‘ಕವಿತೆ ಹಿಂದಿನ ಕಥನ’ ವಿಭಿನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ

0
51

ಕಲಬುರಗಿ: ರಾಷ್ಟ್ರಕೂಟ ಪುಸ್ತಕ ಮನೆ ಸೇಡಂ ಪ್ರಕಟಿಸಿದ ಕವಿತೆ ಹಿಂದಿನ ಕಥನ ಪುಸ್ತಕ ಜನಾರ್ಪಣೆ ಕಾರ್ಯಕ್ರಮ ನಗರದ ಕಲಾ ಮಂಡಳದಲ್ಲಿ ಭಾನುವಾರ ಜರುಗಿತು.

ಪತ್ರಕರ್ತ-ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ಸಂಪಾದಿಸಿದ ಈ ಕೃತಿಯಲ್ಲಿ ಡಾ. ವಸಂತ ಕುಷ್ಟಗಿ, ಸಂಧ್ಯಾಹೊನಗುಂಟಿಕರ್, ಡಾ. ಕಾಶಿನಾಥ ಅಂಬಲಗಿ, ಪ್ರೇಮಾ ಹೂಗಾರ, ಸಿದ್ಧರಾಮ ಹೊನ್ಕಲ್, ಡಾ. ಸ್ವಾಮಿರಾವ ಕುಲಕರ್ಣಿ, ಪ್ರಭಾಕರ ಜೋಶಿ, ಸಾಕ್ಷಿ ಶಿವರಂಜನ್ ಸತ್ಯಂಪೇಟೆ, ಪಿ.ಎಂ.‌ಮಣ್ಣೂರ, ಡಿ.ಎಂ. ನದಾಫ್, ಡಾ. ರಾಜಶೇಖರ ಮಾಂಗ್, ಎಸ್.ಪಿ. ಸುಳ್ಳದ ಸೇರಿದಂತೆ ಕಲ್ಯಾಣ ಕರ್ನಾಟಕದ 25 ಜನ ಕವಿಗಳ ಕವಿತೆ ಇದರಲ್ಲಿವೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಲಬುರಗಿ ನೆಲದಿಂದ ವಿಶಿಷ್ಟ ಕೃತಿಯ ಕೊಡುಗೆ ಇದಾಗಿದ್ದು, ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಪ್ರಾರ್ಥನೆಗೀತೆ ಹಾಡಿದರು.

Contact Your\'s Advertisement; 9902492681

ಮಕ್ಕಳ ಕವಿ ಎ.ಕೆ. ರಾಮೇಶ್ವರ, ಹಿರಿಯ ಸಾಹಿತಿ ಪ್ರೊ. ವಸಂತ ಕುಷ್ಟಗಿ, ಪಿ.ಎಂ.‌ಮಣ್ಣೂರ, ಡಾ. ಎಸ್.ಎಸ್. ಗುಬ್ಬಿ, ಲಿಂಗಾರೆಡ್ಡಿ ಸೇರಿ, ಡಾ.‌ಬಸವರಾಜ ಸಬರದ, ಪ್ರಭಾಕರ ಜೋಶಿ, ಗುರುಶಾಂತಯ್ಯ ಭಂಟನೂರ, ಎಸ್.ಪಿ.ಸುಳ್ಳದ, ಸಿದ್ಧರಾಮ ಹೊನ್ಕಲ್, ಶಂಕ್ರಯ್ಯ ಆರ್. ಘಂಟಿ ಸೇರಿದಂತೆ ಎಲ್ಲ ಕವಿಗಳು ಇದ್ದರು.

ಪ್ರಕಾಶಕರಾದ ರತ್ನಕಲಾ ಮಹಿಪಾಲರೆಡ್ಡಿ ಪುಸ್ತಕ ಬಾಗೀನ ಅರಗಪಿಸುವ ಮೂಲಕ ಪುಸ್ತಕ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.

ಅಧ್ಯಕ್ಷರು, ಅತಿಥಿಗಳು ಯಾರೂ ವೇದಿಕೆಯಲ್ಲಿ ಇರಲಿಲ್ಲ. ಬದಲಿಗೆ 20ಕ್ಕೂ ಹೆಚ್ಚು ಕವಿಗಳು ವೇದಿಕೆಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here