ಪ್ರತಿ ವರದಿಗಾರರಿಗೆ ಬರವಣಿಗೆಯಲ್ಲಿ ಆತ್ಮ ಸಂತೃಪ್ತಿ ಅವಶ್ಯ: ಶ್ರೀಕಾಂತಾಚಾರ್ಯ ಮಣ್ಣೂರ

0
72

ಕಲಬುರಗಿ: ಪತ್ರಕರ್ತರಿಗೆ ವಿಷಯ ಸಂಗ್ರಹಣೆ, ವಿಶ್ಲೇಷಣೆ ಮತ್ತು ವಿವೇಚನೆ ಬಲು ಮುಖ್ಯವಾಗಿದೆ. ಪತ್ರಿ ವರದಿಗಾರರಿಗೆ ತಮ್ಮ ಬರವಣಿಗೆಯ ಬಗ್ಗೆ ಆತ್ಮ ಸಂತೃಪ್ತಿ ಇದ್ದಾಗ ಮಾತ್ರ ಜಗತ್ತು ಆ ಬರವಣಿಗೆಯನ್ನು ಗುರುತಿಸುತ್ತದೆ ಮತ್ತು ಶ್ಲಾಘಿಸುತ್ತದೆ ಎಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ನಿವೃತ್ತ ಸ್ಥಾನಿಕ ಸಂಪಾದಕರಾದ ಶ್ರೀಕಾಂತಾಚಾರ್ಯ ಮಣ್ಣೂರ ಅಭಿಪ್ರಾಯಪಟ್ಟರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅನುಭವ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಪಾದಕೀಯ ಮತ್ತು ಅಂಕಣ ಬರವಣಿಗೆ ಕುರಿತು ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಗಾರದಲ್ಲಿ ವಿಚಾರ ಮಂಡಿಸಿದ್ದ ಅವರು, ಸಂಪಾದಕೀಯ ಎಂಬುವದು ಪತ್ರಿಕೆಯ ಜೀವಾಳವಿದ್ದಂತೆ. ಸಂಪಾದಕೀಯ ಪತ್ರಿಕೆಯ ಧೇಯವನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

Contact Your\'s Advertisement; 9902492681

ಪತ್ರಿಕೆಗೆ ಸಂಪಾದಕೀಯ ಮತ್ತು ಅಂಕಣ ಎಂಬುವದು, ಮನುಷನ್ಯಿಗೆ ಮೆದಳು ಮತ್ತು ಹೃದಯ ಇದ್ದಹಾಗೆ. ಮನುಷ್ಯನ ದೇಹದಲ್ಲಿ ಮೆದಳು ಮತ್ತು ಹೃದಯ ಎಷ್ಟು ಮಹತ್ವ ಪಡೆದಿರುತ್ತವೆ, ಅಷ್ಟೆ ಮಹತ್ವ ಪತ್ರಿಕಾರಂಗದಲ್ಲಿ ಸಂಪಾದಕೀಯ ಮತ್ತು ಅಂಕಣ ಪಡೆಯುತ್ತದೆ ಎಂದರು.
ಅಂಕಣಗಳಿಂದ ಜಗತ್ತಿನ ಆಗು ಹೋಗುಗಳ ಬಗ್ಗೆ ಆಳವಾದ ವಿಶೇಷ ಜ್ಞಾನ ಲಭ್ಯವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಯುವ ಜನತೆಗೆ ಹೆಚ್ಚು ಹೆಚ್ಚು ಅವಕಾಶಗಳಿವೆ. ವಿವಿಧ ಕ್ಷೇತ್ರದ ಪರಿಣಿತರಿಗೂ ಅಂಕಣ ಬರವಣಿಗೆಯಲ್ಲಿ ವಿಶೇಷ ಅವಕಾಶ ದೊರೆಯುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮದ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಟಿ.ವಿ. ಶಿವಾನಂದನ್ ಮಾತನಾಡಿ, ವಿವಿಧ ವಿಷಯಗಳ ಬಗ್ಗೆ ವಿಭಿನ್ನ ದೃಷ್ಠಿಕೋನಕ್ಕೆ ಅಂಕಣಗಳು ನಾಂದಿ ಹಾಡುತ್ತವೆ. ಬರವಣಿಗೆಯ ಕೈಚಳಕದಿಂದ ವಿವಿಧ ವಿಷಯಗಳ ಬಗ್ಗೆ ವಿವಿಧ ಕ್ಷೇತ್ರದ ಪರಿಣಿತರಿಂದ ಅಂಕಣಗಳು ಹೊರಹೊಮ್ಮುತ್ತವೆ ಎಂದು ತಿಳಿಸಿದರು.

ಸಂಪಾದಕೀಯ ಮತ್ತು ಅಂಕಣಗಳು ಪತ್ರಿಕೆಯ ಘನತೆಯ ಪತ್ರಿಕವಾಗಿವೆ. ಪ್ರಸ್ತುತ ದಿನದಲ್ಲಿ ವಿಷಯ ಪರಿಣಿತರಿಂದ, ತಜ್ಞರಿಂದ ಅಂಕಣ ಬರವಣಿಗೆ ಹೊರಹೊಮ್ಮುತ್ತಿರುವುದು ವಿಶೇಷವಾಗಿದೆ ಎಂದರು.

ಡಾ. ಸಾರೀಕಾದೇವಿ ಕಾಳಗಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ನಿರ್ಮಲಾ ಜಿ. ದೊರೆ ಸ್ವಾಗತಿಸಿದರು. ಡಾ. ಸುನೀತಾ ಬಿ. ಪಾಟೀಲ ಅತಿಥಿ ಪರಿಚಯಿಸಿದರು. ಪ್ರೊ. ಅಶ್ವಿನಿ ರೆಡ್ಡಿ ವಂದಿಸಿದರು. ಆಂಗ್ಲ ವಿಭಾಗದ ಮುಖ್ಯಸ್ಥರು ಡಾ. ಎಸ್.ಜಿ. ಡೊಳ್ಳೆಗೌಡರ್ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್. ಪಾಟೀಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಗಾರದಲ್ಲಿ ಕೆಲವೊಂದಿಷ್ಟು ಜನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಆನ್‌ಲೈನ್ ಮೋಡ್‌ದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here