಅಧ್ಯಕ್ಷರಾದ ಡಾ.ಮೊಹಮ್ಮದ್ ಅಜಗರ್ ಚುಲಬುಲ್ ಅವರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಮಹಾದಾಸೋಹಿ ಶ್ರೀ ಶರಣಬಸವೇಶ್ವರ ರಥೋತ್ಸವ

ಭಾರಿ ಬಿಸಿಲು ಒಂದಾದರೆ ಇನ್ನೊಂದ ಕಡೆ ಕುಡಿಯುವ ನೀರು, ವಿದ್ಯುತ್, ಆರೋಗ್ಯ ಸೇರಿದಂತೆ ಇನ್ನಿತರ ಸಮಸ್ಯೆಗಳ ನಡುವು ಕೊರೊನಾ ಎರಡನೇ ಅಲೆ ಒಂದು ಭಾರಿ ಸಂಕಷ್ಟ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ನಗರದಲ್ಲಿ ಕೊರೊನಾದಿಂದ ಮೃತಪಟ್ಟುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಗ್ಗಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಜವಾಬ್ದಾರಿ ಮುಖ್ಯವಾಗಿದೆ. ಮಹಾಮಾರಿ ತಡೆಯಲು ಕೋವಿಡ್ ಕೇರ್ ಸೆಂಟರ್ ತೆರೆಯಲು ವಸತಿ ನಿಲಯಗಳನ್ನು ಗುರುತಿಸಿ ಜಿಲ್ಲೆಗೆ ಆಕ್ಸಿಜನ್ ಸ್ಟೋರೆಜ್ ಪ್ಲಾಂಟ್ ಅತಿ ಅವಶ್ಯವಿದೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ ಪಕ್ಷಾತೀತ ಹೋರಾಟಕ್ಕೆ ಬಿ.ಆರ್ ಪಾಟೀಲ ನೇತೃತ್ವಕ್ಕೆ ಮನವಿ

ಇನ್ನೂ ಮುಂದೆ ಕೋವಿಡ್ ಎರಡನೇ ಅಲೆ ತಡೆಯಲು ಜಿಲ್ಲಾಡಳಿತ ಹೆಚ್ಚಿನ ಮುಂಜಾಗೃತೆ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here