ಸಾರಿಗೆ ನೌಕರರ ಬೆಂಬಲಿಸಿ ಸಾಮೂಹಿಕ ಸಂಘಟಕರ ಹೋರಾಟ

0
19

ಸುರಪುರ: ಮುಷ್ಕರ ನಿರತ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗುವಂತೆ ಕಿರುಕುಳ ನೀಡುವುದು ಮತ್ತು ನೊಟೀಸ್ ನೀಡದಂತೆ ಆಗ್ರಹಿಸಿ ಸಾಮೂಹಿಕ ಸಂಘಟನೆಗಳ ಮುಖಂಡರು ಸುರಪುರ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅನೇಕ ಮುಖಂಡರು ಮಾತನಾಡಿ,ಸಾರಿಗೆ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ.ಸರಕಾರ ಬೇಡಿಕೆ ಈಡೇರಿಸದ ಕಾರಣ ಮುಷ್ಕರಕ್ಕೆ ಮುಂದಾಗಿದ್ದಾರೆ.ಆದ್ದರಿಂದ ಯಾವುದೇ ಸಾರಿಗೆ ನೌಕರರು ಕೆಲಸಕ್ಕೆ ಬರುವಂತೆ ಡಿಪೋ ಅಧಿಕಾರಿಗಳು ಒತ್ತಾಯಿಸಬಾರದು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಪಿ.ಹೆಚ್.ಡಿ, ಎಂ.ಫಿಲ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗೆ ಫೆಲೋಶಿಫ್

ಅಲ್ಲದೆ ನಿಮ್ಮಂತೆ ಅವರು ಕೆಲಸ ಮಾಡುತ್ತಾರೆ,ಆದರೆ ಅವರ ಬೇಡಿಕೆಗಳನ್ನು ಸರಕಾರ ಈಡೇರಿಸದೆ ಕಡೆಗಣಿಸಿದ್ದಕ್ಕೆ ಬೇಸತ್ತು ಮುಷ್ಕರಕ್ಕೆ ಮುಂದಾಗಿದ್ದಾರೆ.ತಾವು ಅವರ ಮನೆಗೆ ನೋಟಿಸ್ ಕಳುಹಿಸುವುದು ಮತ್ತು ಮನೆಗಳಿಗೆ ನೋಟಿಸ್ ಅಂಟಿಸುವುದು ಹಾಗು ಮನೆಗಳಿಗೆ ಹೋಗಿ ಕೆಲಸಕ್ಕೆ ಬರದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿ ಬೆದರಿಸುತ್ತಿರುವುದು ಸರಿಯಲ್ಲ,ಮುಂದೆ ಈ ರೀತಿ ಮಾಡಿದಲ್ಲಿ ಡಿಪೋ ಅಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ನಂತರ ಘಟಕ ವ್ಯವಸ್ಥಾಪಕರಿಗೆ ಬರೆದ ಮನವಿಯನ್ನು ಡಿಪೋ ಮ್ಯಾನೇಜರ ಭದ್ರಪ್ಪ ಅವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ವೆಂಕೋಬ ದೊರೆ ಬೊಮ್ಮನಹಳ್ಳಿ ರಮೇಶ ದೊರೆ ಆಲ್ದಾಳ ವೆಂಕಟೇಶ ಬೇಟೆಗಾರ ದೇವಿಂದ್ರಪ್ಪ ಪತ್ತಾರ ರಾಹುಲ ಹುಲಿಮನಿ ಭೀಮರಾಯ ಸಿಂದಗೇರಿ ಹಣಮಂತ ಕಟ್ಟಿಮನಿ ಬೊಮ್ಮನಹಳ್ಳಿ ವೀರಭದ್ರಪ್ಪ ತಳವಾರಗೇರಾ ಭೀಮಣ್ಣ ದೀವಳಗುಡ್ಡ ಶರಣಗೌಡ ದೇವಾಪುರ ಶೇಖರ ಮಂಗಳೂರು ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here