ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಆನ್-ಲೈನ್ ಮೂಲಕ ನಡೆಸಲು ಮನವಿ

0
56

ಕಲಬುರಗಿ: ಸರಕಾರದ ಅನೇಕ ಅನುದಾನದ ಸಂಘ, ಸಂಸ್ಥೆ, ಪರಿಷತ್ತಗಳಲ್ಲಿ ಒಂದಾದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತ. ಅದರ ಚುನಾವಣೆ ಆನ್‌ಲೈನ್ ಮೂಲಕ ನಡೆಸಿ ಪರಿಷತ್ತಿನ ಸದಸ್ಯರಿಗೆ ಕರೋನಾ ವೈರಸದಿಂದ ಆಗುವ ಅನಾಹುತ ತಪ್ಪಿಸಬೇಕೆಂದು ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಜೀವ ಸದಸ್ಯ ಹಾಗು ನ್ಯಾಯವಾದಿ ಶಿವರಾಜ ಅಂಡಗಿ ಒತ್ತಾಯಿಸಿದ್ದಾರೆ.

ಅವರು ಈ ಕುರಿತು ಜಿಲ್ಲಾಧಿಕಾರಿ ಮುಖಾಂತರ ಸಿಎಂಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿ, ಲಕ್ಷಾಂತರ ಮತದಾರರು ಹೊಂದಿರುವ ಕೇಂದ್ರ ಕನ್ನಡ ಸಾಹಿತ್ಯ ಪರಷತ್ತಿನ ಚುನಾವಣೆ ಈಗಾಗಲೇ ಪ್ರಕ್ರೀಯೆ ಆರಂಭಿಸಿದ್ದು ಅದರ ಹಿನ್ನೆಲೆಯಲ್ಲಿ ೨ನೇ ಹಂತದ ಕರೋನಾ ರಣಕೇಕೆಯಿಂದ ಜಿಲ್ಲೆ ತತ್ತರಿಸುತ್ತಿದೆ.

Contact Your\'s Advertisement; 9902492681

ಒಂದೆಡೆ ರಣ ಬಿಸಿಲಿನ ತಾಪ, ನೀರಿನ ದಾಹ ಇನ್ನೊಂದಡೆ ಕರೋನಾ ೨ನೇ ಹಂತ ಮೊದಲನೇ ಹಂತಕ್ಕಿಂತ ವೇಗವಾಗಿದ್ದು. ಕರೋನಾಕ್ಕೆ ದೇಶದಲ್ಲೆ ಮೊದಲ ಬಲಿಯಾಗಿದ್ದು ನಗರದಲ್ಲೆ ಎಂಬ ಕಪ್ಪು ಚುಕ್ಕೆ ಇನ್ನೂ ಇದೆ. ಇಂತಹ ಸಂದಿಗ್ನ ಪರಿಸ್ಥಿತಿಯಲ್ಲಿ ಕಸಾಪ ರಾಜ್ಯದಲ್ಲಿ ಲಕ್ಷಾಂತರ ಮತದಾರ ಹೊಂದಿರುವ, ಕಸಾಪ ೧೨ಸಾವಿರಕ್ಕಿಂತ ಹೆಚ್ಚು ಸದಸ್ಯರು ಹೊಂದಿರುವ ಪರಿಷತ್ತಿನ ಚುನಾವಣೆ ನಡೆಸುವುದು ಅಷ್ಟು ಸಮಂಜಸವಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here