ಮಹಾಪುರುಷರ ಸಂದೇಶ ಮರೆತರೆ ಭವಿಷ್ಯವಿಲ್ಲ: ಬಡಿಗೇರ

0
19

ಕಲಬುರಗಿ: ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಭಾರತದಲ್ಲಿ, ಹಲ ಬಗೆಯ ಸೆಣಸಾಟದಲ್ಲಿಯೇ ತಮ್ಮನ್ನು ಕಟ್ಟಿಕೊಂಡ, ಬೆಳಗಿಕೊಂಡ ಕೆಲವೇ ಕೆಲವು ದಲಿತ ನಾಯಕರಲ್ಲಿ ಬಾಬಾಸಾಹೇಬ್ ಡಾ.ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಮುಖ್ಯರು. ರುಭಯ ನಾಯಕರ ಬದುಕಿನ ಪುಟಗಳಲ್ಲಿ ಹೆಜ್ಜೆಹೆಜ್ಜೆಗೂ ಅವರು ಸೆಣಸಿದ ಕಥನವೇ ಕಾಣಿಸುತ್ತದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಅಭಿಪ್ರಾಯ ಪಟ್ಟರು.

ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನದ ಬಗ್ಗೆ ಹೇಳಿದ ಸಂದೇಶಗಳನ್ನು ಮರೆತರೆ ಪ್ರಜಾಪ್ರಭುತ್ವದ ಭಾರತಕ್ಕೆ ಭವಿಷ್ಯವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹೇಳಿದರು.

Contact Your\'s Advertisement; 9902492681

ಇಂದು ನಗರದ ಅಶಿಫ್ ಗಂಜ್ ಪ್ರೌಢ ಶಾಲೆಯಲ್ಲಿ ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯು ಬಾಬು ಜಗಜೀವನರಾಮ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಜಯಂತಿಯ ನಿಮಿತ್ಯ ಏರ್ಪಡಿಸಿದ್ದ ವಿಶೇಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಬಾಬಾಸಾಹೇಬ ಬಾಬು ಜಗಜೀವನರಾಮ ದಲಿತ ಸಮುದಾಯದ ಎರಡು ಕಣ್ಣು

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಮಾಜಿಕ ಕಾಶಿರಯ ನಂದೂರ ಅವರು, ಭಾರತದ ಸಮಗ್ರ ಅಭಿವೃದ್ಧಿಗೆ ಬಾಬು ಜಗಜೀವನರಾಮ ಹಾಗು ಡಾ. ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಿಳಾ ಪೊಲೀಸ ಪೇದೆ ಸಾವಿತ್ರಿ ಅವರು ಮಾತನಾಡಿ, ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಈ ರಾಷ್ಟ್ರದ ಚುಕ್ಕಾಣಿಯನ್ನು ಹಿಡಿಯಬೆಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ದಲಿತ ಸಮುದಾಯದ ಮುಖಂಡರಾದ ಅಂಬಾರಾಯ ಬೆಳಕೋಟಿ ಹಾಗು ಶಾಲೆಯ ಮುಖ್ಯ ಗುರುಗಳಾದ ಬಸವಂತರಾಯ ಜಡೆ ವೇದಿಕೆ ಮೇಲೆ ಇದ್ದರು.

ಸರ್ವರ್ ಸಮಸ್ಯೆ ನಿವಾರಿಸಲು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮನವಿ

ಸಮಾರಂಭದ ಆರಂಭಕ್ಕೆ ಕರವೇ ಅಧ್ಯಕ್ಷರಾದ ಮಂಜುನ್ನಾಥ ನಾಲ್ವಾರಕರ ಪ್ರಾಸ್ತಾವಿ ಕವಾಗಿ ಮಾತನಾಡಿ, ಮಹಾಪುರುಷರ ಸಂದೇಶಗಳನ್ನು ಮಕ್ಕಳಿಗೆ ಮುಟ್ಟಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here