ಸುರಪುರ: ಗುರುವಾರ ರಾತ್ರಿ ಅಕಾಲಿಕವಾಗಿ ಸುರಿದ ಮಳೆಯಿಂದ ರೈತರಿಗೆ ದೊಡ್ಡ ಮಟ್ಟದಲ್ಲಿ ನಷ್ಟವುಂಟು ಮಾಡಿದೆ.ತಾಲೂಕಿನ ಆಲ್ದಾಳ ಗ್ರಾಮದಲ್ಲಿ ರೈತರು ಭತ್ತದ ರಾಶಿ ಮಾಡಿ ಒಣಗಲೆಂದು ಹಾಕಿದ ಭತ್ತ ಈಗ ಮಳೆ ನೀರಲ್ಲಿ ತೋಯ್ದು ಹಾನಿಯುಂಟು ಮಾಡಿದೆ.
ಆಲ್ದಾಳ ಗ್ರಾಮದ ರೈತರಾದ ಧರ್ಮಣ್ಣ ಗುಂಡಾಪುರ ಮಲ್ಲಯ್ಯ ಹಾವಿನಾಳ ಹುವಣ್ಣ ಕೂಜಾಪುರ ಸೇರಿದಂತೆ ಅನೇಕ ಜನ ರೈತರು ರಾಶಿ ಮಾಡಿದ ಭತ್ತ ಹಾಕಿದ್ದು ಗುರುವಾರ ರಾತ್ರಿ ಏಕಾಎಕಿ ಮಳೆ ಸುರಿದಿದ್ದರಿಂದ ರೈತರು ಭತ್ತದ ಮೇಲೆ ತಾರಪಲ ಹೊದಿಸಲು ಸಾಧ್ಯವಾಗದೆ ಇದ್ದ ಪರಿಣಾಮವಾಗಿ ಸುಮಾರು ಒಂದು ಸಾವಿರದ ಎಂಟು ನೂರು ಚೀಲದಷ್ಟು ಭತ್ತ ಮಳೆ ನೀರಿನಲ್ಲಿ ನೆನೆದಿದ್ದು ಈಗ ರೈತರು ತೀವ್ರ ಸಂಕಷ್ಟ ಹೆದುರಿಸುವಂತಾಗಿದೆ.
ಈ ಕುರಿತು ರೈತರು ಮಾತನಾಡಿ,ಅಕಾಲಿಕವಾಗಿ ಸುರಿದ ಮಳೆ ನಮ್ಮ ಆಲ್ದಾಳ ಗ್ರಾಮದ ಅನೇಕ ಜನ ರೈತರಿಗೆ ತೀವ್ರ ಹಾನಿಯುಂಟು ಮಾಡಿದೆ.ಸಾಲ ಮಾಡಿ ಹಣ ತಂದು ಬೇಸಾಯ ಮಾಡಿದ್ದು ಇನ್ನೇನು ಉತ್ತಮವಾದ ಧಾರಣಿ ಬಂದರೆ ಭತ್ತ ಮಾರಾಟ ಮಾಡುವ ಉದ್ದೇಶವಿತ್ತು,ಇಂತಹ ಸಂದರ್ಭದಲ್ಲಿ ಮಳೆಯಿಂದ ಈಗ ಸಾವಿರಾರು ಚೀಲ ಭತ್ತ ನೀರಲ್ಲಿ ತೋಯ್ದಿದ್ದರಿಂದ ಭತ್ತ ಹಾಳಾಗಿದೆ.ಅತ್ತ ಸಾಲಗಾರರು ದುಂಬಾಲು ಬೀಳುತ್ತಾರೆ.ಸರಕಾರ ನಮ್ಮ ನೆರವಿಗೆ ಬರಬೇಕು ಎಂದು ವಿನಂತಿಸುತ್ತಿದ್ದಾರೆ.