ಜಾತ್ರಾ ಮಹೊತ್ಸವಗಳನ್ನು ಕಡ್ಡಾಯವಾಗಿ ನಿಷೇಧ: ಸಚಿವ ಆರ್. ಅಶೋಕ್

0
69

ಬೆಂಗಳೂರು: ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಜಾತ್ರಾ ಮಹೋತ್ಸವಗಳನ್ನು ಏರ್ಪಡಿಸಲು ಅವಕಾಶ ನೀಡಬಾರದು.  ಯಾವುದೇ ಜಾತ್ರೆ ನಡೆಯುವುದಕ್ಕೆ ಮುನ್ನ ಆ ಸ್ಥಳಗಳಿಗೆ ಒಂದು ತಿಂಗಳು ಮುಂಚಿತವಾಗಿ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳುವುದು ಸೂಕ್ತ  ಎಂದು ಕಂದಾಯ ಸಚಿವÀ ಆರ್. ಅಶೋಕ್ ತಿಳಿಸಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್ ಹಾಗೂ ಕಂದಾಯ ಸಚಿವ ಆರ್. ಅಶೋಕ್ ಅವರ ನೇತೃತ್ವದಲ್ಲಿ ಇಂದು ವಿಕಾಸಸೌಧದಲ್ಲಿ  ವಿಡಿಯೋ ಸಂವಾದ ಮೂಲಕ ಹಮ್ಮಿಕೊಳ್ಳಲಾಗಿದ್ದ ಸಭೆಯ ನಂತರ ಅವರು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ಸಭೆಯಲ್ಲಿ ಮುಖ್ಯವಾಗಿ ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಕೈಗೊಂಡಿರುವ  ಕ್ರಮಗಳ ಕುರಿತು ಇಲಾಖಾ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಅವರು ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು.

ನಾಳೆ ಮೈಲಾರಪ್ಪ ಸಗರ, ಎಲ್. ಬಿ.ಕೆ.ಆಲ್ದಾಳ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಕೋವಿಡ್-19 ಎರಡನೇ ಅಲೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಇಂದು ವಿಕಾಸ ಸೌಧದಲ್ಲಿ 3 ಗಂಟೆಗಳ ಅವಧಿ ವಿಸ್ತøತವಾದ ಸಭೆ ನಡೆಸಲಾಯಿತು. ಬಹಳ ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲು ಸಭೆಯಲ್ಲಿ ತೀರ್ಮಾನಿಸಿ, ಸೋಮವಾರದ ನಂತರ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಸಂಪರ್ಕಿಸಿ ಕೂಡಲೇ ಮಾರ್ಗಸೂಚಿಯನ್ನು ಸರ್ಕಾರದ ವತಿಯಿಂದ ನೀಡಲಾಗುವುದು.

ಮದುವೆ ಮತ್ತು ಕಲ್ಯಾಣ ಮಂಟಪಕ್ಕೆ ಪಾಸ್‍ಗಳನ್ನು ಕೊಡಬೇಕು. ತಹಸೀಲ್ದಾರ್ ಅವರು  ಕೇಂದ್ರ ಸರ್ಕಾರ ಸೂಚಿಸಿರುವಂತೆ ಮದುವೆಗೆ ಪಾಸ್‍ಗಳನ್ನು ನೀಡಬೇಕು. ಪೊಲೀಸ್ ಸ್ಟೇಷನ್‍ಗೆ ತಿಳಿಸಬೇಕು.  ಕೇಂದ್ರ ಸರ್ಕಾರ ಸೂಚಿಸಿರುವಂತೆ ನಿಗದಿತ ಜನರು  ಮಾತ್ರ ಮದುವೆ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕು. ನಿಗದಿಪಡಿಸಿದ್ದಕ್ಕಿಂತ ಹೆಚ್ಚಾಗಿದ್ದರೆ ಕಲ್ಯಾಣ ಮಂಟಪಗಳನ್ನು ಮುಚ್ಚಿ, ಸೀಲ್ ಮಾಡಲಾಗುವುದು ಎಂದು ತಿಳಿಸಿದರು.

ನಾಳೆ ಮೈಲಾರಪ್ಪ ಸಗರ, ಎಲ್. ಬಿ.ಕೆ.ಆಲ್ದಾಳ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

ಆಮ್ಲಜನಕ ಕಡಿಮೆ ಆಗದಂತೆ ಈಗಾಗಲೆ ಸಿದ್ದತೆ ನಡೆಸಲು ತಿಳಿಸಲಾಗಿದೆ. ಕಳೆದ ಬಾರಿಗಿಂತ ಅಧಿಕ ಬೆಡ್ ವ್ಯವಸ್ಥೆಯನ್ನು ಮಾಡಬೇಕು. ಡೆಟಾ ಆಪರೇಟರ್ಸ್‍ನ್ನು ನೇಮಕಾತಿ ಮಾಡಲು ಜಿಲ್ಲಾಧಿಕಾರಿಗಳಿಗೆ  ಅಧಿಕಾರ ನೀಡಲಾಗಿದೆ ಹಾಗೂ ಹಣವನ್ನು ಬಿಡುಗಡೆ ಮಾಡಲಾಗುವುದು. ಕೋವಿಡ್‍ಗೆ ಸಂಬಂಧಿಸಿದಂತೆ ಸೋಮವಾರ ಜಿಲ್ಲಾಧಿಕಾರಿಗಳಿಗೆ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಲಾಗುವುದು.
ಶವ ಸಂಸ್ಕಾರ ಗೌರವಯುತವಾಗಿರಬೇಕು. ಶವವನ್ನು ಹೂಳಲು, ಸುಡಲು ಶವಸಂಸ್ಕಾರಕ್ಕೆ ತೊಂದರೆ ಆಗಬಾರದು. ಈಗಾಗಲೇ ಈ ಸಂಬಂಧ ಸರ್ಕಾರ ಅಗತ್ಯ ಕ್ರಮ ವಹಿಸಿದೆ ಎಂದು ಸಚಿವರು ತಿಳಿಸಿದರು.

ಕೋವಿಡ್-19 ಮೂರನೆ ಅಲೆ ಬೇರೆ  ದೇಶಗಳಲ್ಲಿ ಕಾಣಿಸಿಕೊಂಡಿದೆ. ನಮ್ಮ ರಾಜ್ಯದಲ್ಲಿ  ಮೂರನೆ ಅಲೆ ವಿಕೋಪವಾಗಬಾರದು. ಅದರ ಪ್ರಖರತೆ, ಸಂಖ್ಯೆ, ಶೇಕಡ 10% ಗಿಂತ ಕಡಿಮೆ ಇರಬೇಕು.  ಆದ್ದರಿಂದ ವ್ಯಾಕ್ಸಿನೇಷನ್, ಕೋವಿಡ್ ಟೆಸ್ಟ್‍ಗಳನ್ನು ಹೆಚ್ಚಾಗಿ ಮಾಡಲಾಗುವುದು ಆಗ ಕೋವಿಡ್ ನಿಯಂತ್ರಣದಲ್ಲಿಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಿನಿಮಾ ಲೋಕದ ಧ್ರುವತಾರೆ ಚಾರ್ಲಿ ಚಾಪ್ಲಿನ್ ರವರ 132ನೇ ಜನ್ಮದಿನ

ಕೋವಿಡ್-19 ಬೆಂಗಳೂರಿಗೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಚಿವರು, ಶಾಸಕರನ್ನು ಒಳಗೊಂಡ ತಂಡ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here