ಶಹಾಬಾದ: ಬಾಬು ಜಗಜೀವನರಾಮ ಅವರ ೧೧೪ನೇ ಜಯಂತಿ ಆಚರಣೆ

0
56

ಶಹಾಬಾದ: ನಗರದ ಇಂದಿರಾ ನಗರ ಮಡ್ಡಿ ನಂ-೨ ರಲ್ಲಿ ಸೋಮವಾರ ಭಾರತದ ಮಾಜಿ ಉಪ ಪ್ರಧಾನ ಮಂತ್ರಿ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ ಅವರ ೧೧೪ ನೇಯ ಜಯಂತಿಯನ್ನು ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಗರ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲೋಹಿತ್ ಕಟ್ಟಿ, ದೇಶದಲ್ಲಿ ಆಹಾರ ಸಮಸ್ಯೆ ತಲೆದೂರಿ ಜನತೆ ತಲ್ಲಣಗೊಂಡ ಸಂದರ್ಭದಲ್ಲಿ ಸುಧಾರಿತ ಬಿತ್ತನೆ ಬೀಜಗಳ ತಳಿಗಳನ್ನು ಬಳಕೆ ಮಾಡುವ ಮೂಲಕ ಹಸಿರು ಕೃಷಿ ವಲಯದಲ್ಲಿ ಪ್ರಗತಿ ಸಾಧಿಸಿ, ಕ್ರಾಂತಿ ಮಾಡಿದವರು ಬಾಬು ಜಗಜೀವನರಾಮರವರು. ಅವರು ದೇಶ ಕಂಡ ಅಪರೂಪದ ರಾ? ನಾಯಕರಾಗಿದ್ದಾರೆ.

Contact Your\'s Advertisement; 9902492681

ಮಹಾಪುರುಷರ ಸಂದೇಶ ಮರೆತರೆ ಭವಿಷ್ಯವಿಲ್ಲ: ಬಡಿಗೇರ

ಅವರು ಶೋಷಿತರ ಹಕ್ಕಿಗಾಗಿ ನಿರಂತರ ಶ್ರಮವಹಿಸಿ, ಶೋಷಿತರ ಏಳಿಗಾಗಿ ಅಪಾರವಾಗಿ ಶ್ರಮಿಸಿ ಶೋಷಿತರ ಆಶಾಕಿರಣವಾಗಿದ್ದಾರೆ. ಯುವ ಪೀಳಿಗೆಯು ಡಾ. ಬಾಬು ಜಗಜೀವನ ರಾಮ್ ಅವರ ಕುರಿತು ಅಧ್ಯಯನ ಮಾಡಿ, ಅವರ ಆದರ್ಶಗಳನ್ನು ಅನುಸರಿಸಬೇಕು. ಅವರ ಸಾಮಾಜಿಕ ಮತ್ತು ರಾಜಕೀಯ ವಿಚಾರಧಾರೆಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರಲ್ಲದೇ, ಅಸ್ಪೃಶ್ಯತೆ ಬಗ್ಗೆ, ರಾಜಕೀಯದಲ್ಲಿ ಮಾಡಿದ ಸಾಧನೆ, ಮತ್ತು ಜೀವನ ಚರಿತ್ರೆಯನ್ನು ಸವಿಸ್ತಾರವಾಗಿ ಮಾತನಾಡಿದರು.

ಹಾಜಪ್ಪ ಮಾಸ್ಟರ್ ಬಿಳಾರ, ನಾಗರಾಜ್ ಮುದ್ನಾಳ, ಮಾತನಾಡಿದರು, ಸಂತೋ? ಹುಲಿ, ಶಾಮರಾವ್ ಕೋರಿ, ಶರಣು ಧಮ್ಮೂರ, ಯಲ್ಲಪ್ಪ ಜಾಲಹಳ್ಳಿ, ವಿಶಾಲ, ದೇವೇಂದ್ರಪ್ಪ, ರಾಜು ಮುದ್ನಾಳ, ಮಹೇಶ್ ಮರತೂರ, ಅಶೋಕ ಕುಂಬ್ಳೆ, ಶಂಕರ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here