ಜೇವರ್ಗಿ: ಜನರಲ್ಲಿರುವ ಭಯವನ್ನು ನಿವಾರಿಸಲು ಪಟ್ಟಣದ ನಾಲ್ಕು ಕಡೆಗಳಲ್ಲಿ 4 ಕಡೆ ಕರೋನಾ ಹೆಲ್ಪ್ ಡೆಸ್ಕ್, ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ವಿನಯ್ ಕುಮಾರ್ ಪಾಟೀಲ್ ತಿಳಿಸಿದರು.
ಡೆಸ್ಕಿನಲ್ಲಿ ಒಬ್ಬರು ತರಬೇತಿ ಪಡೆದ ಶಾಲಾ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತರು ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಅಂಗನವಾಡಿ ಸಹಾಯಕರು ಜಾಗೃತಿ ಮೂಡಿಸುವುದು ಹಾಗೂ ವ್ಯಾಕ್ಸಿನೇಷನ್ ಪಡೆಯಲುಸಲಹೆ ನೀಡುತ್ತಾರೆ ಹಾಗೂ ಯಾವುದೇ ಕರೋನ ಕುರಿತು ದೈಹಿಕ ಹಾಗೂ ಮಾನಸಿಕ ಅನುಮಾನಗಳಿಗೆ ಸಂಬಂಧಿ ಕಾಯಿಲೆಗಳ ಕುರಿತು ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕ್ರೀಡಾ ಸಂಕೀರ್ಣ ಬಿಟ್ಟುಕೊಟ್ಟ ಬಾಷ್ ಲಿಮಿಟೆಡ್
ವ್ಯಾಕ್ಸಿನೇಷನ್ ಪಡೆದ 99% ಜನ ಕರೋನವೈರಸ್ ಜೀವಹಾನಿ ತರುವ ಅಪಾಯಕಾರಿ ಲಕ್ಷಣಗಳನ್ನು ತಡೆಯುತ್ತದೆ ಹಾಗೂ
ಮುಂಜಾಗೃತ ಕ್ರಮವಾಗಿ ವ್ಯಾಕ್ಸಿನೇಷನ್ ಪಡೆದುಕೊಂಡಿರುವ ಹಾಗೂ ಎರಡು ಸುತ್ತಿನ ವ್ಯಾಕ್ಸಿನೇಷನ್ ಪಡೆದಿರುವ ಎಲ್ಲರಲ್ಲಿಯೂ ಲಕ್ಷಣಗಳು ಹಾಗೂ ಜೀವಕ್ಕೆ ಹಾನಿಯ ಸಂಭವಗಳು ತುಂಬಾ ಕಡಿಮೆ ಇವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ತಿಳಿಸಿದರು.
ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸಂತೆಗಾಗಿ ತರಕಾರಿ ಸಮಾಜಿಕ ಅಂತರ ಕಾಯ್ದುಕೊಂಡು ಎಲ್ಲ ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು.