ಉದ್ಯೋಗ ಖಾತ್ರಿಯಲ್ಲಿ ಉತ್ತಮ ಸಾಧನೆ ಮಾಡಿದ ಪಿಡಿಓ ರಾಜಕುಮಾರಗೆ ಸನ್ಮಾನ

0
16

ಸುರಪುರ: ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡು ತಾಲೂಕಿನ ಆಲ್ದಾಳ ಗ್ರಾಮ ಪಂಚಾಯತಿಯ ಅಭಿವೃಧ್ಧಿ ಅಧಿಕಾರಿ ರಾಜಕುಮಾರ ನಾಯಕ ಅವರಿಗೆ ಸನ್ಮಾನಿಸಲಾಯಿತು.

ನಗರದ ತಾಲೂಕು ಪಂಚಾಯತಿ ಕಾರ್ಯಾಲಯದಲ್ಲಿ ದಲಿತ ಸೇನೆ ತಾಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ ಮತ್ತಿತರೆ ಮುಖಂಡರು ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಕೊರೊನಾ ನಿರ್ಮೂಲನೆಗೆ ಉಪವಾಸ ಮಾಡಿ ಪ್ರಾರ್ಥಿಸಿದ ಅನ್ವರ ಜಮಾದಾರ್

ಈ ಸಂದರ್ಭದಲ್ಲಿ ಮಾತನಾಡಿದ ನಿಂಗಣ್ಣ ಗೋನಾಲ,ರಾಜ್ಯದಲ್ಲಿಯೇ ಉದ್ಯೋಗ ಖಾತ್ರಿ ಸಮರ್ಪಕ ಜಾರಿಗೊಳಿಸುವ ಜೊತೆಗೆ ಆಲ್ದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಲಿಕಾರರಿಗೆ ೧೫೦ ದಿನಗಳ ಕೆಲಸ ನೀಡುವ ಮೂಲಕ ಕಾರ್ಮಿಕರಲ್ಲಿಯೂ ಸಂತಸ ಮೂಡಿಸಿದ ರಾಜಕುಮಾರವರು ರಾಜ್ಯದಲ್ಲಿಯೇ ಉತ್ತಮವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ರಾಜ್ಯ ಪ್ರಶಸ್ತಿಗೆ ಭಾಜನಾರಾಗಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.ಇನ್ನೂ ಹೆಚ್ಚೆಚ್ಚು ಪ್ರಶಸ್ತಿಗಳು ಲಭಿಸುವ ನಿಟ್ಟಿನಲ್ಲಿ ಅವರ ಸೇವೆ ಮುಂದುವರೆಯಲಿ ಎಂದು ಈ ಮೂಲಕ ಹಾರೈಸುವುದಾಗಿ ತಿಳಿಸಿದರು.

ಜೇವರ್ಗಿ 4 ಕಡೆ ಕರೋನಾ ಹೆಲ್ಪ್ ಡೆಸ್ಕ್ ಸ್ಥಾಪನೆ: ವಿನಯ್ ಕುಮಾರ್ ಪಾಟೀಲ್

ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಿಬ್ಬಂದಿಗಳಾದ ವೆಂಕೋಬ ಬಾಕ್ಲಿ ಮತ್ತಿತರರು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭಲ್ಲಿ ಮುಖಂಡರಾದ ಶಿವಣ್ಣ ನಾಗರಾಳ ನಾಗರಾಜ ಗೋಗಿಕೇರಾ ಬನ್ನಪ್ಪ ಕೋನಾಳ ಶಿವರುದ್ರ ಬೋನಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here